ನಮ್ಮ ಸುರಕ್ಷತೆಗೋಸ್ಕರ ಟ್ರಾಫಿಕ್ ರೂಲ್ಸ್ ಗಳನ್ನು ಪಾಲಿಸಿ ನಾವು ವಾಹನ ಚಲಾಯಿಸಬೇಕಾಗುತ್ತದೆ. ಆದರೆ ಕೆಲವೊಂದು ಸಮಯಗಳಲ್ಲಿ ಮಾತ್ರ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸದೇ ಬೇರೆ ವಿದಿಯೇ ಇಲ್ಲ. ಇದೇ ರೀತಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿಧ್ಯಾರ್ಥಿಯೊಬ್ಬಳು ಪರೀಕ್ಷೆಗೆ ತಡವಾಗುತ್ತದೆ ಎಂಬ ಕಾರಣದಿಂದ ರಸ್ತೆ ನಿಯಮ ಉಲ್ಲಂಘಿಸಿ ಗಾಡಿ ಚಲಾಯಿಸಿದ ಕಾರಣ ಪೊಲೀಸರು ತಡೆದಿದ್ದಾರೆ. ಈ ಘಟನೆ ಬೆಳಗಾವಿಯಲ್ಲಿ ನಡೆದಿದ್ದು ಪರೀಕ್ಷೆಗೆ ವಿಳಂಬವಾಗುತ್ತದೆ ಎಂಬ ಕಾರಣದಿಂದ ಓನ್ ವೇನಲ್ಲಿ ಬೈಕ್ ಚಲಾಯಿಸಿಕೊಂಡು ಹೋಗಿದ್ದಾಳೆ.
ಇದನ್ನು ಗಮನಿಸಿದ ರಸ್ತೆ ಸಂಚಾರ ಪೊಲೀಸರು ಆ ವಿಧ್ಯಾರ್ಥಿನಿಯನ್ನು ತಡೆದಿದ್ದಾರೆ. ಆಕೆ ಪರೀಕ್ಷೆಗೆ ತಡವಾಗುತ್ತೆ ಎಂಬ ಕಾರಣದಿಂದ ಒನ್ ವೇ ರಸ್ತೆಯಲ್ಲಿ ಬಂದಿದ್ದಾಗಿ ಹೇಳುತ್ತಾಳೆ. ಆದರೂ ಪೋಲೀಸಪ್ಪ ಬೈಕ್ ನ ದಾಖಲಾತಿಗಳನ್ನು ತೋರಿಸಿ, ಫೈನ್ ಕಟ್ಟುವಂತೆ ಆಕೆಗೆ ಹೇಳಿದ್ದಾರೆ.
ಅದೇ ವೇಳೆ ಅಲ್ಲೇ ಇದ್ದ ಸ್ಥಳೀಯರು ಸುತ್ತುವರಿದು ಆಕೆ ಪರೀಕ್ಷೆಗೋಸ್ಕರ ಒನ್ ವೇ ರಸ್ತೆಯಲ್ಲಿ ಬಂದಿದ್ದಾರೆ. ಆಕೆಯನ್ನು ಹೋಗಲು ಬಿಡಿ ಎಂದು ಹೇಳಿದ್ದಾರೆ. ನಂತರ ಅಲ್ಲಿಗೆ ಬಂದ ಟ್ರಾಫಿಕ್ ಪೋಲಿಸ್ ಇನ್ ಪೆಕ್ಟರ್ ರವರು ಆ ವಿದ್ಯಾರ್ಥಿನಿಯ ಪರೀಕ್ಷಾ ಹಾಲ್ ಟಿಕೆಟ್ ನೋಡಿ ಪರಿಶಿಲಿಸಿದ್ದಾರೆ.
ನಂತರ ತಡಮಾಡದ ಪೋಲಿಸ್ ಇನ್ ಪೆಕ್ಟರ್ ಈ ವಿದ್ಯಾರ್ಥಿನಿಯನ್ನು ಆಕೆಯ ಕಾಲೇಜ್ ಹತ್ತಿರ ಬಿಟ್ಟು ಬರುವಂತೆ ಸೂಚನೆ ಕೊಟ್ಟಿದ್ದು, ಕಾನಿಸ್ಟೇಬಲ್ ಅವ್ವರು ಆಕೆಯನ್ನು ಸರಿಯಾದ ಸಮಯಕ್ಕೆ ಕಾಲೇಜಿಗೆ ಬಿಟ್ಟು ಬಂದಿದ್ದಾರೆ. ತಮ್ಮ ಕರ್ತವ್ಯದ ಜೊತೆಗೆ ವಿದ್ಯಾರ್ಥಿನಿಯ ಭವಿಷ್ಯಕ್ಕೂ ತೊಂದರೆಯಾಗದಂತೆ ಕಾರ್ಯನಿರ್ವಹಿಸಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ