ಬೇಕಾಗುವ ಸಾಮಗ್ರಿಗಳು: ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಎರಡು ಬಟ್ಟಲು ಎಲೆಕೋಸು,ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಮೀಡಿಯಂ ಸೈಜು ಈರುಳ್ಳಿ, ಕಾನ್೯ ಫ್ಲೋರ್ ಎರಡು ಟೀ ಸ್ಪೂನ್, ಮೈದಾಹಿಟ್ಟು ಎರಡು ಟೀ ಸ್ಪೂನ್, ಅಜಿನ ಮೋಟು ಕಾಲು ಚಮಚ, ಅಚ್ಚ ಕಾರದ ಪುಡಿ 1 ಟೀ ಸ್ಪೂನ್, ಗರಂ ಮಸಾಲ ಅರ್ದ ಟೀ ಸ್ಪೂನ್ ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಎಲೆಕೋಸನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ, ಅದಕ್ಕೆ ಎರಡು ಟೀ ಸ್ಪೂನ್ ಕಾನ್೯ ಫ್ಲೋರ್, ಎರಡು ಟೀ ಸ್ಪೂನ್ ಮೈದಾ ಹಿಟ್ಟು,ಕಾಲು ಚಮಚ ಅಜಿನ ಮೋಟು,ಅಚ್ಚ ಕಾರದ ಪುಡಿ ಒಂದು ಟೀ ಸ್ಪೂನ್, ಗರಂ ಮಸಾಲ ಅರ್ದ ಟೀ ಸ್ಪೂನ್ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ, ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲೆಸಿ. ಕಲಸಿದ ತಕ್ಷಣವೇ ಮಾಡಿಬಿಡಬೇಕು .ಇಲ್ಲವಾದರೆ ನೀರು ಬಿಟ್ಟಿಕೊಳ್ಳುತ್ತದೆ. ಕಲಸಲು ಸಹ ನೀರು ಉಪಯೋಗಿಸಬಾರದು.
ನಂತರ ಒಲೆಯ ಮೇಲೆ ಎಣ್ಣೆಯನ್ನು ಇಟ್ಟು ಸಣ್ಣ ಸಣ್ಣ ಉಂಡೆ ಆಕಾರ ಮಾಡಿಕೊಂಡು ಚಿಕ್ಕ ಉರಿಯಲ್ಲಿ ಕರೆದುಕೊಳ್ಳಿ, ಕರೆದಾದ ಮೇಲೆ ಒಲೆಯ ಮೇಲೆ ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಕಾಯಿಸಿ ಅದಕ್ಕೆ ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ದಪ್ಪ ಮೆಣಸಿನಕಾಯಿ, ಹಾಗೂ ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಈರುಳ್ಳಿ ಸೇರಿಸಿ, ಒಲೆಯ ಫ್ಲೇಮ್ ದೊಡ್ಡ ದಾಗಿ ಇರಬೇಕು, ಈರುಳ್ಳಿ ಕೆಂಪಗೆ ಆದ ನಂತರ ದಪ್ಪ ಮೆಣಸಿನಕಾಯಿ ಹಾಕಿ ಅದಾದ ನಂತರ ಕರಿದಿಟ್ಟುಕೊಂಡ ಎಲೆಕೋಸು ಬೋಂಡ ಸೇರಿಸಿ, ಅಮೇಲೆ ಚಿಲ್ಲಿಸಾಸ್ ಹಾಗೂ ವಿನಿಗರ್ ಹಾಕಿ , ನಂತರ ಟೊಮ್ಯಾಟೊ ಸಾಸ್ ಸೇರಿಸಿ ಕೈಯಾಡಿಸಿ, ಪ್ಲೇಟ್ ಗೆ ಹಾಕಿ ಸಾಸ್ ಜೊತೆಯಲ್ಲಿ ತಿನ್ನಲು ಕೊಡಿ.