ಸುದ್ದಿ

ಸ್ಯಾಂಡಲ್ ವುಡ್ ಮಾಸ್ಟರ್ ಥ್ರಿಲ್ಲರ್ ಮಂಜು ಅವರಿಗೆ ಡಾಕ್ಟರೇಟ್ ಗೌರವ. ಈ ನ್ಯೂಸ್ ನೋಡಿ.

By admin

November 25, 2019

ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ಕೂಡಾ ಸಾಹಸ ನಿರ್ದೇಶನ ಮಾಡಿ, ಸಿನಿಮಾ ರಂಗದಲ್ಲಿ ತನ್ನದೇ ಆದಂತಹ ಹೆಸರು, ಖ್ಯಾತಿ ಮತ್ತು ಸ್ಥಾನವನ್ನು ಪಡೆದಿರುವ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು. ದಶಕಗಳಿಂದ ಚಿತ್ರರಂಗದಲ್ಲಿ ಸಾಹಸ ನಿರ್ದೇಶನ ಮಾಡಿರುವ ಅವರು ನಟ ಹಾಗೂ ನಿರ್ದೇಶಕನಾಗಿ ಕೂಡಾ ಹೆಸರು ಮಾಡಿದ್ದಾರೆ. ಥ್ರಿಲ್ಲರ್ ಮಂಜು ಅವರ ಸಿನಿಮಾ ರಂಗದ ಈ ಸಾಧನೆ, ಅವರ ಶ್ರಮ ಹಾಗೂ ಪರಿಶ್ರಮಕ್ಕೆ ತಕ್ಕ ಫಲವಾಗಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸತ್ಕರಿಸಲಾಗಿದೆ. ಥ್ರಿಲ್ಲರ್ ಮಂಜು ಅವರಿಗೆ ಸಂದಿರುವ ಗೌರವ ನಿಜಕ್ಕೂ ಸಂತಸವನ್ನು ತರುವ ವಿಚಾರವಾಗಿದೆ.

ವರ್ಚವಲ್ ಆಫ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಶನ್ ವಿಶ್ವವಿದ್ಯಾಲಯದಿಂದ ಥ್ರಿಲ್ಲರ್ ಮಂಜು ಅವರಿಗೆ ಅವರ ಜೀವಮಾನದ ಸಾಧನೆಗಾಗಿ ಗೌರವ ಡಾಕ್ಟರೇಟ್ ಅನ್ನು ಪ್ರಧಾನ ಮಾಡಿ ಗೌರವಿಸಿದೆ. ಕಳೆದ ಮೂರು ದಶಕಗಳಿಂದ ಸಾಹಸ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಥ್ರಿಲ್ಲರ್ ಮಂಜು ಅವರು ಕನ್ನಡ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಸಾಹಸ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಥ್ರಿಲ್ಲರ್ ಮಂಜು ಅವರ ಸಿನಿಮಾ ಪಯಣ ಆರಂಭವಾಗಿದ್ದು ಸ್ಯಾಂಡಲ್ ವುಡ್ ನಿಂದ. ಶಂಕರ್ ನಾಗ್ ಅವರ ಅಭಿನಯದ ನರಸಿಂಹ ಸಿನಿಮಾ ಮೂಲಕ 1990 ರಲ್ಲಿ ಸಾಹಸ ನಿರ್ದೇಶನ ಆರಂಭಿಸಿದರು.

ಕನ್ನಡದ ಎಲ್ಲಾ ಸೂಪರ್ ಸ್ಟಾರ್ ಗಳ ಸಿನಿಮಾಗಳಿಗೂ ಇವರು ಸಾಹಸ ನಿರ್ದೇಶನವನ್ನು ಮಾಡಿದ್ದು, ಇದುವರೆವಿಗೂ ಸುಮಾರು 500 ಕ್ಕಿಂತಲೂ ಅಧಿಕ ಸಿನಿಮಾಗಳಿಗೆ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ. ಥ್ರಿಲ್ಲರ್ ಮಂಜು ಅವರಿಗೆ ಡಾಕ್ಟರೇಟ್ ಪ್ರಧಾನ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ಅಭಿಮಾನಿಗಳು, ಸ್ನೇಹಿತರು ಶುಭಾಶಯಗಳನ್ನು ಕೋರುತ್ತಿದ್ದಾರೆ.