ಸುದ್ದಿ

ಇಲ್ಲಿ ಮಹಿಳೆಯರಿಗೆ ಒಂದಲ್ಲ ಎರಡಲ್ಲ 8 ಗಂಡಂದಿರು…!ಮುಂದೆ ಓದಿ…….

By admin

June 06, 2019

ಮಹಾಭಾರತದ ದ್ರೌಪದಿ ಎಲ್ಲರಿಗೂ ಗೊತ್ತು. ಆಕೆ ಪಾಂಡವರ ಪತ್ನಿ. ಐವರು ಗಂಡಂದಿರನ್ನು ಹೊಂದಿದ್ದ ದ್ರೌಪದಿಯೇ ಮಹಾಭಾರತಕ್ಕೆ ಕಾರಣ ಎನ್ನಲಾಗುತ್ತದೆ. ಅದೇನೇ ಇರಲಿ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದಿರುವ ಮಹಿಳೆಯರು ಭಾರತದಲ್ಲಿ ಇದ್ದಾರೆ.

ರಾಜಸ್ತಾನ ಮತ್ತು ಮಧ್ಯಪ್ರದೇಶದ ಗಡಿ ಭಾಗ ಮುರೆನಾದಲ್ಲಿ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದಿರುವ ಮಹಿಳೆಯರಿದ್ದಾರೆ. ಇದು ಹಳೇ ಪದ್ಧತಿಯೇನಲ್ಲ.

ಕೆಲ ವರ್ಷಗಳ ಹಿಂದೆ ಅಲ್ಲಿನ ಮುಖಂಡರು ಗ್ರಾಮದ ಒಳಿತಿಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಊರಿನಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ. ಯುವಕರ ಸಂಖ್ಯೆ ಹೆಚ್ಚಿರುವ ಕಾರಣ ಮುಖಂಡರು ಈ ಪದ್ಧತಿ ಶುರು ಮಾಡಿದ್ದಾರೆ.

ಒಂದು ಮನೆಯಲ್ಲಿ ಒಬ್ಬನೇ ಹುಡುಗನಿದ್ರೆ ಹುಡುಗಿ ಆತನೊಬ್ಬನನ್ನೇ ಮದುವೆಯಾಗಬೇಕು. ಮನೆಯಲ್ಲಿ 8 ಮಂದಿ ಇದ್ರೆ ಎಂಟು ಮಂದಿಯನ್ನೂ ಆಕೆ ಮದುವೆಯಾಗಬೇಕು. ಒಂದೇ ಗಂಡನನ್ನು ಹೊಂದಿರುವ ಮಹಿಳೆಯೂ ಈ ಗ್ರಾಮದಲ್ಲಿದ್ದಾಳೆ. 8 ಗಂಡಂದಿರನ್ನು ಹೊಂದಿರುವ ಮಹಿಳೆಯೂ ಇದ್ದಾಳೆ.