ಸುದ್ದಿ

ಪರೀಕ್ಷೆ ನಡಸೆ ಬೇಕಂದ್ರೆ ವಿದ್ಯಾರ್ಥಿ ಹೆಸರಿನಲ್ಲಿ 50 ಲಕ್ಷ, ಶಿಕ್ಷಕರಿಗೆ 25 ಲಕ್ಷ, ಡೆಪಾಸಿಟ್ ಮಾಡಿ . ವಾಟಾಳ್ ನಾಗರಾಜ್ ಆಕ್ರೋಶ.

By admin

June 11, 2020

ಮಹಾಮಾರಿ ಕೊರೋನಾ ಇರುವ ಸಮಯದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಇನ್ನಿತರೇ ಪರೀಕ್ಷೆಗಳು ಮಾಡಲೇಬೇಕೆಂದರೆ ಪ್ರತಿ ವಿದ್ಯಾರ್ಥಿಗಳ ಹೆಸರಿನಲ್ಲಿ 50 ಲಕ್ಷ ಹಾಗೂ ಪ್ರತಿ ಶಿಕ್ಷಕರಿಗೂ 25 ಲಕ್ಷ ಹಣವನ್ನು ಅವರ ಅಕೌಂಟ್ ಗೆ ಡೆಪಾಸಿಟ್ ಮಾಡಿ ಎಂದು ಕನ್ನಡ ಹೊರಾಟಗಾರ ವಾಟಾಳ್ ನಾಗರಾಜ್ ಅವರು ಹೇಳಿಕೆಯನ್ನು ನೀಡಿದ್ದಾರೆ.

ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವುದರ ವಿರುಧ್ದ ಪ್ರತಿಭಟಿಸಿ, ನಂತರ ಸುದ್ದಿಗಾರರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಕೊರೊನ ಜೊತೆ ಸರಸ ಸರಿಯಿಲ್ಲ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಎಲ್ಲರನ್ನೂ ಪಾಸ್ ಮಾಡಬೇಕು. ಪರೀಕ್ಷೆಯ ಪಾಸ್ ಗಿಂತ ವಿದ್ಯಾರ್ಥಿಗಳ ಜೀವವೇ ಮುಖ್ಯ ಎಂದು ಒತ್ತಾಯಿಸಿದ್ದಾರೆ.

ಶಾಲೆಯ ಪೀಸ್ ಅನ್ನು ಸರ್ಕಾರವೇ ಹೊರಬೇಕು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಮುಖಂಡರು ನಡೆಸುವ ಶಾಲೆಗಳಲ್ಲಿ ಹಣ ವಸೂಲಿ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಪೋಷಕರ ಅತ್ತಿರ ಯಾವುದೇ ರೀತಿ ಶುಲ್ಕ ಪಡೆಯಬಾರದು ಎಂದು ಒತ್ತಾಯಿಸಿ ಗುರುವಾರ ವಿಧಾನಸೌಧದ ಮುಂಭಾಗ ಏಕಾಂಗಿಯಾಗಿ ಮಲಗಿ ಪ್ರತಿಭಟನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.