ಮಿಳುನಾಡಿನಲ್ಲಿ ನಡೆದ ಘಟನೆ ಬಗ್ಗೆ ಕೇಳಿದರೆ ಎಂಥವರೂ ಶಾಕ್ ಆಗುತ್ತಾರೆ. ಭಿಕ್ಷೆ ಬೇಡುವವರನ್ನು ಕಂಡರೆ ಸಾಮಾನ್ಯವಾಗಿ ಜನರು ಮುಖ ಕಿವುಚುತ್ತಾರೆ. ಕೈಯಲ್ಲಿರುವ ಎರಡು ಮೂರು ರೂಪಾಯಿ ಕೊಟ್ಟು ಮುಂದೆ ಹೋಗುತ್ತಾರೆ. ಹೀಗೆ ಪಡೆದ ಭಿಕ್ಷೆಯ ಹಣವೇ ಇಲ್ಲೊಬ್ಬಮಹಿಳೆಯನ್ನು ಲಕ್ಷಾಧೀಶೆಯನ್ನಾಗಿ ಮಾಡಿದೆ.
ಪಾಂಡಿಚೇರಿಯ ದೇವಾಲಯವೊಂದರ ಹೊರಗಡೆ ಭಿಕ್ಷೆ ಬೇಡುತ್ತಿರುವ ವೃದ್ಧೆಯ ಕೈಯಲ್ಲಿ 12 ಸಾವಿರ ರೂ. ಹಾಗೂ ಆಕೆಯ ಬ್ಯಾಂಕ್ ಅಕೌಂಟಿನಲ್ಲಿ ಸುಮಾರು 2 ಲಕ್ಷ ಹಣ ಇರುವುದು ಗುರುವಾರ ಬೆಳಕಿಗೆ ಬಂದಿದೆ. ವೃದ್ಧೆಯನ್ನು ಪಾರ್ವತಮ್ಮ(70)ಎಂದು ಗುರುತಿಸಲಾಗಿದೆ. ಪ್ರತಿ ದಿನ ದೇವಸ್ಥಾನಕ್ಕೆ ಬರುವ ಭಕ್ತರ ಬಳಿ ಭಿಕ್ಷೆಬೇಡಿ ಈ ಹಣ ಸಂಪಾದಿಸಿರುವುದಾಗಿ ವೃದ್ಧೆ ತಿಳಿಸಿದ್ದಾರೆ. ಇವರು ಆಧಾರ್ ಕಾರ್ಡ್ಹಾಗೂ ಕ್ರೆಡಿಟ್ ಕಾರ್ಡ್ ಕೂಡ ಹೊಂದಿದ್ದಾರೆ.70 ವರ್ಷದ ಮಹಿಳೆ ಕೇವಲ ಭಿಕ್ಷೆ ಬೇಡಿಕೊಂಡು ಇಷ್ಟೊಂದು ಹಣ ಸಂಬಾದಿಸಿದ್ದನ್ನು ತಿಳಿದ ಪೊಲೀಸರೇ ಹೌಹಾರಿದ್ದಾರೆ.
ಪುದುಚೇರಿಯ ದೇವಸ್ಥಾನದ ಎದುರು ಪ್ರಜ್ಞೆ ತಪ್ಪಿ ಬಿದ್ದ 70 ವರ್ಷದ ಪಾರ್ವತಮ್ಮ ಬಳಿ ಕೇವಲ ಹಣವಷ್ಟೇ ಸಿಕ್ಕಿರಲಿಲ್ಲ. 2 ಲಕ್ಷ ಹಣವಿರುವ ಬ್ಯಾಂಕ್ಖಾತೆ, ಆಧಾರ್ ಕಾರ್ಡ್, ಡೆಬಿಟ್ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ಕೂಡಾ ಪತ್ತೆಯಾಗಿದೆ. ಇದರಿಂದ ಪೊಲೀಸರು ಮಹಿಳೆಯ ಮೂಲವನ್ನು ಪತ್ತೆ ಮಾಡಿದ್ದಾರೆ.
ಇವರು ಮೂಲತಃ ತಮಿಳುನಾಡಿನ ಕಲ್ಲಿಕುರಿಚಿಯವಾಗಿದ್ದಾರೆ. ಇವರ ಪತಿ 40 ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಆ ನಂತರ ಈಕೆ ಪಾಂಡಿಚೇರಿಯ ಬೀದಿಯಲ್ಲಿ ತಿರುಗಾಡಲು ಆರಂಭಿಸಿದ್ದಾರೆ ಎಂದು ಎಸ್ ಪಿಮರನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಪಾರ್ವತಮ್ಮ ಅವರು ಕಳೆದ 8 ವರ್ಷಗಳಿಂದ ದೇವಸ್ಥಾನದ ಹೊರಗಡೆ ವಾಸಿಸುತ್ತಿದ್ದಾರೆ. ಅಲ್ಲದೆ ಅಪರಿಚಿತರು ಕೊಟ್ಟ ಆಹಾರದಿಂದಲೇ ಜೀವನ ನಡೆಸುತ್ತಿದ್ದಾರೆ. ಅವರ ಬಳಿ ಹಣವಿರುವಬಗ್ಗೆ ನಮಗೆ ತಿಳಿದಿತ್ತು ಎಂದು ಸ್ಥಳೀಯ ಅಂಗಡಿಯವರು ಹೇಳಿದ್ದಾರೆ.