ಮನುಷ್ಯನಿಗೆ ಯಾವುದೇ ಕಷ್ಟ ಬಂದರು , ರೋಗ ಬಂದರೂ ಮೊದಲು ಪ್ರಾರ್ಥಿಸೋದು ದೇವರನ್ನ. ಎಷ್ಟೇ ದೊಡ್ಡ ವೈದ್ಯರಾದರೂ ತಮ್ಮ ಕೈಯಲ್ಲಿ ಸಾಧ್ಯವಾಗೋದಿಲ್ಲ ಎಂದಾಗ ಇನ್ನು ದೇವರೇ ಕಾಪಾಡ ಬೇಕಷ್ಟೇ ಎಂದು ಕೈ ಚೆಲ್ಲಿಬಿಡುತ್ತಾರೆ. ಮನುಷ್ಯರೂ ಅಷ್ಟೇ ಕೊನೆಯ ಕ್ಷಣದಲ್ಲಿ ಏನಾದರೂ ಚಮತ್ಕಾರ ಆಗುತ್ತದೋ ಎಂದು ದೇವರ ಮೊರೆ ಹೋಗುತ್ತಾರೆ. ದೇವರ ಕೃಪೆಯಿಂದ ಸಾಕಷ್ಟು ಚಮತ್ಕಾರಗಳಾಗಿರುವುದರ ಬಗ್ಗೆ ನೀವು ಕೇಳಿರಬಹುದು. ಅಂತಹದ್ದೇ ಒಂದು ಚಮತ್ಕಾರವನ್ನು ಉಂಟು ಮಾಡುವ ದೇವಸ್ಥಾನ ತುಮಕೂರಿನಲ್ಲಿದೆ. ಜನರು ತಮ್ಮ ಯಾವುದೇ ದೊಡ್ಡ ದೊಡ್ಡ ಕಾಯಿಲೆಗಳಿಗೆ ಗುಣವಾಗಲು ಈ ದೇವರ ಸನ್ನಿಧಿಗೆ ಬರುತ್ತಾರೆ. ಹಾಗಾದರೆ ಬನ್ನಿ ಆ ವಿಶೇಷ ದೇವಾಲಯ ಯಾವುದು ಎನ್ನುವುದನ್ನು ನಾವು ತಿಳಿಯೋಣ.
ಈ ಪುಣ್ಯ ಕ್ಷೇತ್ರ ಇರೋದು ಕರ್ನಾಟಕದಲ್ಲೇ ಅರೆಯೂರು ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ. ಇದೊಂದು ಪ್ರಾಚೀನ ಪುಣ್ಯ ಕ್ಷೇತ್ರಗಳಲ್ಲಿ ಒಂದು. ಆಶ್ಚರ್ಯವೆನಿಸಿದರೂ ಅಗೋಚರ ಶಕ್ತಿ ಇಲ್ಲಿದೆ. ಇಲ್ಲಿನ ಜ್ಯೋತಿರ್ಲಿಂಗದ ದರ್ಶನದಿಂದ ಏಳೇಳು ಜನ್ಮಗಳ ಪಾಪಗಳೂ ನಿವಾರಣೆಯಾಗುವುದಲ್ಲದೆ ಕ್ಯಾನ್ಸರ್ನಂತ ಮಾರಕ ರೋಗಗಳೂ ಕೂಡ ವಾಸಿಯಾಗಿರುವವು. ಈ ಕಲಿಗಾಲದಲ್ಲೂ ಪವಾಡ ಸೃಷ್ಟಿಮಾಡುತ್ತಿರುವ ಹಿಂದೂ ಧಾರ್ಮಿಕ ಕ್ಷೇತ್ರ ತುಮಕೂರು ನಗರಕ್ಕೆ 16 ಕಿ.ಮೀ. ದೂರದಲ್ಲಿರುವ ಅರೆಯೂರು ಗ್ರಾಮದಲ್ಲಿದೆ. ಶ್ರೀ ವೈದ್ಯನಾಥೇಶ್ವರ ಸಕಲ ರೋಗ ರುಜಿನಗಳಿಗೆ ವೈದ್ಯನೆಂಬುದು ಇಲ್ಲಿನ ಪ್ರತೀತಿ.
ಹಲವು ವರ್ಷಗಳ ಇತಿಹಾಸ: ಅರೆಯೂರು ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಿಂದೊಮ್ಮೆ ಎಡೆಯೂರು ಶ್ರೀ ಸಿದ್ದಲಿಂಗೇಶ್ವರರಿಗೆ ಬಿನ್ನಿನಲ್ಲಿ ಹುಣ್ಣಾಗಿತ್ತಂತೆ. ರಾಜ ವೈದ್ಯರಿಂದಲೂ ವಾಸಿಯಾಗದೆ ಸಿದ್ದಲಿಂಗೇಶ್ವರರು ಹಾಸಿಗೆ ಹಿಡಿದಾಗ ವೈದ್ಯನಾಥೇಶ್ವರ ಸ್ವಾಮಿ ಭಿಕ್ಷುಕನ ವೇಷದಲ್ಲಿ ಹೋಗಿ ಸಿದ್ದಲಿಂಗೇಶ್ವರರ ಹುಣ್ಣನ್ನು ತಮ್ಮ ಹಸ್ತ ಸ್ಪರ್ಶದಿಂದ ವಾಸಿಮಾಡಿದರಂತೆ. ಆಗ ಗುಣಮುಖರಾದ ಸಿದ್ದಲಿಂಗೇಶ್ವರರು ತಮ್ಮ ಭಕ್ತರು ನೀಡುವ ಮುಡಿಯ ಅರ್ಧ ಮುಡಿಯನ್ನು ವೈದ್ಯನಾಥೇಶ್ವರ ಸ್ವಾಮಿಗೆ ಅರ್ಪಿಸಿದರಂತೆ.
ಜ್ಯೋತಿರ್ಲಿಂಗದ ದರ್ಶನ ಮಾತ್ರದಿಂದ ಸಕಲ ಪಾಪ: ದುರಿತಗಳು ದೂರವಾಗಿ ಸಕಲಾಭಿಷ್ಠ ನೆರವೇರಿ ಸಾಕ್ಷಾತ್ ಶಿವನ ದರ್ಶನ ಮಾಡಿದ ಪುಣ್ಯ: ಶ್ರೇಯಸ್ಸು ಪ್ರಾಪ್ತಿ ಆಗುವುದೆಂದು ಶಿವಪುರಾಣಗಳಲ್ಲಿ ಮತ್ತು ವೇದಗಳಲ್ಲಿ ಹೇಳಲಾಗಿದೆ. ಈ ಕ್ಷೇತ್ರಕ್ಕೆ ಹಲವು ಹೈಟೆಕ್ ಆಸ್ಪತ್ರೆಗಳಲ್ಲಿ ಹೋದರೂ ಕಾಯಿಲೆ ವಾಸಿಯಾಗದ ರೋಗಿಗಳು ಇಲ್ಲಿಗೆ ಬರುತ್ತಾರೆ. ಅದರಲ್ಲೂ ಕ್ಯಾನ್ಸರ್ನಂತ ಮಾರಕ ರೋಗಗಳು ವೈದ್ಯನಾಥೇಶ್ವರ ಸ್ವಾಮಿಯ ಪ್ರಸಾದ ಮಾತ್ರದಿಂದ ವಾಸಿಯಾಗಿರುವ ಐತಿಹ್ಯವಿದೆ. ಹೀಗೆ ಅನೇಕ ಅರೋಗ್ಯ ಸಮಸ್ಯೆಗಳಿಂದ ಬಳಲುವವರು ವೈದ್ಯನಾಥೇಶ್ವರ ಸ್ವಾಮಿಗೆ ಮೊರೆ ಇಟ್ಟು ಶ್ರೀ ಕ್ಷೇತ್ರಕ್ಕೆ ಬಂದು ಸ್ವಾಮಿ ದರ್ಶನ ಮಾಡಿದ ಮಾತ್ರಕ್ಕೆ ಹುಷಾರಾಗಿರುವ ಉದಾಹರಣೆಗಳು ಸಿಗುತ್ತವೆ.
ಶ್ರೀ ಕ್ಷೇತ್ರ ಹಿಂದೊಮ್ಮೆ ಋಷಿಮುನಿಗಳ, ಸಾಧಕರ ಕರ್ಮಭೂಮಿಯಾಗಿತ್ತು ಎಂದು ಹೇಳಲಾಗುತ್ತದೆ. ದೇವಸ್ಥಾನದ ಕೆರೆಯಂಗಳದಲ್ಲಿ ಪ್ರಶಾಂತ ಸ್ಥಳದಲ್ಲಿ ಶಾಂತಿ-ನೆಮ್ಮದಿ ಸದಾ ನೆಲೆಸಿರುವಂತೆ ಭಾವವಾಗುತ್ತದೆ. ಸಾಮಾನ್ಯವಾಗಿ ಇಂಥ ಪ್ರಶಾಂತ ಪರಿಸರ ಸಾಕಷ್ಟು ರೋಗಗಳನ್ನು ವಾಸಿಮಾಡುವಂತದ್ದಾಗಿದೆ ಎಂದು ವೈದ್ಯರೊಬ್ಬರು ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಾರೆ. ಇದರ ಜೊತೆಗೆ ಇಲ್ಲಿ ಇನ್ನೊಂದು ವಿಶೇಷವಿದೆ. ಮಕ್ಕಳಿಲ್ಲದವರು ದೇವಸ್ಥಾನದಲ್ಲಿ ತಲೆಮೇಲೆ ನೀರನ್ನು ಹಾಕಿಸಿಕೊಂಡು ಒದ್ದೆ ಬಟ್ಟೆಯಲ್ಲಿ ಸ್ವಾಮಿಯ ದೇವಸ್ಥಾನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ 9 ದಿನಗಳ ಕಾಲ ಸ್ವಾಮಿಯ ಸೇವೆ ಮಾಡಿದರೆ ಸುಸಂಸ್ಕೃತ ಮಕ್ಕಳಾಗುತ್ತವೆ ಎಂದು ಹೇಳಲಾಗುತ್ತದೆ.
ಶ್ರೀ ವೈದ್ಯನಾಥೇಶ್ವರಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಕೆರೆಯ ಏರಿಯ ಆಳದಲ್ಲಿ ಶ್ರೀ ಹಾಲು ಮಲ್ಲೇಶ್ವರಸ್ವಾಮಿಯ ಒಂದು ಚಿಕ್ಕದಾದ ದೇವಸ್ಥಾನವಿದೆ. ಇಲ್ಲಿರುವುದು ಮನುಷ್ಯರು ಪ್ರತಿಷ್ಟಾಪಿಸಿದ ಲಿಂಗವಲ್ಲ. ಭೂಮಿಯಲ್ಲೇ ಹುಟ್ಟಿದ ಲಿಂಗು. ಈ ದೇವಸ್ಥಾನದ ಮಹಿಮೆ ಏನೆಂದರೆ ಈ ದೇವಸ್ಥಾನದಲ್ಲಿ ಒಂದು ದೈವಸರ್ಪ ವಾಸಿಸುತ್ತಿದ್ದು ಅದು ಶ್ರೀ ಕ್ಷೇತ್ರವನ್ನು ಕಾಯುತ್ತಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಸರ್ಪವು ಶ್ರೀ ಹಾಲು ಮಲ್ಲೇಶ್ವರಸ್ವಾಮಿ ದೇವಸ್ಥಾನದಿಂದ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ರಾತ್ರಿ ವೇಳೆಯಲ್ಲಿ ಕೆರೆಯ ನೀರಿನ ಮೇಲೆ ಈಜಾಡಿಕೊಂಡು ಬಂದು ಸ್ವಲ್ಪ ಕಾಲ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದ್ದು ಹೋಗುತ್ತದೆ.
ಶ್ರೀ ಶಿರಿಸಿ ಮಾರಿಕಾಂಭ ದೇವಿ ಜ್ಯೋತಿಷ್ಯ ಶಾಸ್ತ್ರಂ
ಜ್ಯೋತಿಷ್ಯ ಮಹರ್ಷಿ ಮಂಜುನಾಥ್ ಭಟ್
ನೀವು ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದೀರಾ…?
ಪ್ರೀತಿಯಲ್ಲಿ ನಂಬಿ ಮೋಸ ಸ್ತ್ರೀ ಮತ್ತು ಪುರುಷ ವಶೀಕರಣ
ಹಣಕಾಸಿನ ತೊಂದರೆ ಭೂಮಿ ವಿಚಾರ ಕೋರ್ಟ್ ಕೇಸ್ ಅನಾರೋಗ್ಯ
ಇನ್ನೂ ನಿಮ್ಮ ಅನೇಕ ಸಮಸ್ಯೆಗಳಿಗೆ 1 ದಿನದಲ್ಲಿ ಪರಿಹಾರ ಶತಸಿದ್ಧ
ನಂಬಿ ಕರೆ ಮಾಡಿ 9900116427