ಈಗಿನ ಕಾಲದಲ್ಲಿ ಪುರುಷರು ತಾನು ಮದುವೆಯಾಗುವ ಹುಡುಗಿಯ ಬಗ್ಗೆ ಸಾಕಷ್ಟು ನಿರೀಕ್ಷೆ ಮತ್ತು ಆಲೋಚನೆಗಳನ್ನ ಇಟ್ಟುಕೊಂಡಿರುತ್ತಾರೆ, ತಾನು ಮದುವೆಯಾಗುವ ಸುಂದರವಾಗಿರಬೇಕು, ಒಳ್ಳೆಯ ಗುಣವನ್ನ ಹೊಂದಿರಬೇಕು ಮತ್ತು ಸಂಪ್ರದಾಯಸ್ಥ ಮನೆಯಿಂದ ಬರಬೇಕು ಎಂದು ಬಹಳ ಪುರುಷರು ತಾನು ಮದುವೆಯಾಗುವ ಹುಡುಗಿಯ ಬಗ್ಗೆ ನಿರೀಕ್ಷೆಯನ್ನ ಹೊಂದಿರುತ್ತಾರೆ. ಇನ್ನು ಮುಖ್ಯವಾಗಿ ಕಾಲಿನ ಎರಡನೆಯ ಬೆರಳು ಉದ್ದವಾಗಿರುವ ಹುಡುಗಿಯರನ್ನ ಮದುವೆಯಾದರೆ ಅವರ ಜೀವನ ಹೇಗಿರುತ್ತದೆ ಮತ್ತು ಕಾಲಿನ ಬೆರಳಿನ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಮುಂದೆ ಮದುವೆಯಾಗಲಿರುವ ಎಲ್ಲಾ ಪುರುಷರಿಗೆ ತಲುಪಿಸಿ.
ಕಾಲಿನ ಹೆಬ್ಬೆರಳುಗಳು ಒಂದಕ್ಕಿಂತ ಒಂದು ಬೇರೆ ಬೇರೆಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ, ಇನ್ನು ಕಾಲಿನ ಎರಡನೆಯ ಎರಡು ಮದ್ಯ ಬೆರಳಿಗಿಂದ ಉದ್ದವಾಗಿದ್ದರೆ ಅಥವಾ ಹೆಬ್ಬೆಟ್ಟು ಉದ್ದವಾಗಿದ್ದರೆ ಏನೆಲ್ಲಾ ಆಗುತ್ತದೆ ಅನ್ನುವ ಸಂಶಯ ಎಲ್ಲರಿಗೂ ಇದ್ದೆ ಇರುತ್ತದೆ. ಯಾರ ಹೆಬ್ಬೆರಳು ಬಹಳಷ್ಟು ಉದ್ದವಾಗಿರುತ್ತದೆಯೋ ಅವರು ಬಹಳ ಬುದ್ಧಿವಂತರಾಗಿರುತ್ತಾರೆ ಮತ್ತು ಅವರಲ್ಲಿ ಸೃಜನಾತ್ಮಕತೆ ಹೆಚ್ಚಾಗಿ ಇರುತ್ತದೆ. ಇನ್ನು ಎಲ್ಲಾ ಬೆರಳುಗಳಿಗಿಂತ ಹೆಬ್ಬೆಟ್ಟು ದೊಡ್ಡದಾಗಿದ್ದರೆ ಅವರ ಬಳಿ ನಾಯಕತ್ವದ ಗುಣ ಹೆಚ್ಚಾಗಿ ಇರುತ್ತದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ ಮತ್ತು ಹೆಬ್ಬೆಟ್ಟಿನ ಪಕ್ಕದ ಬೆರಳು ಉದ್ದವಾಗಿದ್ದರೆ ಅವರು ಬಹಳ ಬುದ್ಧಿವಂತರಾಗಿರುತ್ತಾರೆ ಅಷ್ಟೇ ಅಲ್ಲದೆ ಇವರು ಕೂಡ ನಾಯಕತ್ವದ ಗುಣವನ್ನ ಹೊಂದಿರುತ್ತಾರೆ.
ಇನ್ನು ಈ ಹುಡುಗಿಯರು ತಾನು ಮದುವೆಯಾದ ಹುಡುಗನನ್ನ ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಮತ್ತು ಅವನ ಕಷ್ಟಕ್ಕೆ ಹೆಗಲು ಕೊಟ್ಟು ನಿಲ್ಲುತ್ತಾರೆ. ಇನ್ನು ಹೆಬ್ಬೆಟ್ಟಿನ ಪಕ್ಕದ ಬೆರಳು ಚಿಕ್ಕದಾಗಿದ್ದರೆ ಆ ಹುಡುಗಿಯರು ಬಹಳ ಹೊಂದಾಣಿಕೆಯ ಸ್ವಭಾವನ್ನ ಹೊಂದಿರುತ್ತಾರೆ ಮತ್ತು ತುಂಬಾ ಮೃದು ಸ್ವಭಾವದ ಮನಸ್ಸಿನವರಾಗಿರುತ್ತಾರೆ, ಇನ್ನು ಗುಣಲಕ್ಷಣವನ್ನ ಹೊಂದಿರುವ ಹುಡುಗಿಯರು ತನ್ನ ಅತ್ತೆ ಮತ್ತು ಮಾವನನ್ನ ತನ್ನ ತಂದೆ ತಾಯಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ.
ಇನ್ನು ಇಂತಹ ಮಹಿಳೆಯರು ಜೀವನದಲ್ಲಿ ಗಂಡನ ಜೊತೆ ಸೇರಿ ಏನಾದರು ಸಾಧನೆಯನ್ನ ಮಾಡುತ್ತಾರೆ ಮತ್ತು ತನ್ನ ಪತಿಯ ಸುಖ ಮತ್ತು ದುಃಖದಲ್ಲಿ ಸಮನಾದ ಪಾಲನ್ನ ತೆಗೆದುಕೊಳ್ಳುತ್ತಾರೆ, ಈ ಹುಡುಗಿಯರಿಗೆ ಸರ್ವಸ್ವವೇ ತನ್ನ ಪತಿಯಾಗಿರುತ್ತಾನೆ ಮತ್ತು ತನ್ನ ಪತಿಗಾಗಿ ಜೀವವನ್ನೆ ಕೊಡಲು ಕೂಡ ತಯಾರಿರುತ್ತಾರೆ ಈ ಗುಣಲಕ್ಷಣವನ್ನ ಹೊಂದಿರುವ ಮಹಿಳೆಯರು.
ಇನ್ನು ಈ ಗುಣಲಕ್ಷಣವನ್ನ ಹೊಂದಿರುವ ಹುಡುಗಿಯರನ್ನ ಮದುವೆ ಯಾದರೆ ಅವರು ಜೀವನದಲ್ಲಿ ಏನೇ ಕಷ್ಟ ಬಂದರು ಅದನ್ನ ನಿಭಾಯಿಸಿಕೊಂಡು ಹೋಗುತ್ತಾರೆ ಮತ್ತು ತುಂಬಾ ದೃಢತೆಯಿಂದ ಇರುತ್ತಾರೆ. ಇನ್ನು ಈ ಗುಣಲಕ್ಷಣವನ್ನ ಹೊಂದಿರುವ ಹುಡುಗಿಯರಲ್ಲಿ ಯಾರು ಊಹಿಸಲಾಗದ ಶಕ್ತಿ ಇರುತ್ತದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ ಮತ್ತು ಇಂತಹ ಹುಡುಗಿಯರು ತಾನು ಮದುವೆಯಾಗಿ ಹೋದ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನ ಕೊಡುತ್ತಾರೆ ಮತ್ತು ಅವರ ಕುಟುಂಬವನ್ನ ತನ್ನ ಕುಟುಂಬಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ.