ತಲೆ ಬೋಳಿಸುದನ್ನ ಕೆಲವು ಹರಕೆ ಎಂದು ಹೇಳಿದರೆ ಇನ್ನೂ ಕೆಲವರು ಇದನ್ನ ಬಿಸಿನೆಸ್ ಎಂದು ಹೇಳುತ್ತಾರೆ, ಹಾಗಾದರೆ ತಿರುಪತಿ ತಿಮ್ಮಪ್ಪನಿಗೆ ಮೂಡಿ ಕೊಡುವುದು ಯಾಕೆ ಮತ್ತು ಈ ಮೂಡಿ ಕೊಡುವ ಹರಕೆಯ ಹಿಂದೆ ಇರುವ ರೋಚಕ ಸತ್ಯ ಏನು ಎಂದು ತಿಳಿದರೆನೀವು ಆಶ್ಚರ್ಯ ಪಡುತ್ತೀರಾ. ಹಾಗಾದರೆ ಮೂಡಿ ಕೊಡುವ ಹಿಂದೆ ಇರುವ ರೋಚಕ ಸತ್ಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹಿಂದೂಗಳ ಹಲವು ದೇವಸ್ಥಾನಗಳಲ್ಲಿ ಮುದ್ದಿ ಕೊಡುವ ಪದ್ಧತಿಇದೆ ಮತ್ತು ಅದೇ ರೀತಿಯಲ್ಲಿ ತಿರುಪತಿಯಲ್ಲಿ ಕೂಡ ದೇವರಿಗೆ ಮೂಡಿಕೊಡಲಾಗುತ್ತದೆ, ಇನ್ನೂ ತಿರುಪತಿಯಲ್ಲಿ ಕೊಡುವ ಮೂಡಿ ಹರಕೆಗೂ ಮತ್ತು ತಿಮ್ಮಪನಿಗೂ ನೇರವಾದ ಸಂಬಂಧ ಇದೆ ಸ್ನೇಹಿತರೆ.ಪುರಾಣಗಳ ಪ್ರಕಾರ ತಿರುಪರಿ ಬೆಟ್ಟದ ಒಂದು ಹುತ್ತದ ಒಳಗೆ ಶ್ರೀನಿವಾಸ ಬಳಲಿ ಬಾಯಾರಿಕೆಯಿಂದ ಕುಳಿತಿರುತ್ತಾರೆ, ಇನ್ನೂ ಇದನ್ನ ಕಂಡಒಂದು ಶ್ರೀನಿವಾಸನಿಗೆ ಹಾಲನ್ನ ಎರೆಯುತ್ತದೆ. ಇನ್ನೂಆ ಹಸು ಚೋಳ ಅರಸನದಾಗಿತ್ತು ಮತ್ತು ಈ ಹಸುಗಳನ್ನ ಒಬ್ಬ ಧನ ಕಾಯುವವನನ್ನ ನೇಮಕಮಾಡಲಾಗಿತ್ತು, ಇನ್ನು ನೇಮಕ ಮಾಡಿದಆ ವ್ಯಕ್ತಿ ಗಮನಿಸಿರುವಂತೆ ಕಾಮದೇನು ಅನ್ನುವ ಈ ಹಸುಯಾವಾಗಲು ಹಾಲನ್ನ ಕೊಡುತ್ತಿರಲಿಲ್ಲ ಮತ್ತು ಇದರಿಂದ ಆ ಹಸು ಕಾಯುವವನಿಗೆ ಅನುಮಾನ ಶುರುವಾಗುತ್ತದೆ.
ಅನುಮಾನ ಬಂದ ಕಾರಣ ಮಾರನೆಯ ದಿನ ಆ ಹಸುವಾನ್ನ ಹಿಂಬಾಲಿಸುತ್ತಾನೆ ಆ ಧನ ಕಾಯುವವನು, ಇನ್ನೂ ಆ ಸಮಯದಲ್ಲಿ ಶ್ರೀನಿವಾಸನಿಗೆ ಹಾಲನ್ನ ಕೊಡುತ್ತಿರುವುದನ್ನ ಆ ಧನ ಕಾಯುವವನು ತನ್ನ ಬಳಿ ಇದ್ದ ಕೊಡಲಿಯಿಂದ ಆ ಹಸುವಿಗೆ ಹೊಡೆಯುತ್ತಾನೆ, ಆದರೆ ಹಸುವಿಗೆ ಹೊಡೆದ ಏಟು ತಪ್ಪಿ ಶ್ರೀನಿವಾಸನಿಗೆ ಬೀಳುತ್ತದೆ. ಇನ್ನೂ ಕೊಡಲಿ ಪೆಟ್ಟು ತಲೆಗೆ ಬಿದ್ದ ಕಾರಣ ಆ ಭಾಗದಲ್ಲಿ ಇದ್ದ ಕೂದಲುಗಳು ಹೋಗುತ್ತದೆ, ಇನ್ನೂ ಶ್ರೀನಿವಾಸನ ಕೂದಲು ಹೋಗಿರುವುದನ್ನ ನೋಡಿದ ಶ್ರೀನಿವಾಸನ ಪರಮಭಕ್ತೆ ನೀಲಾದೇವಿ ತನ್ನ ಕೂದಲನ್ನ ಕತ್ತರಿಸಿ ಶ್ರೀನಿವಾಸನಿಗೆ ಜೋಡಿಸುತ್ತಾಳೆ. ಇನ್ನೂ ನೀಲಾದೇವಿಯ ಭಕ್ತಿ ಮತ್ತು ಪ್ರೀತಿಗೆ ಮೆಚ್ಚಿದ ಶ್ರೀನಿವಾಸನು ನೀಲ ದೇವಿಗೆ ಒಂದು ವರವನ್ನ ಕೊಡುತ್ತಾನೆ.
ಇನ್ನೂ ಆ ವರದ ಪ್ರಕಾರ ಕಲಿಯುಗದಲ್ಲಿ ಭಕ್ತರು ನನ್ನ ಕ್ಷೇತ್ರಕ್ಕೆ ಬಂದು ಮುಡಿಯನ್ನ ನೀಡುತ್ತಾರೆ ಮತ್ತು ಭಕ್ತರು ನೀಡುವ ಮುಡಿಗಳು ನಿನ್ನ ಮೂಲಕನೇ ನನಗೆ ಅರ್ಪಣೆ ಆಗಲಿ ಎಂದು ಶ್ರೀನಿವಾಸ ನೀಲಾದೇವಿಗೆ ವರವನ್ನ ಕೊಡುತ್ತಾನೆ. ಇನ್ನೂ ಈ ಹಿನ್ನಲೆಯಲ್ಲಿ ಭಕ್ತರು ಈಗಲೂ ಕೂಡ ತಲೆ ಕೂದಲನ್ನ ಶ್ರೀನಿವಾಸನಿಗೆ ಅರ್ಪಣೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ, ಇನ್ನೂ ನೀಲಾದೇವಿ ಜೋಡಿಸಿದ ಕೂದಲುಗಳೇ ಈಗಲೂ ತಿಮ್ಮಪ್ಪನ ತಲೆಯ ಹಿಂಭಾಗದಲ್ಲಿ ಇದೆ, ಇನ್ನೂ ದೇವಸ್ಥಾನದ ಆರಂಭದಲ್ಲಿ ಮಹಾದ್ವಾರದ ಬಲಗಡೆ ತಿಮ್ಮಪ್ಪನ ತಲೆಯಲ್ಲಿ ಗಾಯದ ಗುರುತು ಇದೆಯಂತೆ ಮತ್ತು ಈ ಕಾರಣಕ್ಕೆ ಶ್ರೀನಿವಾಸಕ್ಕೆ ಆ ತಲೆಯ ಭಾಗಕ್ಕೆ ಗಂಧವನ್ನ ಹಚ್ಚುವ ಸಂಪ್ರಾಯದ ಕೂಡ ಇದೆ. ಸ್ನೇಹಿತರೆ ಮೂಡಿ ಕೊಡುವ ಹಿಂದೆ ಇರುವ ಈ ಸತ್ಯ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.