ಸುದ್ದಿ

ವಿಶ್ವ ತಂಬಾಕು ದಿನ 2019, ನೀವು ಅತೀ ಮುಖ್ಯವಾಗಿ ತಿಳಿಯಲೇಬೇಕಾದ ವಿಚಾರಗಳು…!

By admin

May 31, 2019

ವಿಶ್ವ ಆರೋಗ್ಯ ಸಂಸ್ಥೆಯು ಮೇ 31ರಂದು ವಿಶ್ವ ತಂಬಾಕು ದಿನವನ್ನಾಗಿ ಆಚರಣೆ ಮಾಡುತ್ತದೆ. ತಂಬಾಕು ಬಳಕೆ ಮತ್ತು ಧೂಮಪಾನದಿಂದ ಆಗುವಂತಹ ಹಾನಿ ಬಗ್ಗೆ ತಿಳಿಸಲು ಈ ವಿಶ್ವ ತಂಬಾಕು ದಿನವನ್ನು ಆಚರಿಸಲಾಗುತ್ತದೆ. ತಂಬಾಕು ಸೇವನೆಯಿಂದ ದೇಹಕ್ಕೆ ಆಗುವಂತಹ ಹಾನಿಯನ್ನು ಈ ವೇಳೆ ಜನರಿಗೆ ವಿವರಿಸಲಾಗುತ್ತದೆ. ಇದರಿಂದ ಅವರು ತಂಬಾಕು ಸೇವನೆ ಕಡಿಮೆ ಮಾಡಲಿ ಮತ್ತು ಧೂಮಪಾನ ಮಾಡುವ ಜನರಿಂದಲೂ ದೂರವಿರಲಿ ಎನ್ನುವುದು ಇದರ ಉದ್ದೇಶವಾಗಿದೆ. ಪ್ರತೀ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ಹೊಸ ಧ್ಯೇಯ ವಾಕ್ಯದೊಂದಿಗೆ ವಿಶ್ವದ ಯಾವುದಾದರೂ ಒಂದು ಭಾಗದಲ್ಲಿ ತಂಬಾಕಿನಿಂದ ಆಗುವಂತಹ ಹಾನಿಯ ಬಗ್ಗೆ ಜಾಗೃತಿ ಮೂಡಿಸುವುದು. ಈ ವರ್ಷದ ಧ್ಯೇಯ ವಾಕ್ಯವೆಂದರೆ ತಂಬಾಕು ಮತ್ತು ಶ್ವಾಸಕೋಶದ ಆರೋಗ್ಯ. ಈ ವರ್ಷದ ಧ್ಯೇಯ ವಾಕ್ಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಈ ರೀತಿಯಾಗಿ ವಿವರ ನೀಡುವುದು ತಂಬಾಕು ಸೇವನೆಯಿಂದಾಗಿ ಶ್ವಾಸಕೋಶದ ಮೇಲೆ ಆಗುವಂತಹ ಹಾನಿ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ತಂಬಾಕಿನಿಂದಾಗಿ ದೀರ್ಘಕಾಲಿಕ ಉಸಿರಾಟದ ಸಮಸ್ಯೆ ಮತ್ತು ಕ್ಯಾನ್ಸರ್ ಕೂಡ ಬರಬಹುದು ಶ್ವಾಸಕೋಶವು ದೇಹಕ್ಕೆ ಕೆಲವೊಂದು ಪ್ರಮುಖ ಕಾರ್ಯಗಳಲ್ಲಿ ದೇಹಕ್ಕೆ ನೆರವಾಗುವುದು.

ತಂಬಾಕು ಸೇವನೆಯಿಂದ ಆಗುವ ಹಾನಿಕಾರಕ ಪರಿಣಾಮಗಳು ತಂಬಾಕು ಸೇವನೆಯನ್ನು ಆದಷ್ಟು ಮಟ್ಟಿಗೆ ಕಡೆಗಣಿಸುವುದು ತುಂಬಾ ಒಳ್ಳೆಯದು. ಇದರಿಂದಾಗಿ ಹಲವಾರು ರೀತಿಯ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಮತ್ತು ಕ್ಯಾನ್ಸರ್ ಬರಬಹುದು.ಶ್ವಾಸಕೋಶದ ಕ್ಯಾನ್ಸರ್ ಧೂಮಪಾನದಿಂದಾಗಿ ಶ್ವಾಸಕೋಶದ ಕ್ಯಾನ್ಸರ್ ಬರುವಂತಹ ಸಾಧ್ಯತೆಯು ತುಂಬಾ ಹೆಚ್ಚಾಗಿರುವುದು. ನೀವು ಚೈನ್ ಸ್ಮೋಕರ್ ಆಗಿದ್ದರೆ ಆಗ ಧೂಮಪಾನ ಬಿಡಲೇಬೇಕು. ಬೇರೆಯವರು ಸೇವಿಸಿದ ಸಿಗರೇಟಿನ ಹೊಗೆ ಕೂಡ ಹಾನಿಕಾರಕ. ಹೀಗೆ ಹೊಗೆ ಸೇವಿಸಿದರೆ ಅದರಿಂದಲೂ ಶ್ವಾಸಕೋಶದ ಕ್ಯಾನ್ಸರ್ ಬರುವುದು.

ದೀರ್ಘಕಾಲಿಕ ಉಸಿರಾಟದ ಕಾಯಿಲೆ ಧೂಮಪಾನದಿಂದಾಗಿ ನಿಮಗೆ ದೀರ್ಘಕಾಲಿಕ ಉಸಿರಾಟದ ಸಮಸ್ಯೆಯು ಜೀವಮಾನವಿಡಿ ಕಾಡಬಹುದು. ತುಂಬಾ ಸಣ್ಣ ವಯಸ್ಸಿನಲ್ಲಿ ಧೂಮಪಾನ ಮಾಡಲು ಆರಂಭಿಸಿದ್ದವರಲ್ಲಿ ಈ ಸಮಸ್ಯೆಯು ಅತಿಯಾಗಿ ಕಾಡುವುದು.ಬೇರೆಯವರು ಸೇದಿ ಬಿಟ್ಟ ಹೊಗೆ ನೀವು ಧೂಮಪಾನ ಮಾಡದರೆ ಇದ್ದರೂ ಕೆಲವೊಂದು ಸಲ ಬೇರೆಯವರು ಸೇದಿ ಬಿಟ್ಟ ಹೊಗೆಯಿಂದಾಗಿ ಶ್ವಾಸಕೋಶದ ಸಮಸ್ಯೆ ಕಾಡಬಹುದು. ನಿಮ್ಮ ಸುತ್ತಲು ದಿನವಿಡಿ ಯಾರಾದರೂ ಧೂಮಪಾನ ಮಾಡುತ್ತಲಿದ್ದರೆ ಆಗ ಇದರಿಂದ ನಿಮಗೆ ಶ್ವಾಸಕೋಶದ ಕಾಯಿಲೆಗಳು ಬರುವಂತಹ ಸಾಧ್ಯತೆಯು ಅತಿಯಾಗಿ ಇರುವುದು. ಮಕ್ಕಳು ಮತ್ತು ಸಣ್ಣ ಮಕ್ಕಳಿಗೆ ಇದು ತುಂಬಾ ಅಪಾಯಕಾರಿ. ಇದರಿಂದ ನಿಮ್ಮ ಸಂಬಂಧಿ ಅಥವಾ ಸ್ನೇಹಿತರಲ್ಲಿ ಧೂಮಪಾನ ಮಾಡದೆ ಇರಲು ಹೇಳಿ.

ಕ್ಷಯರೋಗಿಗಳ ಪರಿಸ್ಥಿತಿ ಮತ್ತಷ್ಟು ಕೆಡುವುದು. ಕ್ಷಯರೋಗವು ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದು ಮತ್ತು ಧೂಮಪಾನ ಅಥವಾ ಬೇರೆಯವರು ಸೇದಿ ಬಿಟ್ಟು ಹೊಗೆಯಿಂದ ಕ್ಷಯ ರೋಗಿಗಳ ಪರಿಸ್ಥಿತಿಯು ಮತ್ತಷ್ಟು ಕೆಡುವುದು. ಇದರಿಂದಾಗಿ ಉಸಿರಾಟದ ಸಮಸ್ಯೆಯು ಕಾಣಿಸುವುದು. ಧೂಮಪಾನದಿಂಹೆಚ್ಚಿರುವ ವಾಯು ಮಾಲಿನ್ಯ ಧೂಮಪಾನದಿಂದಾಗಿ ವಾತಾವರಣದ ಮೇಲೆ ಕೂಡ ಪರಿಣಾಮ ಬೀಋಉವುದು. ಧೂಮಪಾಣ ಮಾಡುವ ಕಾರಣದಿಂದಾಗಿ ವಾಯು ಮಾಲಿನ್ಯಕ್ಕೆ ದೇಣಿಗೆ ನೀಡಿದಂತೆ ಆಗುವುದು. ಇದರಿಂದ ಮನೆಯೊಳಗೆ ವಾಯು ಮಾಲಿನ್ಯ ಹೆಚ್ಚಾಗುವುದು. ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ಸೇವನೆ ಕಡಿಮೆ ಮಾಡಲು ಹಲವಾರು ರೀತಿಯ ಅಭಿಯಾನಗಳನ್ನು ಕೈಗೊಂಡಿದೆ. ಬೇರೆ ಸಂಸ್ಥೆಗಳು ಕೂಡ ಇದರಿಂದ ಪ್ರೇರಣೆ ಪಡೆದು ಕೆಲಸ ಮಾಡುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯು ತಂಬಾಕು ಸೇವನೆ ವಿರುದ್ಧ ಹೋರಾಡಬೇಕು.