ಒಂದು ದಿನ ರಾತ್ರಿ ಗಂಡ ಮತ್ತು ಹೆಂಡತಿಯರಲ್ಲಿ ಒಂದು ಪಂದ್ಯವನ್ನ ಹಾಕಿಕೊಂಡರು. ಅದು ಏನೆಂದರೆ ಇವತ್ತು ಯಾರೇ ಬಾಗಿಲು ತಟ್ಟಿದರೂ ಬಾಗಿಲು ತೆಗೆಯ ಬಾರದು ಎಂದು.
ಪಂದ್ಯಕ್ಕೆ ಹೆಂಡತಿ ಒಪ್ಪಿಕೊಂಡಳು. ಅದರಂತೆಯೆ ಕೋಣೆಯ ಬಾಗಿಲು ಮುಚ್ಚಿಟ್ಟು ಇಬ್ಬರು ನಿಶ್ಯಬ್ದವಾಗಿ ಕುಳಿತಿದ್ದರು.
ಮೊದಲು ಗಂಡನ ಅಪ್ಪ ಮತ್ತು ಅಮ್ಮ ಬಂದು ಬಾಗಿಲನ್ನು ತಟ್ಟಿದರು.ಗಂಡ ಬಾಗಿಲನ್ನ ತೆಗೆಯಲು ಎದ್ದನು, ಅಷ್ಟರಲ್ಲಿ ಪಂದ್ಯ ನೆನಪಿಗೆ ಬಂದು ಕುಳಿತು ಬಿಟ್ಟ.ಅವರು ಸ್ವಲ್ಪ ಸಮಯ ಬಾಗಿಲನ್ನ ತಟ್ಟಿ ಶಬ್ದ ಕೇಳಿಸದೆ ಹೋದಾಗ ಸುಮ್ಮನಾಗಿ ಬಿಟ್ಟರು.
ನಂತರ ಅವನ ಹೆಂಡತಿಯ ಅಪ್ಪ ಅಮ್ಮ ಬಂದು ಬಾಗಿಲನ್ನು ತಟ್ಟಿದರು. ಇಬ್ಬರು ಒಬ್ಬರೊನ್ನೊಬ್ಬರು ಮುಖ ನೋಡಿ ಕೊಂಡರು.ಆದರೆ, ಅವರನ್ನು ಕಾಯಿಸಲು ಇಷ್ಟವಾಗದ ಹೆಂಡತಿ, ಕಣ್ಣೀರಿಡುತ್ತ ಬಾಗಿಲನ್ನ ತೆಗೆದು ಬಿಟ್ಟಳು.
ಗಂಡ ಏನು ಮಾತನಾಡಲಿಲ್ಲ. ಕೆಲವು ವರ್ಷಗಳು ಕಳೆದವು ಅವರಿಗೆ ಮೂರು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರು. ಹೆಣ್ಣು ಮಗಳು ಹುಟ್ಟಿದ ಸಂತೋಷಕ್ಕಾಗಿ ಮನೆಯ ಬಂದು ಮಿತ್ರರನ್ನು ಕರೆದು ಔತಣವನ್ನು ನೀಡಿದರು.ಔತಣವು ಅಂದುಕೊಂಡ ಹಾಗೆ ಚೆನ್ನಾಗಿ ನಡೆಯಿತು.
ಅಂದು ರಾತ್ರಿ ಹೆಂಡತಿ ಗಂಡನ ಬಳಿ ವಿಚಾರಿಸಿದಳು. ರೀ ನಮಗೆ ಮೂರು ಗಂಡು ಮಕ್ಕಳಾದಾಗ ಯಾವತ್ತೂ ಈ ರೀತಿ ಯಾರಿಗೂ ಔತಣ ನೀಡಿರಲಿಲ್ಲ, ಆದರೆ ಹೆಣ್ಣು ಮಗು ಹುಟ್ಟಿದಕ್ಕಾಗಿ ಎಲ್ಲರನ್ನು ಕರೆದು ಔತಣ ನೀಡಿದಿರಲ್ಲ ,ಅದು ಯಾಕೆ ಎಂದು ನನಗೆ ಅರ್ಥ ಆಗುತಿಲ್ಲ ಎಂದು ಕೇಳಿದಳು.
ಅದಕ್ಕೆ ಗಂಡ ಹೇಳಿದ ನಾಳೆ ದಿನ ನಾವು ಬಾಗಿಲನ್ನ ತಟ್ಟಿದಾಗ ನನ್ನ ಮೂರು ಮಕ್ಕಳು ಬಾಗಿಲನ್ನ ತೆಗೆಯದೆ ಹೋದರೂ,
ನನ್ನ *ಮಗಳು* ತೆಗೆಯುತ್ತಾಳೆ ಅದಕ್ಕಾಗಿ ಎಂದು ಗಂಡ ಹೇಳಿದ.