ನಮ್ಮ ಭಾರತ ದೇಶ ಚಾರಿತ್ರಿಕ ಪುರಾತನ ದೇವಾಲಯಗಳ ನಿಲಯ. ಹೀಗಾಗಿ ಅರಬ್ಬಿ ಸಮುದ್ರದಲ್ಲಿ ಇರುವ ಈ ಶಿವಾಲಯ ದಿನವೂ ಮಾಯವಾಗುತ್ತೆ ಮತ್ತೆ ಪ್ರತ್ಯಕ್ಷವಾಗುತ್ತದೆ. ಹಲವಾರು ಶತಮಾನಗಳ ಹಿಂದೆ ನಿರ್ಮಿಸಿದರೂ ಇಂದಿಗೂ ಸುಸ್ಥಿತಿಯಲ್ಲಿರುವ ದೇವಾಲಯಗಳು ಕೆಲವಾದರೆ, ಪುರಾಣಗಳ ಹಿನ್ನೆಲೆಯಲ್ಲಿ ವಿಶಿಷ್ಠ ದೇವಾಲಯಗಳು ಕೂಡ ಸಾಕಷ್ಟು ನಾವು ನೋಡಬಹುದು.ಕೆಲವು ದೇವಾಲಯಗಳು ಅವುಗಳ ನಿರ್ಮಾಣ ಶೈಲಿ, ಆಕಾರ, ಪ್ರಾಚೀನತೆ ಮೊದಲಾದ ಅಂಶಗಳಿಂದ ಪ್ರಚಾರಕ್ಕೆ ಬಂದಿವೆ. ಆದರೆ ಗುಜರಾತ್ ರಾಜ್ಯದಲ್ಲಿರುವ ಒಂದು ಶಿವಾಲಯ ಮಾತ್ರ ಇವೆಲ್ಲಕ್ಕೂ ಭಿನ್ನವಾಗಿವೆ. ಏಕೆಂದರೆ ಈ ದೇವಾಲಯ ಪ್ರತಿದಿನ ಮಾಯವಾಗುತ್ತೆ ಮತ್ತು ಪ್ರತ್ಯಕ್ಷವಾಗುತ್ತದೆ.
ಗುಜರಾತಿನ ವಡೋದರ ಬಳಿಯಿರುವ ಕವಿಕಂಬೋಯ ಎಂಬ ಗ್ರಾಮದ ಬಳಿ ಅರಬ್ಬಿ ಸಮುದ್ರದಲ್ಲಿ ನಿರ್ಮಿಸಿರುವ ಆಲಯದಲ್ಲಿ ಸ್ತಂಭೇಶ್ವರನಾಗಿ ಆ ಪರಮಶಿವನು ನೆಲೆಸಿದ್ದಾನೆ. ಈ ದೇವಾಲಯ ಬಹಳ ಪುರಾತನವಾದದ್ದು ಎಂದು ಇತಿಹಾಸಕಾರರು ಹೇಳುತ್ತಾರೆ. ಸಹಸ್ರಾರು ಶತಮಾನಗಳ ಹಿಂದೆ ಕಾರ್ತಿಕೇಯ ಸ್ವಾಮಿಯೇ ಇದನ್ನು ನಿರ್ಮಿಸಿದ್ದನೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆಗ ತಾರಕಾಸುರನನ್ನು ವಧಿಸಿದ ಸಮಯದಲ್ಲಿ ನಿರ್ಮಿಸಲಾದ ಈ ದೇವಾಲಯ ಸಮುದ್ರದಲ್ಲಿ ಮುಳುಗಿದ್ದು, 150 ವರ್ಷಗಳ ಹಿಂದೆ ಕಾಣಿಸಿಕೊಂಡಿತಂತೆ. ಆದರೂ ಸಹ ಇಂದಿಗೂ ಆ ದೇವಾಲಯ ದಿನವೂ ಸಮುದ್ರದಲ್ಲಿ ಮುಳುಗಿ ಮಾರನೇ ದಿನ ಮತ್ತೆ ಪ್ರತ್ಯಕ್ಷವಾಗುತ್ತದೆಯಂತೆ.
ನಾಲ್ಕು ಅಡಿ ಎತ್ತರವಿರುವ ಈ ಶಿವಲಿಂಗ ತಮ್ಮ ಕೋರಿಕೆಗಳನ್ನ ಈಡೇರಿಸುತ್ತಾನೆ ಎಂದು ಭಕ್ತಕೋಟಿ ನಂಬುತ್ತಾರೆ.ಈ ದೇವಾಲಯದ ದರ್ಶನ ಪಡೆಯಬೇಕೆಂದರೆ ಭಕ್ತರು ಬೆಳಿಗ್ಗೆ ಬರಬೇಕು ಮಧ್ಯಾಹ್ನದವರೆಗೆ ದರ್ಶನ ಮಾಡಿಕೊಂಡು ಪೂಜೆ ಮಾಡಿಕೊಂಡು ತದನಂತರ ಹಿಂದಿರುಗಲೇ ಬೇಕು.ಏಕೆಂದರೆ ಆಗ ಆ ದೇವಾಲಯ ಸಮುದ್ರದಲ್ಲಿ ಮುಳುಗಿ ಹೋಗುತ್ತದೆ. ಆದರೆ ಈ ಆಲಯಕ್ಕೆ ಈ ವಿಶೇಷತೆ ಅಲ್ಲದೆ ಇನ್ನೊಂದು ವಿಶೇಷತೆ ಕೂಡ ಇದೆ.ಈ ದೇವಾಲಯ ಇರುವ ಸ್ಥಳದಲ್ಲಿ ಚೋಟೆ ಮಹೆ ಸಾಗರ್, ಸಬರಮತಿ ಎಂಬ ಎರಡು ನದಿಗಳ ಸಂಗಮವಾಗುತ್ತದೆ. ಇಲ್ಲಿಗೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.