inspirational

ನೀರೊಳಗಿರುವ ಟೈಟಾನಿಕ್ ಹಡಗನ್ನು ಮೇಲೆತ್ತುವ ಪ್ರಯತ್ನವನ್ನು ಯಾರು ಮಾಡುತ್ತಿಲ್ಲ ಏಕೆ? ರೋಚಕ ಸತ್ಯವನ್ನು ತಿಳಿಯಿರಿ.

By admin

February 24, 2020

ಟೈಟಾನಿಕ್ ಸಿನಿಮಾವನ್ನ ಯಾರು ತಾನೇ ನೋಡಿಲ್ಲ ಹೇಳಿ, ಭಾರಿ ಗಾತ್ರದ ಈ ಹಡಗು ಪ್ರಯಾಣಿಸಿದ ರೀತಿ ಹಾಗು ಹೇಗೆ ಮುಳುಗಿತು ಎನ್ನುವುದನ್ನು ವಿವರವಾಗಿ ಹೇಳಿಕೊಟ್ಟ ಈ ಚಿತ್ರ ಇಂದಿಗೂ ದಾಖಲೆಯನ್ನು ಬರೆದಿದೆ. ಹಾಲಿವುಡ್ ನ ಸಿನಿಮಾ ನಿರ್ಮಾಣದ ರೂಪುರೇಷೆಯನ್ನೇ ಬದಲಿಸಿದ್ದ ಈ ಚಿತ್ರ ಅಂದಿನ ಕಾಲದ ಬಿಗ್ ಬಜೆಟ್ ಮೂವಿ ಆಗಿತ್ತು, ಚಿತ್ರ ನೋಡಿದವರು ಕೂಡ ಒಂದು ಕ್ಷಣ ದಂಗಾಗಿದ್ದರು, ಅಷ್ಟು ಎಫೆಕ್ಟ್ ನೀಡಿ ಇಡೀ ಚಿತ್ರ ತಂಡ ಇದೊಂದು ಘಟನೆಯನ್ನು ಜನರ ಮುಂದೆ ಇಡಲು ಪ್ರಯತ್ನಿಸಿದ್ದರು. ಇನ್ನು ಈ ಸಿನೆಮಾ ಅಂದಿನ ಕಾಲದಲ್ಲೇ ಸುಮಾರ 20 ಕೋಟಿ USD ಯಲ್ಲಿ ನಿರ್ಮಾಣ ಮಾಡಲಾಗಿತ್ತು, ಜೇಮ್ಸ್ ಕ್ಯಾಮರೂನ್ ಇರ್ದೆಶಿಸಿದ ಈ ಚಿತ್ರ ಇಂದಿಗೂ ಒಂದು ದೊಡ್ಡ ಸಾಧನೆಯೇ ಸರಿ.

ಇನ್ನು ಈ ಟೈಟಾನಿಕ್ ಮುಳುಗಿ ಅದರ ಅವಶೇಷಗಳು ಈಗಲೂ ಸುಮುದ್ರದಾಳದಲ್ಲಿ ಇರುವುದು ನಮಗೆಲ್ಲ ತಿಳಿದೇ ಇದೆ. ಪ್ರಪಂಚದ ಅತಿ ದೊಡ್ಡ ಹಡಗು ಮುಳುಗಿ ಎಷ್ಟೊಂದು ಜನ ಸಾವನ್ನಪ್ಪಿದರೂ ಕೂಡ ಈ ಹಡಗನ್ನು ಮೇಲೆತ್ತುವ ಕೆಲಸವನ್ನು ಇಂದಿಗೂ ಕೂಡ ಮಾಡಿಲ್ಲ ಯಾಕೆ ಗೊತ್ತಾ. ಯಾಕೆ ಟೈಟಾನಿಕ್ ಇನ್ನು ಸಮುದ್ರದಲ್ಲೇ ಇದೆ ಇದನ್ನು ಎತ್ತುವ ಪ್ರಯತ್ನ ಮಾಡಿ ಯಾವುದಾದರೂ ಒಂದು ಮ್ಯೂಸಿಯಂ ಮಾಡಾಬಹುದಲ್ಲ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತದೆ, ಸ್ನೇಹಿತರೆ ಈ ವಿಶಾಲ ಹಡಗಿನ ಬಗ್ಗೆ ಇರುವ ರೋಚಕ ಸಂಗತಿ ತಿಳಿಯಿರಿ. 1912 ರಲ್ಲಿ ಮುಳುಗಿದ ಈ ಶಿಪ್ ಬಹಳ ವಿಶಾಲವಾದ ಗಾತ್ರ ಹೊಂದಿತ್ತು, ಈ ಶಿಪ್ ಮುಳುಗಿ ಈಗಾಗಲೇ ನೂರಕ್ಕೂ ಅಧಿಕ ವರ್ಷವಾಗಿದೆ.

ಪ್ರಸ್ತುತ ಈ ಹಡಗು ಈಗ 12,500 ಅಡಿಗಳಷ್ಟು ಆಳದಲ್ಲಿದೆ, ಅಷ್ಟೊಂದು ಆಳದಲ್ಲಿರುವ ಇದನ್ನು ಎತ್ತುವುದು ಕೂಡ ಅಸಾಧ್ಯದ ಕೆಲಸ ಏಕೆಂದರೆ ಅಷ್ಟೊಂದು ಆಳದಿಂದ ಮೇಲ್ಬರುವ ಸಮಯದಲ್ಲಿ ಇದು ಹಲವಾರು ಒತ್ತಡಗಳನ್ನು ಅನುಭವಿಸುತ್ತದೆ ಹೀಗಾಗಿ ಯಾವುದೇ ಕ್ಷಣದಲ್ಲೂ ಕೂಡ ಇದು ಕುಸಿದು ಮತ್ತೆ ನೀರಿನ ಆಳಕ್ಕೆ ಬೀಳಬಹುದು. ಟೈಟಾನಿಕ್ ಅನ್ನು ಮೇಲೆತ್ತಿದರೂ ಕೂಡ ನೀವು ಆ ಹಡಗನ್ನು ಎಲ್ಲಿ ಇಡುತ್ತೀರಿ ಎನ್ನುವುದೇ ಒಂದು ದೊಡ್ಡ ಪ್ರಶ್ನೆಯಾಗಿದೆ, 1912 ರಲ್ಲಿ ಟೈಟಾನಿಕ್ 882 ಅಡಿ ಉದ್ದವಿತ್ತು, ಇದು ಈಗಲೂ ಸಾಕಷ್ಟು ದೊಡ್ಡ ಗಾತ್ರವಾಗಿದೆ. ನೀರೊಳಗಿನ ಈ ಅವಶೇಷ ಸದ್ಯಕ್ಕೆ ಸಂಪೂರ್ಣ ಹದಗೆಟ್ಟಿದೆ ಮತ್ತು ಅದನ್ನು ತಂದು ಭೂಮಿ ಮೇಲೆ ಇಡುವುದು ಮೂರ್ಖತನ ಎನ್ನುವುದು ಹಲವರ ವಾದ ಇನ್ನು ಮತ್ತೊಂದು ಮುಖ್ಯ ಕಾರಣ ಎಂದರೆ ಟೈಟಾನಿಕ್ ಹಡಗಿನ ವಾರಸುದಾರ ಯಾರು ಎನ್ನುವ ಬಗ್ಗೆ ಹಲವಾರು ಗೊಂದಲಗಳಿವೆ, ಇದು ಯಾವ ಕಂಪನಿಯ ಸೊತ್ತು ಎನ್ನುವುದರ ಬಗ್ಗೆ ಕೆಲವು ಸಮಸ್ಯೆಗಳಿವೆ.

ಟೈಟಾನಿಕ್ ಮೇಲೆತ್ತದೆ ಇರಲು ಮತ್ತೊಂದು ಮುಖ್ಯ ಕಾರಣ ಎಂದರೆ ಹಣದ ದುಂದು ವೆಚ್ಚ, ಉದಾಹರಣೆಗೆ 50 ಅಡಿ ವಿಹಾರ ನೌಕೆಯನ್ನು ನೀವು ಮೇಲೆತ್ತಲು ಕೇವಲ ಏರ್‌ಬ್ಯಾಗ್‌ಗಳ ಬಳಕೆಗಾಗಿ ಗಂಟೆಗೆ $ 250 ಖರ್ಚಾಗುತ್ತದೆ. ಇನ್ನು ಇಷ್ಟೊಂದು ಭಾರಿ ಗಾತ್ರದ ಹಡಗನ್ನು ಈ ಬ್ಯಾಗ್ ಗಳ ಮೂಲಕ ಎತ್ತುವುದು ಎಂದರೆ ಅದು ದುಬಾರಿ ಮತ್ತು ಕೆಲಸಕ್ಕೆ ಬಾರದ್ದು ಎನ್ನಲಾಗಿದೆ. ಇನ್ನು ಈ ದುರಂತದಲ್ಲಿ ಮೃತಪಟ್ಟವರ ನೆನಪಿನ ಜೀವಂತ ಸಮಾಧಿ ಇದು ಎಂದು ಎಷ್ಟೋ ಜನರು ಇವತ್ತಿಗೂ ಕೂಡ ಅಂದುಕೊಂಡಿದ್ದಾರೆ, ಹಾಗಾಗಿ ಇದಕ್ಕೆ ಅಡಚಣೆ ಮಾಡಬಾರದು ಎನ್ನುವ ವಾದ ಕೂಡ ಇದೆ. ಈ ಎಲ್ಲಾ ಕಾರಣದಿಂದ ಟೈಟಾನಿಕ್ ಮೇಲೆತ್ತುವ ಗೋಜಿಗೆ ಯಾರು ಕೂಡ ಹೋಗಿಲ್ಲ ಮತ್ತು ಹೋದರು ಕೂಡ ಅದೊಂದು ವ್ಯರ್ಥ ಪ್ರಯತ್ನ ಎಂದು ಎಷ್ಟೋ ಕಂಪನಿಗಳು ಈಗಾಗಲೇ ನಂಬಿ ಬಿಟ್ಟಿವೆ.