ಆಧ್ಯಾತ್ಮ

ಸೂರ್ಯಗ್ರಹಣದ ಪರಿಣಾಮವೇನು -ಏನು ಮಾಡಬೇಕು? ಏನು ಮಾಡಬಾರದು?

By admin

December 26, 2019

ಪಂಡಿತ್ ರಾಘವೇಂದ್ರ ಸ್ವಾಮಿಗಳು ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772

ಸರ್ವೇಷಾಮೇವ ವರ್ಣಾನಾಂ ಸೂತಕಂ ರಾಹುದರ್ಶನೇ ।ಸಚೇಲಂ ತು ಭವೇತ್ ಸ್ನಾನಂ ಸೂತಕಾನ್ನಂ ವಿವರ್ಜಯೇತ್ ।।

ಗ್ರಹಣವನ್ನು ಎಲ್ಲರೂ ನೋಡಬೇಕು. ಗ್ರಹಣದ ಸೂತಕವನ್ನು ಎಲ್ಲ ಜಾತಿ-ಮತದವರೂ, ಎಲ್ಲ ವರ್ಣದವರೂ ಆಚರಿಸ ಬೇಕು. ಚಿಕ್ಕ ಮಕ್ಕಳು, ಗರ್ಭಿಣಿಯರು, ಬಾಳಂತಿಯರು, ಅನಾರೋಗ್ಯ ಪೀಡಿತರು ಹಾಗೂ ಅತಿವೃದ್ಧರನ್ನು ಬಿಟ್ಟು ಆರೋಗ್ಯವಂತರಾದ ಎಲ್ಲರೂ ಗ್ರಹಣ ಅಶೌಚವನ್ನು ಆಚರಿಸಬೇಕು. ಅಶಕ್ತರಿಗೆ ಅವರವರ ಶಕ್ತಿಗೆ ಅನುಸಾರವಾದ ಸಡಿಲಿಕೆ ಇದೆ.

ಗ್ರಹಣದ ಸ್ಪರ್ಷ, ಮೋಕ್ಷ ಸ್ನಾನವನ್ನು ಉಟ್ಟಬಟ್ಟೆ ಸಹಿತವಾಗಿ ಮಾಡಬೇಕು. ವೇಧಕಾಲದಿಂದ ಗ್ರಹಣ ಮುಕ್ತಾಯದವರೆಗೂ ಏನನ್ನೂ ತಿನ್ನಬಾರದು. ಕಠೋರವಾದ ಮಾತುಗಳನ್ನು ಆಡಬಾರದು. ಹೆಚ್ಚುವದು-ಕೊಚ್ಚುವದು, ಅಸ್ತ್ರ-ಶಸ್ತ್ರಗಳ ಉಪಯೋಗವನ್ನು ಮಾಡಬಾರದು.

ಉಗುರು ಕತ್ತರಿಸುವದು, ಕೂದಲು ಕತ್ತರಿಸುವದು, ಅನಾವಶ್ಯಕ ಹರಟೆ, ವಾದ-ವಿವಾದ, ಅಡುಗೆ ಮಾಡುವದು, ಕಸತಗೆಯುವದು, ಮಲಗುವದು ಮೊದಲಾದ ಕೆಲಸಗಳನ್ನು ವೇಧಕಾಲದಲ್ಲಿ ಮಾಡಬಾರದು. ವೇಧಕಾಲದಲ್ಲಿ ನೀರು-ಆಹಾರ ಸೇವನೆ ಮಾಡದೇ ದೇಹವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಇದರಿಂದ ಗ್ರಹಣ ಕಾಲದಲ್ಲಿ ಮಲ-ಮೂತ್ರ ವಿಸರ್ಜನೆಯ ಪ್ರಸಂಗ ಬರಲಾರದು.

ಸೂತಕೇ ಮೃತಕೇ ಚೈವ ಸದೋಷೋ ರಾಹು ದರ್ಶನೇ ।ತಾವದೇವ ಭವೇತ್ ಶುದ್ಧಿಃ ಯಾವನ್ಮುಕ್ತಿರ್ನ ಸಂಶಯಃ ।।

ಯಾರಿಗಾದರೂ ಜನನ ಶೌಚ, ಮರಣ ಶೌಚ ಇದ್ದರೆ ಗ್ರಹಣ ಕಾಲದಲ್ಲಿ ದೋಷ ಇರುವದಿಲ್ಲ. ಅವರೂ ಕೂಡ ಸ್ನಾನ-ದಾನ ಮೊದಲಾದ ಆಚರಣೆ ಮಾಡಬೇಕು. ಗ್ರಹಣ ಮೋಕ್ಷದ ನಂತರ ಮೊದಲಿನಂತೆ ಜನನ-ಮರಣ ಅಶೌಚ ಆಚರಣೆಯನ್ನು ಮುಂದುವರೆಸಬೇಕು.

ಸ್ನಾನೇ ನೈಮಿತ್ತಿಕೇ ಪ್ರಾಪ್ತೇ ನಾರೀ ಯದಿ ರಜಸ್ವಲಾ ।ಪಾತ್ರಾಂತರಿತ ತೋಯೇನ ಸ್ನಾನಂ ಕೃತ್ವಾ ವ್ರತಂ ಚರೇತ್ಪಾತ್ರಾಂತರಿತ ತೋಯೇನ ಸ್ನಾನಂ ಕೃತ್ವಾ ವ್ರತಂ ಚರೇತ್ ।।

ರಜಸ್ವಲಾ ಸ್ತ್ರೀಯರು ನದಿ-ಬಾವಿಗಳನ್ನು ಬಿಟ್ಟು ಒಂದು ಪಾತ್ರೆಯಲ್ಲಿಯ ನೀರನ್ನು ಬಳಸಿ ಸ್ನಾನಮಾಡಬೇಕು.

ಸ್ಪರ್ಷೇ ಜ್ಞಾತೇ ತಥಾ ಗ್ರಸ್ತೇ ಮೋಕ್ಷಕಾಲೇ ವಿಮೋಚನೇ ।ಸ್ನಾನಂ ಶ್ರಾದ್ಧಂ ಜಪಂ ಹೋಮಂ ದಾನಂ ಸ್ನಾನಂ ಕ್ರಮಾತ್ ಚರೇತ್ ।।

ಗ್ರಹಣ ಸ್ಪರ್ಷಸ್ನಾನ, ಮಧ್ಯಸ್ನಾನ, ತರ್ಪಣ, ಜಪ, ಹೋಮ, ದಾನದ ನಂತರ ಗ್ರಹಣ ಮೋಕ್ಷ ದರ್ಶನ ಮಾಡಿ ಮತ್ತೆ ಸ್ನಾನ ಮಾಡಬೇಕು. ಗ್ರಹಣ ಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು.

ಚಂದ್ರ ಸೂರ್ಯ ಗ್ರಹೇ ಸ್ನಾಯಾತ್ ಸೂತಕೇ ಮೃತಕೇ ತಥಾ ।ಅಸ್ನಾಯಾತ್ ಮೃತ್ಯುಮಾಪ್ನೋತಿ ಸ್ನಾಯಾತ್ ಮೃತ್ಯುಂ ನ ವಿಂದತಿ ।।

ಜನನ-ಮರಣ ಶೌಚ, ಗ್ರಹಣ ಶೌಚ ಸ್ನಾನವನ್ನು ಮಾಡಿದರೆ ಅಪಮೃತ್ಯು ಬರುವದಿಲ್ಲ. ಶೌಚ ಆಚರಣ ಮಾಡದವರಿಗೆ ಮೃತ್ಯು ಸಮಾನವಾದ ಪಾಪ ಬರುವದು.

ಸರ್ವಂ ಗಂಗಾ ಸಮಂ ತೋಯಂ ಸರ್ವೇ ವ್ಯಾಸ ಸಮಾ ದ್ವಿಜಃ ।ಸರ್ವಂ ಭೂಮಿ ಸಮಂ ದಾನಂ ಗ್ರಹಣೇ ಚಂದ್ರ ಸೂರ್ಯಯೋಃ ।।

ಗ್ರಹಣ ಕಾಲದಲ್ಲಿ ಎಲ್ಲ ತೀರ್ಥಗಳೂ ಗಂಗೆಗೆ ಸಮ. ಹರಿಯುವ ನೀರು ಎಲ್ಲವೂ ಶ್ರೇಷ್ಠವೇ ಇವುಗಳಲ್ಲಿ ಮನೆಯಲ್ಲಿ ನಲ್ಲಿ, ಬಾವಿಗಳು, ಹಳ್ಳ-ಕೊಳ್ಳಗಳು, ನದಿಗಳು, ಸಮುದ್ರಗಳು ಒಂದಕ್ಕಿಂತ ಒಂದು ಶ್ರೇಷ್ಠ ಎಂದು ತಿಳಿಯಬೇಕು. ಸಂಗ್ರಹಿಸಿಟ್ಟ ನೀರು ಉಪಯೋಗಿಸ ಬಾರದು. ಆಶೀರ್ವದಿಸುವ ದ್ವಿಜ ವ್ಯಾಸರಿಗೆ ಸಮನಾದರೆ ಕೊಡುವ ದಾನ ಭೂದಾನಕ್ಕೆ ಸಮ.

ಸಮಮಬ್ರಾಹ್ಮಣೇ ದಾನಂ ದ್ವಿಗುಣಂ ಬ್ರಾಹ್ಮಣ ಬ್ರುವೇ ।ಶ್ರೋತ್ರೀಯೇ ಶತಸಾಹಸ್ರಂ ಪಾತ್ರೇತು ಅನಂತ ಮಶ್ನುತೇ ।।

ನಿತ್ಯ ಸಂಧ್ಯಾದಿ ಅನುಷ್ಠಾನ ಮಾಡುವ ಆಚರಣಶೀಲ ಬ್ರಾಹ್ಮಣನಿಗೆ ಕೊಡುವ ದಾನದಿಂದ ಎರಡುಪಟ್ಟು ಫಲ ಬರುವದು, ಪಾಠ-ಪ್ರವಚನಾದಿಗಳನ್ನೂ ಮಾಡುವ ಶ್ರೋತ್ರೀಯರಿಗೆ ಕೊಡುವ ದಾನ ಲಕ್ಷಫಲದಾಯಕ. ಈ ಎಲ್ಲ ಸದ್ಗುಣಗಳಿಂದ ಕೂಡಿದ ನಿತ್ಯ ಸತ್ಯ-ಧರ್ಮಾಚರಣ ಶೀಲರಾದ ಯಾವದೇ ಸತ್ಪಾತ್ರರಿಗೆ ಕೊಡುವ ದಾನ ಅನಂತ ಫಲವನ್ನು ಕೊಡವದು.

ಚಂದ್ರಸೂರ್ಯಗ್ರಹೇ ತೀರ್ಥೇ ಮಹಾಪರ್ವಾದಿಕೇ ತಥಾ ।ಮಂತ್ರದೀಕ್ಷಾಂ ಪ್ರಕುರ್ವಾಣೋ ಮಾಸರ್ಕ್ಷಾದೀನ್ ನ ಶೋಧಯೇತ್ ।।

ಗ್ರಹಣಕಾಲವೇ ಒಂದು ಪರ್ವವಾಗಿ ಇರುವದರಿಂದ ಮಂತ್ರೋಪದೇಶ ಪಡೆಯಲು ಅತ್ಯಂತ ಶ್ರೇಷ್ಠವಾಗಿರುತ್ತದೆ. ಈ ಸಮಯದಲ್ಲಿ ದೀಕ್ಷೆಗೆ ರಾಹುಕಾಲ-ಗುಳಿಕಕಾಲ, ತಿಥಿ, ನಕ್ಷತ್ರ ಇತ್ಯಾದಿ ಮುಹೂರ್ತವನ್ನು ನೋಡಬಾರದು.

ಶಾಂತಿ ಮಂತ್ರ

ಇಂದ್ರೋsನಲೋ ದಂಡಧರಶ್ಚ ಕಾಲಃ ಪಾಶಯುಧೋ ವಾಯುಧನೇಶ ರುದ್ರಃ ।ಮಜ್ಜನ್ಮ ಋಕ್ಷೋ ಮಮರಾಶಿ ಸಂಸ್ಥಾಃ ಕುರ್ವಂತು ಸರ್ವೇ ಗ್ರಹದೋಷ ಶಾಂತಿಮ್ ।।

ವೈಚಾರಿಕ ಚಿಂತನೆ.

ಗ್ರಹಣ ನೋಡಬಾರದು ಎಂದು ಎಲ್ಲಿಯೂ ಹೇಳಿಲ್ಲ, ಗರ್ಭಿಣಿಯರಿಗೂ ಅವರ ಶಕ್ತಿಗೆ ಅನುಸಾರವಾದ ಆಚರಣೆ ಹಾಗೂ ಶುಭಫಲಗಳನ್ನು ಹೇಳಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಉದ್ದೇಶ ಧರ್ಮದ ಆಚರಣೆಯೇ ಹೊರತು ಭಯ ಹುಟ್ಟಿಸುದೂ ಅಲ್ಲ,

ಪಂಡಿತ್ ರಾಘವೇಂದ್ರ ಸ್ವಾಮಿಗಳು ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772