ಸಂಚಾರಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಲವು ಮಂದಿ, ಪೊಲೀಸ್, ಪ್ರೆಸ್ ಮತ್ತು ಜಡ್ಜ್ ಹಾಗೂ ಎಂಎಲ್ ಎ ಎಂಬ ಬರಹವಿರುವ ಸ್ಟಿಕ್ಕರ್ ಅಂಟಿಸಿಕೊಳ್ಳವುದು ಸಾಮಾನ್ಯ, ಆದರೆ ಇಲ್ಲೊಬ್ಬ ನಂಬರ್ ಪ್ಲೇಟ್ ಬದಲಿಸಿಕೊಂಡಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ಎಪಿ ಸಿಎಂ ಜಗನ್ ಎಂಬ ನಂಬರ್ ಪ್ಲೇಟ್ ಅನ್ನು ತನ್ನ ಕಾರಿನ ಹಿಂದೆ ಮುಂದೆ ಅಂಟಿಸಿಕೊಂಡಿದ್ದ, ಅದುವೇ ಕಬ್ಬಿಣದ ನಂಬರ್ ಪ್ಲೇಟ್ ಫಿಕ್ಸ್ ಮಾಡಿಸಿಕೊಂಡು ಸುತ್ತಾಡುತ್ತಿದ್ದನು,
ಆದರೆ ಅಕ್ಟೋಬರ್ 19 ರಂದು ಆತನ ನಸೀಬು ಕ್ಟೆಟ್ಜಿತ್ತು, ಸಂತಾರಿ ಪೊಲೀಸರು ದೈನಂದಿನ ಚೆಕ್ಕಿಂಗ್ ಗೆ ತೆರಳಿದ್ದವರಿಗೆ ಆರೋಪಿ ಸಿಕ್ಕಿ ಬಿದ್ದಿದ್ದಾನೆ, ಅಕ್ಟೋಬರ್ 19 ರಂದು ಆತ ಸಿಕ್ಕಿಬಿದ್ದಿದ್ದು ಸೋಮವಾರ ಬೆಳಕಿಗೆ ಬಂದಿದೆ.
ಹರಿ ರಾಕೇಶ್ ಎಂಬಾತ ಸಿಕ್ಕಿಬಿದ್ದಿದ್ದು ಈತ ಆಂಧ್ರ ಪ್ರದೇಶ ಗೋದಾವರಿ ಜಿಲ್ಲೆಯವನಾಗಿದ್ದಾನೆ, ಟೋಲ್ ಹಣ ಹಾಗೂ ಟ್ಯಾಕ್ಸ್ ಕಟ್ಟಲು ಇಷ್ಟವಿಲ್ಲದೇ ಎಪಿ ಸಿಎಂ ಜಗನ್ ಎಂದು ನಂಬರ್ ಪ್ಲೇಟ್ ಬಳಸಿದ್ದಾಗೆ ತಿಳಿಸಿದ್ದಾನೆ, ಪೊಲೀಸರು ಆತನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ