ಸಿನಿಮಾ

ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ನಟಿ ವಿಜಯಲಕ್ಷ್ಮಿ ವಿರುದ್ದವೇ ದೂರು ಕೊಟ್ಟ ನಟ..!

By admin

March 12, 2019

ಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಿದ ನಟ ರವಿ ಪ್ರಕಾಶ್ ಅವರ ವಿರುದ್ಧ ನಟಿ ವಿಜಯಲಕ್ಷ್ಮಿ ಲೈಂಗಿಕ ಕಿರುಕುಳ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದರು.

ಈ ಕುರಿತಾಗಿ ನಟ ರವಿಪ್ರಕಾಶ್ ಸ್ಪಷ್ಟನೆ ನೀಡಿದ್ದು, ತಾವು ಯಾವುದೇ ಕಿರುಕುಳ ನೀಡಿಲ್ಲ. ಅವರಿಗೆ ಹಣಕಾಸು ನೆರವು ನೀಡಿ, ಅವರನ್ನು 2  ಬಾರಿ ಭೇಟಿ ಮಾಡಿದ್ದೇನೆ ಹೊರತು, ಯಾವುದೇ ಕಿರುಕುಳ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಇದಾದ ಬಳಿಕ ರವಿಪ್ರಕಾಶ್ ಅವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟಿ ವಿಜಯಲಕ್ಷ್ಮಿ ಮತ್ತು ಅವರ ಸಹೋದರಿ ಉಷಾದೇವಿ ಅವರ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ.

ಚಿಕಿತ್ಸೆಗೆ ಹಣವಿಲ್ಲದೆ ಅವರು ಕಷ್ಟದಲ್ಲಿದ್ದ ಸಂದರ್ಭದಲ್ಲಿ ಹಣಕಾಸಿನ ನೆರವು ನೀಡಿದ್ದೇನೆ. ಆದರೆ, ಅವರು ತಮ್ಮನ್ನು ಅವಹೇಳನ ಮಾಡಿ, ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಂದ ಹಣ ವಾಪಸು ಕೊಡಿಸಬೇಕು. ಮತ್ತು ಅವರು ಕ್ಷಮೆ ಕೇಳಬೇಕೆಂದು ಒತ್ತಾಯಿಸಿ ರವಿಪ್ರಕಾಶ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.