ಉಪಯುಕ್ತ ಮಾಹಿತಿ

ತಿಗಣೆಗಳನ್ನು ನಾಶಪಡಿಸುವ ಹತ್ತು ಸುಲಭ ಉಪಾಯಗಳು ಇಲ್ಲಿದೆ ನೋಡಿ.

By admin

December 06, 2019

ತಿಗಣೆಯು ಸಾಮಾನ್ಯವಾಗಿ ರಾತ್ರಿ ವೇಳೆ ಮನುಷ್ಯರ ರಕ್ತವನ್ನು ಕುಡಿಯುವ ಒಂದು ಬಗೆಯ ಕೀಟ. ಇದರ ಕಡಿತವು ದದ್ದುಗಳು, ಮಾನಸಿಕ ಪರಿಣಾಮಗಳು ಮತ್ತು ಅಲರ್ಜಿ ಲಕ್ಷಣಗಳು ಸೇರಿದಂತೆ ಅನೇಕ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು. ತಿಗಣೆ ಕಡಿತವು ಅಗೋಚರ ಬೊಕ್ಕೆಗಳಿಂದ ಹಿಡಿದು ಎದ್ದುಕಾಣುವ ಬೊಕ್ಕೆಗಳವರೆಗೆ ಚರ್ಮದ ಬದಲಾವಣೆಗಳಿಗೆ ಕಾರಣವಾಗಬಹುದು. ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ ನಿಮಿಷಗಳು ಅಥವಾ ದಿನಗಳವರೆಗೆ ಬೇಕಾಗಬಹುದು. ತುರಿಕೆಯು ಸಾಮಾನ್ಯವಾಗಿರುತ್ತದೆ, ಮತ್ತು ಕೆಲವರಿಗೆ ಸುಸ್ತು ಎನಿಸಬಹುದು ಅಥವಾ ಜ್ವರ ಇರಬಹುದು. ಸಾಮಾನ್ಯವಾಗಿ, ಶರೀರದ ತೆರೆದ ಪ್ರದೇಶಗಳು ಬಾಧಿತವಾಗುತ್ತವೆ ಮತ್ತು ಸಾಲಾಗಿ ಮೂರು ಕಡಿತಗಳು ಉಂಟಾಗುತ್ತವೆ. ತಿಗಣೆ ಕಡಿತಗಳು ಯಾವುದೇ ಸಾಂಕ್ರಾಮಿಕ ರೋಗವನ್ನು ಹರಡುತ್ತವೆಂದು ತಿಳಿದುಬಂದಿಲ್ಲ.

1. ಪ್ರತಿಯೊಂದು ವಸ್ತುವನ್ನು ವ್ಯಾಕ್ಯೂಮ್ ಮಾಡಿ. ಇದರಿಂದ ಎಲ್ಲಾ ತಿಗಣಿಗಳು ಅಲ್ಲದಿದ್ದರೂ ಸ್ವಲ್ಪವಾದರೂ ಸಾಯುತ್ತದೆ. ಪೀಠೋಪಕರಣ, ಮ್ಯಾಟ್, ಕಾರ್ಪೆಟ್, ಕರ್ಟೆನ್ ಇತ್ಯಾದಿಗಳನ್ನು ಸರಿಯಾಗಿ ವ್ಯಾಕ್ಯೂಮ್ ಮಾಡಿ.

2. ಬಿಸಿನೀರಿನಲ್ಲಿ ಒಗೆಯಬಹುದಾದ ಪ್ರತಿಯೊಂದು ವಸ್ತುಗಳನ್ನು ಒಗೆಯಿರಿ. ನಾನು ಸಲಹೆ ಮಾಡುವುದೆಂದರೆ ಬೆಡ್ ಶೀಟ್, ಕುಷನ್, ಮೃದುವಾದ ಆಟಿಕೆ ಇತ್ಯಾದಿ. ಇವುಗಳನ್ನು ನೇರವಾಗಿ ಬಿಸಿನೀರಿಗೆ ಹಾಕಿ, ಬಳಿಕ ಒಗೆಯಿರಿ. ಇದು ಮ್ಯಾಟ್ ಗಳು ಅಥವಾ ಇತರ ದೊಡ್ಡ ವಸ್ತುಗಳಿಗೆ ಅನ್ವಯಿಸುವುದಿಲ್ಲ. ಇದಕ್ಕಾಗಿ ಮುಂದಿನ ಟಿಪ್ಸ್ ಪಾಲಿಸಿ.

3. ಬಿಸಿನೀರಿನಲ್ಲಿ ಒಗೆಯಬಹುದಾದ ಪ್ರತಿಯೊಂದು ವಸ್ತುಗಳನ್ನು ಒಗೆಯಿರಿ. ನಾನು ಸಲಹೆ ಮಾಡುವುದೆಂದರೆ ಬೆಡ್ ಶೀಟ್, ಕುಷನ್, ಮೃದುವಾದ ಆಟಿಕೆ ಇತ್ಯಾದಿ. ಇವುಗಳನ್ನು ನೇರವಾಗಿ ಬಿಸಿನೀರಿಗೆ ಹಾಕಿ, ಬಳಿಕ ಒಗೆಯಿರಿ. ಇದು ಮ್ಯಾಟ್ ಗಳು ಅಥವಾ ಇತರ ದೊಡ್ಡ ವಸ್ತುಗಳಿಗೆ ಅನ್ವಯಿಸುವುದಿಲ್ಲ. ಇದಕ್ಕಾಗಿ ಮುಂದಿನ ಟಿಪ್ಸ್ ಪಾಲಿಸಿ.

4. ಯಾವುದಾದರೂ ನೈಸರ್ಗಿಕ ಕೀಟನಾಶಕ ಬಳಸಿ. ಇದು ಮಕ್ಕಳು ಮತ್ತು ಸಾಕುಪ್ರಾಣಿಗಳಿಗೆ ಇದು ತುಂಬಾ ಸುರಕ್ಷಿತ. ತಿಗಣೆ ನಿವಾರಣೆಗೆ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸ್ಪ್ರೇ ಮತ್ತು ಪೌಡರ್ ಗಳು ಲಭ್ಯವಿದೆ. ಡಿಡಿಟಿ ಪೌಡರ್ ಬಳಸಬೇಡಿ. ಯಾಕೆಂದರೆ ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯಿದೆ.

5. ದಾಲ್ಚಿನ್ನಿ ತೈಲದಿಂದ ತಿಗಣೆ ಕೊಲ್ಲಬಹುದು. ಇದು ತಿಗಣಿ ನಿವಾರಣೆಗೆ ಒಳ್ಳೆಯ ಮಾರ್ಗ. ಸ್ಪ್ರೇ ಬಾಟಲಿಯೊಳಗೆ ದಾಲ್ಚಿನ್ನಿ ಎಣ್ಣೆ ಹಾಕಿ ಪರಿಣಾಮಕಾರಿಯಾಗಿ ತಿಗಣೆ ಕೊಲ್ಲಬಹುದು.

6. ಲ್ಯಾವೆಂಡರ್ ಎಣ್ಣೆಯನ್ನು ತಿಗಣೆಗಳಿಗೆ ಸಹಿಸಲು ಸಾಧ್ಯವಿಲ್ಲ. ಇದರ ವಾಸನೆ ತಿಗಣೆಗಳಿಗೆ ಅಲರ್ಜಿ. ಇದರಿಂದ ಲ್ಯಾವೆಂಡರ್ ಎಣ್ಣೆಯ ಸ್ಪ್ರೇ ತಿಗಣೆ ನಿವಾರಣೆಯಲ್ಲಿ ನೆರವಾಗಬಹುದು. ಲ್ಯಾವೆಂಡರ್ ಎಣ್ಣೆ ಒಳ್ಳೆಯ ಸುವಾಸನೆ ಬೀರುವುದರಿಂದ ನಿಮಗೆ ಒಳ್ಳೆಯದು. ಆದರೆ ತಿಗಣೆಗಳಿಗಲ್ಲ.