ಉಪಯುಕ್ತ ಮಾಹಿತಿ

ಬೆಳಗಿನ ತಿಂಡಿ ಸ್ಕಿಪ್ ಮಾಡುತ್ತಿದ್ದೀರಾ; ಹಾಗಾದರೆ ಈ ಎಲ್ಲಾ ಕಾಯಿಲೆಗಳು ಬರಬಹುದು ಎಚ್ಚರ!

By admin

November 21, 2019

ಬಿಸಿ ಬಿಸಿ ತಿಂಡಿ ಟೇಬಲ್ ಮೇಲೆ ರೆಡಿ ಇದ್ದರೂ ತಿನ್ನುವಷ್ಟು ವ್ಯವಧಾನ ನಮ್ಮ ಜನರಿಗೆ ಇರುವುದಿಲ್ಲ. ಹರಿಬಿರಿ ಮಾಡಿಕೊಂಡು ಬ್ಯಾಗ್ ನೇತಾಕಿಕೊಂಡು, ನಾನು ಆಫೀಸ್ ನಲ್ಲೇ ತಿನ್ನುತ್ತೇನೆ ಎಂದು ಹೊರಡುವವರೇ ಹೆಚ್ಚು. ಕೆಲವರು ಹಾಸಿಗೆಯಿಂದ ಏಳುವುದು ತಡ ಮಾಡಿಕೊಂಡು ತಿನ್ನದೆ ಹಾಗೆ ಹೊರಟರೆ, ಇನ್ನು ಕೆಲವರಿಗೆ ಬೆಳಗ್ಗೆ ತಿನ್ನಬೇಕೆಂದರೆ ಅಲರ್ಜಿ. ಆದರೆ ನೀವು ಬೆಳಗಿನ ಹೊತ್ತು ಉಪಹಾರ (ಬ್ರೇಕ್ ಫಾಸ್ಟ್) ಸೇವಿಸಿದಿದ್ದರೆ ಮುಂದೆ ಏನೆಲ್ಲಾ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ ಗೊತ್ತಾ? ಇಲ್ಲಿ ನೋಡಿ.

ಹೃದಯಾಘಾತದಸಾಧ್ಯತೆಜಾಮಾ ಅಧ್ಯಯನದ ಪ್ರಕಾರ, ಬೆಳಗಿನ ಉಪಹಾರವನ್ನು ತ್ಯಜಿಸುವ ಪುರುಷರಲ್ಲಿ ಹೃದಯಾಘಾತದ ಸಾಧ್ಯತೆ ಶೇ.27ಕ್ಕಿಂತ ಹೆಚ್ಚಿರುತ್ತದೆ. ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಡಾ. ಲೇಹ್ ಕಾಹಿಲ್, ನೀವು ಆರೋಗ್ಯಕರವಾದ ಉಪಹಾರ ಸೇವಿಸಿದರೆ ಹೃದಯಾಘಾತದ ಅಪಾಯ ತಡೆಯಬಹುದು. ಬೆಳಗಿನ ಉಪಾಹಾರವನ್ನು ತ್ಯಜಿಸಿದರೆ ಜನರು ಅಧಿಕ ರಕ್ತದೊತ್ತಡಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ.

ತೂಕಹೆಚ್ಚಾಗುತ್ತದೆಬೆಳಗಿನ ಸಮಯದಲ್ಲಿ ಉಪಹಾರವನ್ನು ಸೇವಿಸದಿರುವವರ ಕುರಿತು ನಡೆಸಿದ ಅಧ್ಯಯನಗಳ ಪ್ರಕಾರ, ಬೆಳಗ್ಗೆ ತಿಂಡಿ ತಿನ್ನದವರು ಕ್ರಮೇಣ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಹಸಿವಿನ ಮಟ್ಟ ಹೆಚ್ಚಾದಷ್ಟೂ ಆಹಾರ ಸೇವನೆಯ ಪ್ರಮಾಣ ಹೆಚ್ಚಾಗುತ್ತದೆ. ತಿಂಡಿ ತ್ಯಜಿಸುವ ನಿರಂತರ ಅಭ್ಯಾಸವು ಅಂತಿಮವಾಗಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ ಹೊರತು ತೂಕ ನಷ್ಟಕ್ಕೆ ಕಾರಣವಾಗುವುದಿಲ್ಲ ಎನ್ನುವುದನ್ನು ಮರೆಯಬೇಡಿ. ದೇಹದಶಕ್ತಿಕುಗ್ಗುತ್ತದೆ 1999 ರಲ್ಲಿ ಫಿಸಿಯೋಲಾಜಿಕಲ್ ಬಿಹೇವಿಯರ್ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಉಪಹಾರವನ್ನು ತ್ಯಜಿಸುವುದರಿಂದ ದೇಹದ ಶಕ್ತಿ ಮತ್ತು ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಕ್ಯಾನ್ಸರ್ಬರಬಹುದು!!ಬೆಳಗಿನ ಸಮಯದಲ್ಲಿ ಉಪಹಾರ ತ್ಯಜಿಸಿ, ಆ ನಂತರ ಆಹಾರವನ್ನು ಅತಿಯಾಗಿ ಸೇವಿಸಿದರೆ ಸ್ಥೂಲಕಾಯತೆ ಬರಲು ದಾರಿ ಮಾಡಿ ಕೊಟ್ಟಂತಾಗುತ್ತದೆ. ಕ್ಯಾನ್ಸರ್ ರಿಸರ್ಚ್ ಯುಕೆ ನಡೆಸಿದ ಸಂಶೋಧನೆಯ ಪ್ರಕಾರ, ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ವ್ಯಕ್ತಿಗೆ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ತಿಳಿದುಬಂದಿದೆ. ವಿಶುಯಲ್ಸರ್ಚ್ಟೆಸ್ಟ್ 12 ರಿಂದ 15 ವರ್ಷದೊಳಗಿನ ಮಕ್ಕಳ ಮೇಲೆ ಒಂದು ಅಧ್ಯಯನ ನಡೆಸಲಾಯಿತು. ಮೊದಲನೆ ಪ್ರಯೋಗದಲ್ಲಿ ಇವರಿಗೆ ಉಪಹಾರ ನೀಡಲು ಅವಕಾಶ ನೀಡಲಾಯಿತು. ಎರಡನೇ ಪ್ರಯೋಗದಲ್ಲಿ ಉಪಹಾರ ಕೊಡಲಿಲ್ಲ. ಆಗ ಬಂದ ಫಲಿತಾಂಶ ಹೀಗಿತ್ತು. ಉಪಹಾರ ಸೇವಿಸಿದಾಗ ವಿಶುಯಲ್ ಸರ್ಚ್ ಟೆಸ್ಟ್ ರಿಸಲ್ಟ್ ಉತ್ತಮವಾಗಿತ್ತು. ಉಪಹಾರದ ಸೇವಿಸದಿದ್ದಾಗ ರಿಸಲ್ಟ್ ಶೂನ್ಯ. ಹದಿಹರೆಯದವರ ಮೇಲೆ ಈ ಅಧ್ಯಯನವನ್ನು ನಡೆಸಲಾಗಿದ್ದರೂ ಇದು ವಯಸ್ಕರಿಗೂ ಅನ್ವಯವಾಗುತ್ತದೆ.

ಕೂದಲು ಉದುರುತ್ತದೆಬೆಳಗಿನ ಸಮಯ ಉಪಹಾರ ತ್ಯಜಿಸುವುದರಿಂದ ಆಗುವ ಅಡ್ಡಪರಿಣಾಮವೆಂದರೆ ಕೂದಲು ಉದುರುವುದು. ಇದು ಕೂದಲಿನ ಬೆಳವಣಿಗೆಯನ್ನು ತಪ್ಪಿಸಿ, ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ನಿಮಗೆ ಗೊತ್ತಿದೆಯೋ, ಇಲ್ಲವೋ ನೀವು ಬೆಳಗಿನ ಸಮಯ ಉಪಹಾರ ಸೇವಿಸುವುದರಿಂದ ಕೂದಲು ಕಿರುಚೀಲಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ನೀವು ನಿಜಕ್ಕೂ ಸೊಂಪಾದ ಕೂದಲನ್ನು ಬಯಸಿದ್ದರೆ ಪ್ರತಿದಿನ ಪ್ರೊಟೀನ್ ಭರಿತ ಉಪಹಾರ ಸೇವಿಸಿ.

ಚಯಾಪಚಯ ಕ್ರಿಯೆ ಉಪಹಾರದಿಂದಲೇಇಂಧನ ಇಲ್ಲದಿದ್ದರೆ ಕಾರು ಹೇಗೆ ಸ್ಟಾರ್ಟ್ ಆಗುವುದಿಲ್ಲವೋ ಅಂತೆಯೇ, ನಮ್ಮ ಚಯಾಪಚಯ ಕ್ರಿಯೆ ಪ್ರಾರಂಭವಾಗಲು ಉಪಹಾರ ಬೇಕು. ರಾತ್ರಿ12 ಗಂಟೆಗಳ ಕಾಲ ವಿಶ್ರಾಂತಿ ಪಡೆದ ನಂತರ ದೇಹವನ್ನು ಪೋಷಿಸುವುದು ಬೆಳಗಿನ ಉಪಾಹಾರ. ವಿವಿಧ ಅಧ್ಯಯನಗಳ ಪ್ರಕಾರ ಉಪಹಾರ ಸೇವಿಸುವ ಜನರ ಚಯಾಪಚಯ ಕ್ರಿಯೆ ಉತ್ತಮವಾಗಿರುತ್ತದೆ.