ಇದುವರೆಗೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಅಲ್ಪ ಮೊತ್ತದ ದಂಡ ಪಾವತಿಸಿ ಪಾರಾಗುತ್ತಿದ್ದ ವಾಹನ ಸವಾರರಿಗೆ ಹೊಸ ವರ್ಷದಿಂದ ಶಾಕ್ ನೀಡಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ.
ಈಗಿರುವ ದಂಡದ ಮೊತ್ತವನ್ನು ಭಾರಿ ಏರಿಕೆ ಮಾಡುವ ಕುರಿತು ಸಾರಿಗೆ ಇಲಾಖೆ, ಪ್ರಸ್ತಾವನೆಯೊಂದನ್ನು ಗೃಹ ಇಲಾಖೆಗೆ ಕಳುಹಿಸಿಕೊಟ್ಟಿದೆ ಎಂದು ಹೇಳಲಾಗಿದ್ದು, ಇದಕ್ಕೆ ಗ್ರೀನ್ ಸಿಗ್ನಲ್ ಕೂಡಾ ಸಿಕ್ಕಿದೆ ಎನ್ನಲಾಗಿದೆ.
ಈಗ ದಂಡದ ಮೊತ್ತ ಕಡಿಮೆ ಇರುವ ಕಾರಣ ವಾಹನ ಸವಾರರು ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಕಾರಣ ಈ ಕ್ರಮಕ್ಕೆ ಮುಂದಾಗಲಾಗಿದೆ.
ಯಾವುದಕ್ಕೆ ಎಷ್ಟು ದಂಡ ಗೊತ್ತಾ..?
ಪ್ರಸ್ತಾವಿತ ತಂಡದ ಮೊತ್ತದ ಪ್ರಕಾರ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ ಗೆ 1,000 ರೂ., ಡಿಎಲ್ ಇಲ್ಲದೆ ವಾಹನ ಚಾಲನೆ ಮಾಡಿದರೆ 500 ರಿಂದ 1,500 ರೂ., ಸಾರಿಗೆ ವಾಹನಗಳಲ್ಲಿ ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡಿದರೆ 500 ರಿಂದ 1,000 ರೂ.,
ವಿಮೆ ಇಲ್ಲದ ವಾಹನಗಳಿಗೆ 1000 ರೂ., ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದರೆ 1000 ರಿಂದ 2000 ರೂ., ವೇಗದ ಚಾಲನೆಗೆ 400 ರೂ., ರಿಜಿಸ್ಟ್ರೇಷನ್ ಮಾಡಿಸದೆ ವಾಹನ ಚಾಲನೆ ಮಾಡಿದರೆ 5000 ರಿಂದ 10 ಸಾವಿರ ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ.