ದೇವರು

ಬ್ರಹ್ಮ ಹೆಣ್ಣನ್ನ ಸೃಷ್ಟಿ ಮಾಡಿದ್ದು ಯಾಕೆ ಗೊತ್ತಾ, ಹೆಣ್ಣನ್ನ ಸೃಷ್ಟಿಸಲು ಬ್ರಹ್ಮ ತಗೆದುಕೊಂಡ ಸಮಯ ಎಷ್ಟು ಗೊತ್ತಾ. ನೋಡಿ ಹೆಣ್ಣಿನ ಸೃಷ್ಟಿ.

By admin

November 25, 2019

ಹೆಣ್ಣನ್ನ ಅರ್ಥ ಮಾಡಿಕೊಳ್ಳಲು ಯಾರಿಂದಲೂ ಕೂಡ ಸಾಧ್ಯವಿಲ್ಲ, ಪ್ರಪಂಚದ ಸೃಷ್ಟಿಕರ್ತ ಬ್ರಹ್ಮ ದೇವನಿಗೂ ಕೂಡ ಹೆಣ್ಣನ್ನ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಹೆಣ್ಣು ಚಂಚಲೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಬ್ರಹ್ಮ ದೇವಾ ಹೆಣ್ಣನ್ನ ಸೃಷ್ಟಿ ಮಾಡಿದ್ದು ಯಾಕೆ ಮತ್ತು ಹೆಣ್ಣನ್ನ ಸೃಷ್ಟಿ ಮಾಡಲು ಬ್ರಹ್ಮ ದೇವನು ತುಂಬಾ ಸಮಯವನ್ನ ತೆಗೆದುಕೊಳ್ಳಲು ಕಾರಣ ಏನು ಮತ್ತು ಸ್ತ್ರೀ ರಚನೆಯ ವೇಳೆಯಲ್ಲಿ ಬ್ರಹ್ಮ ದೇವಾ ಮತ್ತು ದೇವದೂತರ ನಡುವೆ ನಡೆದ ಮಾತುಕತೆ ಏನು ಎಂದು ತಿಳಿದರೆ ನೀವು ಕೂಡ ಶಾಕ್ ಆಗುತ್ತೀರಿ. ಸ್ನೇಹಿತರೆ ಈ ಜಗತ್ತು ಎಲ್ಲರಿಗೂ ನಿಗೂಢವಾದ ಪ್ರಶ್ನೆಯಾಗಿದೆ ಮತ್ತು ಇನ್ನು ಜಗತ್ತಿನ ಕೆಲವು ಸೃಷ್ಟಿಯ ಬಗ್ಗೆ ಉತ್ತರ ಯಾರಿಗೂ ಸಿಕ್ಕಿಲ್ಲ, ಇನ್ನು ಜನರಲ್ಲಿ ಸದಾ ಕಾಡುವ ಪ್ರಶ್ನೆ ಅಂದರೆ ಈ ಜಗತ್ತಿಗೆ ಮೊದಲು ಬಂದಿದ್ದು ಹೆಣ್ಣಾ ಅಥವಾ ಗಂಡಾ ಅನ್ನುವುದು.

ಇನ್ನು ಇಡೀ ಜಗತ್ತನ್ನ ಒಂದು ನಿಮಿಷದಲ್ಲಿ ಸೃಷ್ಟಿ ಮಾಡಿದ ಬ್ರಹ್ಮ ದೇವನಿಗೆ ಹೆಣ್ಣನ್ನ ಸೃಷ್ಟಿ ಮಾಡಲು ಏಳು ದಿನಗಳು ಕಳೆದರು ಸಾದ್ಯವಾಗಲಿಲ್ಲವಂತೆ, ಹಾಗಾದರೆ ಹೆಣ್ಣನ್ನ ಸೃಷ್ಟಿ ಮಾಡಲು ಬ್ರಹ್ಮ ದೇವಾ ಅಷ್ಟು ಸಮಯ ತೆಗೆದುಕೊಳ್ಳಲು ಇದ್ದ ಬಲವಾದ ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಜಗತ್ತಿನ ಸೃಷ್ಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಬ್ರಹ್ಮ ದೇವನ ಹೆಣ್ಣನ್ನ ಸೃಷ್ಟಿ ಮಾಡಲು ತುಂಬಾ ಸಮಯವನ್ನ ತೆಗೆದುಕೊಂಡ ಕಾರಣ ಅಲ್ಲಿಗೆ ಬಂದ ದೇವದೂತ ಬ್ರಹ್ಮ ದೇವನ ಬಳಿ ಓ ಬ್ರಹ್ಮ ದೇವಾ ಇಡೀ ಜಗತ್ತನ್ನ ಒಂದೇ ನಿಮಿಷದಲ್ಲಿ ಸೃಷ್ಟಿ ಮಾಡಿದ ನೀವು ಹೆಣ್ಣನ್ನ ಸೃಷ್ಟಿ ಮಾಡಲು ಇಷ್ಟು ಸಮಯ ಯಾಕೆ ತಗೆದುಕೊಳ್ಳುತ್ತಿದ್ದೀರಿ ಎಂದು ಬ್ರಹ್ಮ ದೇವನಲ್ಲಿ ದೇವದೂತ ಕೇಳುತ್ತಾನೆ. ಇನ್ನು ದೇವದೂತನ ಪ್ರಶ್ನೆಹೆ ಬ್ರಾಹ್ಮಣ ಉತ್ತರ ಕೇಳಿದರೆ ನೀವು ಶಾಕ್ ಆಗುತ್ತೀರಾ.

ದೇವದೂತ ನಿಮಗೆ ಹೆಣ್ಣಿನ ಗುಣ ತಿಳಿದಿದೆಯಾ, ಒಬ್ಬ ಹೆಣ್ಣು ಯಾವುದೇ ಕಷ್ಟದ ಸಮಯದಲ್ಲಿ ಮತ್ತು ಸಂದರ್ಭದಲ್ಲಿ ಕುಗ್ಗುವುದಿಲ್ಲ ಮತ್ತು ಪರಿಸ್ಥಿತಿ ಒಳ್ಳೆಯದಿರಲಿ ಅಥವಾ ಕೆಟ್ಟದಿರಲಿ ಈಕೆ ಯಾವತ್ತೂ ಸೋಲಲ್ಲ, ದೇವದೂತ ಇಂತಹ ಅದ್ಬುತವನ್ನ ಸೃಷ್ಟಿ ಮಾಡಲು ಸಮಯ ಬೇಕಾ ಅಥವಾ ಬೇಡವಾ ಎಂದು ದೇವದೂತನಿಗೆ ಮರಳಿ ಪ್ರಶ್ನೆಯನ್ನ ಕೇಳುತ್ತಾರೆ ಬ್ರಹ್ಮ ದೇವ. ಇನ್ನು ಸಮಯದಲ್ಲಿ ದೇವದೂತರು ಆಕೆಗೆ ಎರಡು ಕೈಯಿಂದ ಇಷ್ಟೆಲ್ಲ ಹೇಗೆ ಮಾಡಲು ಸಾಧ್ಯ ಎಂದು ಕೇಳುತ್ತಾರೆ, ಇದಕ್ಕೆ ಉತ್ತರಿಸಿದ ಬ್ರಹ್ಮ ದೇವ ಖಂಡಿತ ಸಾಧ್ಯವಿದೆ ಮತ್ತು ಅದಕ್ಕೆ ಈ ಸೃಷ್ಟಿಯಿಂದ ಜಗತ್ತಿನಲ್ಲಿ ಸ್ರೇಷ್ಟವಾದ ಸೃಷ್ಟಿ ಎಂದು ಕರೆಯುತ್ತಾರೆ ಎಂದು ಉತ್ತರವನ್ನ ಕೊಡುತ್ತಾರೆ ಬ್ರಹ್ಮ ದೇವ. ಇನ್ನು ಈ ಸಮಯದಲ್ಲಿ ದೇವದೂತನು ಬ್ರಹ್ಮ ಅರ್ಧ ರಚನೆಯಾಗಿದ್ದ ಹೆಣ್ಣಿನ ಗಲ್ಲವನ್ನ ಮುಟ್ಟುತ್ತಾನೆ ಆಗ ಹೆಣ್ಣಿನ ಗಲ್ಲ ತುಂಬಾ ಮೃದುವಾಗಿರುದನ್ನ ಕಂಡ ದೇವದೂತ ಇಷ್ಟು ಮೃದುವಾದ ಹೆಣ್ಣು ಹೇಗೆ ಅದನ್ನೆಲ್ಲ ನಿಭಾಯಿಸುತ್ತಾಳೆ ಎಂದು ಬ್ರಹ್ಮ ದೇವನಿಗೆ ಪ್ರಶ್ನೆಯನ್ನ ಕೇಳುತ್ತಾರೆ.

ಇದಕ್ಕೆ ಉತ್ತರಿಸಿದ ಬ್ರಾಹ್ಮಣ ಉತ್ತರ ಏನು ಅಂದರೆ, ಈಕೆಯ ಶರೀರ ಮತ್ತು ನಡವಳಿಕೆ ತುಂಬಾ ಮೃದು ಆದರೆ ಒಳಗಿನಿಂದ ಅಷ್ಟೇ ಗಟ್ಟಿ ಮನಸ್ಸಿನವಳಾಗಿದ್ದಾಳೆ ಎಂದು ಉತ್ತರವನ್ನ ಕೊಡುತ್ತಾರೆ ಬ್ರಹ್ಮ ದೇವಾ, ಈಗ ನಿಮಗೆ ಹೇಗೆ ಆಶ್ಚರ್ಯ ಆಗುತ್ತಿದೆಯೋ ಮುಂದೆ ಎಲ್ಲರಿಗೂ ಕೂಡ ಆಶ್ಚರ್ಯ ಆಗುತ್ತದೆ ಎಂದು ಹೇಳುತ್ತಾರೆ ಬ್ರಹ್ಮ ದೇವಾ. ಹೆಣ್ಣಿನಷ್ಟು ಮೃದುವಾದ ವಸ್ತು ಯಾವುದು ಇಲ್ಲ ಮತ್ತು ಈಕೆಯಷ್ಟು ದೃಢವಾದ ವಸ್ತು ಬೇರೊಂದಿಲ್ಲ ಎಂದು ಹೇಳುತ್ತಾರೆ ಬ್ರಹ್ಮ ದೇವಾ. ಇನ್ನು ಈಕೆಯ ಯೋಚನಾ ಶಕ್ತಿಯ ಮುಂದೆ ಯಾವುದೇ ಪುರುಷನಾದರೂ ಸೋಲುತ್ತಾನೆ, ಇನ್ನು ಈಕೆಗೆ ತುಂಬಾ ನೋವಾದಾಗ ಮತ್ತು ಸಹಿಸಿಕೊಳ್ಳಲು ಸಾಧ್ಯವಾಗದಿದ್ದಾಗ ತನ್ನ ಎಲ್ಲಾ ನೋವುಗಳನ್ನ ಕಣ್ಣೀರಿನ ಮೂಲಕ ಹೊರಗೆ ಹಾಕುತ್ತಾಳೆ ಮತ್ತು ಎಲ್ಲವನ್ನ ಮರೆತು ಬೇಗ ಸದೃಢಳಾಗುತ್ತಾಳೆ ಎಂದು ಬ್ರಹ್ಮ ದೇವಾ ಹೆಣ್ಣಿನ ಸೃಷ್ಟಿಯ ಬಗ್ಗೆ ದೇವದೂತನಿಗೆ ವಿವರಣೆಯನ್ನ ಕೊಡುತ್ತಾರೆ, ಸ್ನೇಹಿತರೆ ಹೆಣ್ಣಿನ ಸೃಷ್ಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.