ಬೆಳಗ್ಗೆ ಸಮಯದ ಅಭಾವವಿರುವುದರಿಂದ ರಾತ್ರಿಯೇ ಚಪಾತಿ ಹಿಟ್ಟು ಕಲಸಿಟ್ಟುಕೊಳ್ಳುವುದು ಈಗ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿದೆ. ಕೆಲವರು ಚಪಾತಿ ಹಿಟ್ಟು ಕಲಸಿದರೆ, ಇನ್ನು ಕೆಲವರು ಅಕ್ಕಿ, ಗೋಧಿ, ಜೋಳದ ಹಿಟ್ಟನ್ನು ಕಲಸಿಡುತ್ತಾರೆ. ಆದರೆ ಹೀಗೆ ಕಲಸಿಟ್ಟ ಹಿಟ್ಟನ್ನು ಉಪಯೋಗಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಕೆಲವು ಅಡ್ಡಪರಿಣಾಮಗಳು ಬೀರುತ್ತವೆ, ಅದೇನೆಂದು ನೀವೇ ಓದಿ ನೋಡಿ… ಹಿಟ್ಟಿನಲ್ಲಿ ಬ್ಯಾಕ್ಟೀರಿಯಾಗಳು ಮೃದುವಾದ, ಹಸಿ ಹಿಟ್ಟಿನಲ್ಲಿ ಹುದುಗುವಿಕೆ ಪ್ರಕ್ರಿಯೆಯು ಸಾಮಾನ್ಯ ಹಿಟ್ಟಿಗಿಂತ ಬೇಗನೆ ಪ್ರಾರಂಭವಾಗುತ್ತದೆ. ಇದರಿಂದಾಗಿ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ.
ಈ ಹಿಟ್ಟು ಮಾನವ ದೇಹಕ್ಕೆ ವಿಷಕಾರಿಯಾಗಿದ್ದು, ನೀವು ಇದನ್ನು ಪ್ರತಿದಿನ ಬಳಸಿದರೆ ಅದು ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮಲಬದ್ಧತೆ, ಹೊಟ್ಟೆನೋವು ಗೋಧಿ ಗಟ್ಟಿ ಧಾನ್ಯವಾಗಿದ್ದು, ಇದರ ಹಿಟ್ಟಿನಿಂದ ಮಾಡಿದ ಪದಾರ್ಥಗಳನ್ನು ಸೇವಿಸಿದಾಗ, ಅದು ಹೊಟ್ಟೆಯಲ್ಲಿ ನಿಧಾನವಾಗಿ ಜೀರ್ಣಿಸಿಕೊಳ್ಳಲು ಶುರು ಮಾಡುತ್ತದೆ. ಮಲಬದ್ಧತೆ ಇರುವವರಿಗಂತೂ ಇದನ್ನು ಜೀರ್ಣಿಸಿಕೊಳ್ಳವುದು ಇನ್ನು ಕಷ್ಟವಾಗುತ್ತದೆ. ಉಳಿಸಿಕೊಂಡ ಹಸಿ ಹಿಟ್ಟಿನಿಂದ ರೊಟ್ಟಿಗಳನ್ನು ಮಾಡಿಕೊಂಡು ತಿನ್ನುವುದರಿಂದ ಹೊಟ್ಟೆ ನೋವು, ಮಲಬದ್ಧತೆ ಮತ್ತು ಹೊಟ್ಟೆಯ ತೊಂದರೆ ಉಂಟಾಗುತ್ತದೆ.
ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತದೆ ವಿಜ್ಞಾನಿಗಳ ಪ್ರಕಾರ, ಉಳಿದ ಹಸಿ ಹಿಟ್ಟಿನಲ್ಲಿ ರೊಟ್ಟಿಗಳನ್ನು ಮಾಡಬಾರದು. ಅವರ ಪ್ರಕಾರ, ಹಿಟ್ಟನ್ನು ಕಲಸಿದ ನಂತರ, ಆದಷ್ಟು ಬೇಗ ಬಳಸಬೇಕು. ಏಕೆಂದರೆ ಒಂದು ಗಂಟೆಯ ನಂತರ ಅದರಲ್ಲಿ ರಾಸಾಯನಿಕ ಬದಲಾವಣೆಗಳು ಪ್ರಾರಂಭವಾಗುತ್ತವೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಹಿಟ್ಟಿನಲ್ಲಿ ಚಪಾತಿಗಳು ಅಥವಾ ಪರೋಟಗಳನ್ನು ಹಲವಾರು ದಿನಗಳವರೆಗೆ ನಿರಂತರವಾಗಿ ಸೇವಿಸಿದರೆ, ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾಗುವುದು ಸಹಜ. ನೀವು ನಿಯಮಿತವಾಗಿ ಹಳೆಯ ಹಿಟ್ಟನ್ನು ಬಳಸಿದರೆ ಜೀರ್ಣಾಂಗ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗುತ್ತದೆ. ರೋಗ ನಿರೋಧಕ ಶಕ್ತಿ ಕೂಡ ದುರ್ಬಲವಾಗುತ್ತಾ ಹೋಗುತ್ತದೆ.
ಹಿಟ್ಟನ್ನು ಹೇಗೆ ಬಳಸಬೇಕು? ಕೆಲವರಿಗೆ ಮಾರುಕಟ್ಟೆಗಳು ದೂರವಾಗುವುದರಿಂದ ಹಿಟ್ಟನ್ನು ಸಂಗ್ರಹಿಸುವುದು ಸಹಜ. ಹೀಗೆ ಹಿಟ್ಟನ್ನು ಸಂಗ್ರಹ ಮಾಡುವಾಗ ಜಾಗರೂಕರಾಗಿ ಉಪಯೋಗಿಸಬೇಕು. ಈ ಹಿಟ್ಟನ್ನು ಸುಮಾರು 6 ತಿಂಗಳ ನಂತರ ಬಳಸಬಾರದು. ಸ್ವಚ್ಛವಾಗಿರುವ ಡಬ್ಬಿಯಲ್ಲಿ ಎತ್ತಿಡಬೇಕು. ನೀರಿನ ಕೈಯ್ಯಲ್ಲಿ ಬಳಸದೆ, ಒಣ ಕೈ ಉಪಯೋಗಿಸಿ.