ಸುದ್ದಿ

ಈಡಿಯಟ್ ಎಂದು ಗೂಗಲ್ ನಲ್ಲಿ ಟೈಪ್ ಮಾಡಿದ್ರೆ ಯಾರ ಪೋಟೋ ಬರುತ್ತೆ ಗೊತ್ತಾ?ಹಾಗಾದ್ರೆ ಮೋದಿ ಮತ್ತೆ ರಾಹುಲ್ ಗಾಂಧಿಯವರಿಗೆ ಏನೇ ಬರುತ್ತೆ ನೋಡಿ…

By admin

December 14, 2018

“ಗೂಗಲ್ ಸರ್ಚ್ ನಲ್ಲಿ ‘ಈಡಿಯಟ್’ ಎಂದು ಟೈಪ್ ಮಾಡಿದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋ ಬರುತ್ತದೆ ಯಾಕೆ?” _ ಈ ರೀತಿಯ ಗೂಗ್ಲಿ ಪ್ರಶ್ನೆ ಅಮೆರಿಕದ ಸೆನೆಟರ್ ಒಬ್ಬರು ಗೂಗಲ್ ಸಿಇಒ ಆಗಿರುವಭಾರತೀಯ ಮೂಲದ ಸುಂರ್ ಪಿಚೈಗೆ ಕೇಳಿದ್ದಾರೆ.

ಗೂಗಲ್ ನಲ್ಲಿ ಸಾಮನ್ಯವಾಗಿ ನಮಗೆ ಬೇಕಾದ ಸಂಗತಿಗಳನ್ನು ಹುಡುಕಲು ಬಳಸುತ್ತೇವೆ.. ಆದರೆ ಕೆಲವೊಮ್ಮೆ ಹುಡುಕಿದ್ದಕ್ಕೆ ಸಂಬಂಧವಿಲ್ಲದ ಉತ್ತರಗಳು ಬರುವುದುಂಟು.. ಅದೇ ರೀತಿಯಾಗಿ ಗೂಗಲ್ ನಲ್ಲಿ ಈಡಿಯಟ್ ಎಂದು ಟೈಪ್ ಮಾಡಿ ಸರ್ಚ್ ಮಾಡಿದರೆ ಅಲ್ಲಿ ಬರುವುದು ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರ ಫೋಟೋ.. ಈ ರೀತಿ ಏಕೆ ಬರುತ್ತದೆ ಗೊತ್ತಾ..

ಮಂಗಳವಾರ ಅಮೆರಿಕದ ಸೆನೆಟ್‌ನಲ್ಲಿ ಗೂಗಲ್ ಬಗ್ಗೆ ಇದ್ದ ಸಂದೇಹಗಳಿಗೆ ಉತ್ತರ ನೀಡಲು ಸುಂದರಂ ಪಿಚೈ ಆಗಮಿಸಿ, ಸುಮಾರು ಮೂರುವರೆ ಗಂಟೆಗಳ ಕಾಲ ಜನರ ಪ್ರಶ್ನೆಗಳಿಗೆ ಉತ್ತರ ನೀಡಿದರು..ಈ ಸಮಯದಲ್ಲಿ ಸೆನೆಟರ್ ಜೂಹಿ ಲೊಫ್ಗ್ರೆನ್ ಅವರು, ಗೂಗಲ್‍ನಲ್ಲಿ ಈಡಿಯೆಟ್ ಎಂದು ಸರ್ಚ್ ಮಾಡಿದರೆ, ಟ್ರಂಪ್ ಅವರ ಫೋಟೋ ಹಾಗೂ ಅವರಿಗೆ ಸಂಬಂಧಿಸಿದ ಸುದ್ದಿಗಳು ಬರುತ್ತವೆ. ಈ ಪದವನ್ನು ಟೈಪ್ ಮಾಡಿದ ಕೂಡಲೇ ಟ್ರಂಪ್ ಫೋಟೋ ಬರಲು ಹೇಗೆ ಸಾಧ್ಯ? ಇದರಲ್ಲಿ ವ್ಯಕ್ತಿಗಳ ಕೈವಾಡವಿದೆಯೇ ಎಂದು ಪ್ರಶ್ನಿಸಿದ್ದರು.

ಜೂಹಿ ಲೊಫ್ಗ್ರೆನ್ ಅವರ ಪ್ರಶ್ನೆಗೆ ಉತ್ತರಿಸಿದ ಸುಂದರಂ ಪಿಚೈ ಅವರು, ಇದರ ಹಿಂದೆ ಯಾರ ಕೈವಾಡವೂ ಇಲ್ಲ.. ಈ ರೀತಿ ಪಲಿತಾಂಶ ಬರಲು ಬೇರೆ ಕಾರಣವಿದೆ ಎಂದು ವಿವರಿಸಿದರು.. ಗೂಗಲ್ ನಲ್ಲಿ ಕೀವರ್ಡ್ ಗಳನ್ನು ಬಳಸಿಕೊಂಡು ನಿಖರ ಸರ್ಚ್ ರಿಸಲ್ಟ್ ಗಳನ್ನು ನೀಡಲಾಗುತ್ತದೆ. ಕೀವರ್ಡ್ ಗಳನ್ನು ಪಡೆದು ನಂತರ 200 ಸಿಗ್ನಲ್‌ಗಳ ಮೂಲಕ ಮ್ಯಾಚ್ ಮಾಡಲಾಗುತ್ತದೆ.

ಅತಿ ಹೆಚ್ಚು ಸರ್ಚ್, ಪ್ರಸ್ತುತ ಅದರ ಅಗತ್ಯತೆ ಈ ಎಲ್ಲ ವಿಚಾರಗಳನ್ನು ನೋಡಿಕೊಂಡು ಫಲಿತಾಂಶ ಬರುವಂತೆ ಸಿದ್ಧಪಡಿಸಲಾಗಿದೆ. ಅದರಂತೆಯೇ ರಿಸಲ್ಟ್ ಬರುತ್ತದೆ ಎಂದರು..ಅತಿ ಹೆಚ್ಚು ಸರ್ಚ್, ಪ್ರಸ್ತುತ ಅದರ ಅಗತ್ಯತೆ ಈ ಎಲ್ಲ ವಿಚಾರಗಳನ್ನು ನೋಡಿಕೊಂಡು ಫಲಿತಾಂಶ ಬರುವಂತೆ ಸಿದ್ಧಪಡಿಸಲಾಗಿದೆ. ಎಲ್ಲ ಸರ್ಚ್‍ಗಳನ್ನು ನಾವು ಪರಿಶೀಲಿಸುವುದಿಲ್ಲ ಎಂದು ತಿಳಿಸಿದರು.

ಈ ಮೊದಲು ನರೇಂದ್ರ ಮೋದಿ ಅವರ ಫೋಟೋ ಕೂಡ ಬೇರೆ ಯಾವುದೋ ಪದಕ್ಕೆ ಬರುತ್ತಿತ್ತು.. ಹೌದು ಕೆಲವು ದಿನಗಳ ಹಿಂದೆ ಫೇಕ್ ಎಂಬ ಪದಕ್ಕೆ ಉತ್ತರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ತೋರಿಸುತ್ತಿತ್ತು. ಅಲ್ಲದೇ ಪಪ್ಪು ಎಂದು ಟೈಪ್ ಮಾಡಿದಾಗ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಫೋಟೋ ಕೂಡ ಬಂದಿತ್ತು.