ಸುದ್ದಿ

ಪಿಂಚಣಿಗಾಗಿ ರೈಲ್ವೆ ಸಿಬ್ಬಂದಿ ಮಗ ಲಿಂಗ ಬದಲಿಸಿಕೊಂಡ…!

By admin

June 28, 2019

ರೈಲ್ವೆ ಇಲಾಖೆ ಕೇಂದ್ರ ಸರ್ಕಾರಕ್ಕೊಂದು ಪತ್ರ ಬರೆದಿದೆ. ರೈಲ್ವೆ ಇಲಾಖೆಯಲ್ಲಿ ಕುಟುಂಬ ಪಿಂಚಣಿ ವ್ಯವಸ್ಥೆಯಿದೆ. ಅದಕ್ಕೆ ಕೆಲವೊಂದು ನಿಯಮಗಳಿವೆ. ಆದ್ರೆ ಒಂದು ವರ್ಷದ ಹಿಂದೆ ರೈಲ್ವೆ ಸಿಬ್ಬಂದಿ ಪುತ್ರ ಈಗ ಪುತ್ರಿಯಾಗಿರುವ ವ್ಯಕ್ತಿ ಕುಟುಂಬ ಪಿಂಚಣಿಗಾಗಿ ಪತ್ರ ಬರೆದಿದ್ದಾನೆ. ಇದೇ ವಿಚಾರ ಸದ್ಯ ಕೇಂದ್ರದ ಮೆಟ್ಟಿಲೇರಿದೆ.

2017ರಲ್ಲಿ ರೈಲ್ವೆ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಅವ್ರ 32 ವರ್ಷದ ಮಗ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಾಸ್ತವವಾಗಿ ಸಿಬ್ಬಂದಿ ಹಣವನ್ನೇ ಕುಟುಂಬ ಆಶ್ರಯಿಸಿಕೊಂಡಿದ್ದರೆ ಮಾತ್ರ ಪಿಂಚಣಿ ನೀಡಲಾಗುತ್ತದೆ. 25 ವರ್ಷದೊಳಗಿನ ಮದುವೆಯಾಗದ ಹೆಣ್ಣು ಮಗಳು,

ವಿಚ್ಛೇದನ ಪಡೆದ ಹೆಣ್ಣು ಮಗಳು ಅಥವಾ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕೆಲಸವಿಲ್ಲದ ಮಗನಿಗೆ ಮಾತ್ರ ಪಿಂಚಣಿ ನೀಡಲಾಗುತ್ತದೆ.ಆದ್ರೆ ಇದು ವಿಚಿತ್ರ ಪ್ರಕರಣವಾಗಿದೆ. ಸಿಬ್ಬಂದಿ ಬದುಕಿರುವಾಗಲೇ ಮಗ, ಹೆಣ್ಣು ಮಕ್ಕಳಂತೆ ಜೀವನ ನಡೆಸುತ್ತಿದ್ದನಂತೆ. ಈಗ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾನೆ. ನಾನೀಗ ಹೆಣ್ಣು. ಮದುವೆಯಾಗಿಲ್ಲ.

ಪಿಂಚಣಿ ನೀಡಿ ಎಂದು ಅರ್ಜಿ ಸಲ್ಲಿಸಿದ್ದಾನೆ. 160 ವರ್ಷಗಳ ಇತಿಹಾಸದಲ್ಲಿ ಇದು ಮೊದಲ ಪ್ರಕರಣ. ರೈಲ್ವೆ ಇಲಾಖೆ ನಿಯಮದಲ್ಲಿ ಈ ವಿಷ್ಯ ಪ್ರಸ್ತಾಪವಾಗಿಲ್ಲ. ಹಾಗಾಗಿ ಇಲಾಖೆ ಕೇಂದ್ರಕ್ಕೆ ಹೆಚ್ಚಿನ ಜವಾಬ್ದಾರಿ ನೀಡಿದೆ.