ಈಗಂತೂ ವಿಧ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಗುರು ಶಿಷ್ಯರ ಸಂಬಂದ ಮೊದಲಿನ ಹಾಗೆ ಇಲ್ಲ.ಆದರೆ ಕೆಲವು ಶಿಕ್ಷಕರು ವಿಧ್ಯಾರ್ಥಿಗಳಿಗೆ ತೋರಿಸುವ ಪ್ರೀತಿ ಮತ್ತು ಕಲಿಸುವ ರೀತಿ ವಿಧ್ಯಾರ್ಥಿ ಶಿಕ್ಷಕರ ನಡುವೆ ಒಂದು ಬಿಡಿಸಲಾರದ ಅನುಬಂದವನ್ನೇ ಹುಟ್ಟು ಹಾಕುತ್ತದೆ.
ಅಂತಹ ಶಿಕ್ಷಕರು ಒಂದು ವೇಳೆ ಬೇರೊಂದು ಶಾಲೆಗೇ ವರ್ಗಾವಣೆಯಾದರೆ ವಿಧ್ಯಾರ್ಥಿಗಳು ಮತ್ತು ಆ ಶಿಕ್ಷಕ ಪಡುವ ಯಾತನೆ ಅಷಿಷ್ಟಲ್ಲ.ಇದಕ್ಕೊಂದು ನೈಜ ಉದಾಹರಣೆ ಎಂಬಂತೆ ತಮಿಳುನಾಡಿನ ಶಾಲೆಯೊಂದರಲ್ಲಿ ಘಟನೆ ನಡೆದಿದೆ.
ತಮ್ಮ ಪ್ರೀತಿಯ ಶಿಕ್ಷಕ ವರ್ಗವಾಗಿ ಬೇರೆ ಶಾಲೆಗೆ ಹೋಗುವುದು ಅವರಿಗೆ ಇಷ್ಟವಿರಲಿಲ್ಲ. ಶಾಲೆಯಿಂದ ಹೊರಟು ನಿಂತ ಆ ಶಿಕ್ಷಕನನ್ನು ವಿದ್ಯಾರ್ಥಿಗಳೆಲ್ಲರೂ ಸುತ್ತುವರಿದು, ಸರ್, ನಮ್ಮನ್ನು ಬಿಟ್ಟು ಹೋಗಬೇಡಿಎಂದು ಕಣ್ಣೀರಿಟ್ಟರು.
ವಿದ್ಯಾರ್ಥಿಗಳ ಸ್ನೇಹಬಂಧನದಲ್ಲಿ ಸಿಲುಕಿದ ಆ ಶಿಕ್ಷಕನ ಕಣ್ಣಲ್ಲಿಯೂ ನೀರು. ತಮಿಳುನಾಡಿನ ತಿರುವಳ್ಳೂರ್ನ ವೆಲಿಯಗರಂ ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳ ಈ ಪ್ರೀತಿಯ ಬಗ್ಗೆ ತಮಿಳುನಾಡಿನ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.
ಜಿ. ಭಗವಾನ್ ಎಂಬ 28ರ ಹರೆಯದ ಇಂಗ್ಲಿಷ್ ಅಧ್ಯಾಪಕನಿಗೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳು ಈ ರೀತಿ ಕಣ್ಣೀರಿಟ್ಟಿದ್ದಾರೆ. ವಿದ್ಯಾರ್ಥಿಗಳ ಪ್ರೀತಿಗೆ ಭಾವುಕನಾಗಿ ಹೊರಡುತ್ತಿರುವ ಅಧ್ಯಾಪಕನನ್ನು ವಿದ್ಯಾರ್ಥಿಗಳು ಅಪ್ಪಿ ಹಿಡಿದಿರುವ ಚಿತ್ರವನ್ನು ತಮಿಳುನಾಡಿನ ಪತ್ರಿಕೆಗಳು ಮತ್ತು ಸುದ್ದಿವಾಹಿನಿ ಪ್ರಸಾರ ಮಾಡಿತ್ತು.
ಜಿ. ಭಗವಾನ್ ಅವರಿಗೆ ತಿರುತ್ತಾಣಿ ಬಳಿಯ ಆರುಂಗುಲಮ್ ಸರ್ಕಾರಿ ಹೈಸ್ಕೂಲ್ಗೆ ವರ್ಗವಾಗಿದೆ. ಆದರೆ ಸದ್ಯ ಈ ಆದೇಶವನ್ನು 10 ದಿನದಳ ಕಾಲ ತಡೆಹಿಡಿದಿದ್ದು, ವರ್ಗಾವಣೆಯಾಗಿ ಹೊಸ ಶಾಲೆಗೆ ಹೋಗಬೇಕೇ ? ಬೇಡವೇ? ಎಂಬುದನ್ನು ನಿರ್ಧರಿಸಲಾಗುವುದು.
ಈ ಬಗ್ಗೆ ಮಾತನಾಡಿದ ಭಗವಾನ್, ಇದು ನನ್ನ ಮೊದಲ ಕೆಲಸ ಆಗಿತ್ತು. 2014ರಲ್ಲಿ ನಾನು ಈ ಹೈಸ್ಕೂಲ್ಗೆ ಶಿಕ್ಷಕನಾಗಿ ಬಂದಿದ್ದೆ. ಇಲ್ಲಿನ ವಿದ್ಯಾರ್ಥಿ-ಶಿಕ್ಷಕರ ಅನುಪಾತ ನೋಡಿದರೆ ನಾನು ಹೆಚ್ಚುವರಿ ಅಧ್ಯಾಪಕನಾಗಿದ್ದೆ. ಹಾಗಾಗಿ ಶಿಕ್ಷಕರ ಕೊರತೆ ಇರುವ ಶಾಲೆಗೆ ನನ್ನನ್ನು ವರ್ಗ ಮಾಡಲು ತೀರ್ಮಾನಿಸಿದ್ದು, ತಿರುತ್ತಾಣಿ ಶಾಲೆಗೆ ವರ್ಗಾವಣೆ ಆದೇಶ ಸಿಕ್ಕಿತ್ತು.
ಶಿಕ್ಷಕನಾದವನು ಮಕ್ಕಳನ್ನು ತನ್ನ ಸ್ವಂತ ಮಕ್ಕಳೆಂದು ಪ್ರೀತಿಸಿ, ಮಕ್ಕಳೊಂದಿಗೆ ಒಂದಾಗಿ, ಮಕ್ಕಳ ಮನದೊಳಗೆ ಇಳಿದು, ಮಕ್ಕಳನ್ನು ಅರ್ಥಮಾಡಿಕೊಂಡಾಗ ಮಾತ್ರ ನಿಜವಾದ ಶಿಕ್ಷಕನಾಗುತ್ತಾನೆ. ಮಕ್ಕಳ ಪ್ರೀತಿಯನ್ನು ಸಂಪಾದಿಸುವುದು ಸುಲಭದ ಮಾತಲ್ಲ. ಭಗವಾನ್ ಅವರು ಶಿಕ್ಷಕರಿಗೆಲ್ಲಾ ಒಂದು ರೋಲ್ ಮಾಡೆಲ್. ಮಕ್ಕಳು ಶಿಕ್ಷಕನನ್ನು ಬಿಟ್ಟು ಕೊಡ್ತಿಲ್ಲ ಅಂದ್ರೆ ಆ ಶಿಕ್ಷಕನ ವೃತ್ತಿ ಪ್ರೇಮ, ಮಕ್ಕಳ ಬಗೆಗಿನ ಪ್ರೀತಿ ಎಂತದ್ದಿರಬೇಕು. ಹ್ಯಾಟ್ಸ್ ಆಫ್ ಭಗವಾನ್ ಸರ್.