ಈ ದೇಶದಲ್ಲಿ ಮಹಿಳೆಯರು ಹೆಚ್ಚು ಮೇಕಪ್ ಮಾಡಿಕೊಂಡರೆ ಕಠಿಣ ಶಿಕ್ಷೆಗೆ ವಿಧಿಸಲಾಗುತ್ತದೆ. ಸಂಪ್ರದಾಯ ದೇಶ ಸೌದಿ ಅರೇಬಿಯಾದಲ್ಲಿ ಪುರುಷರಂತೆ ಮಹಿಳೆಯರಿಗೆ ಸಮಾನ ಹಕ್ಕುಗಳು ಇಲ್ಲ. ಈ ದೇಶದಲ್ಲಿ ಶರ್ಯ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತದೆ.ಷ್ಟರ ಮಟ್ಟಿಗೆ ಎಂದರೆ ಮಹಿಳೆಯರು ತಾವು ಹಾಕಿಕೊಳ್ಳುವ ಬಟ್ಟೆಯಿಂದ ಹಿಡಿದು ತಮ್ಮ ಗಂಡನ ಆಯ್ಕೆಯನ್ನು ಕೂಡ ಮಾಡಿಕೊಳ್ಳಲು ಇಲ್ಲಿ ಸ್ವತಂತ್ರ ಇಲ್ಲ. ಅಂತ ಕಟ್ಟು ಪಾಡುಗಳನ್ನು ಮೀರಿದರೆ ಕಠಿಣವಾಗಿ ಶಿಕ್ಷೆ ಅನುಭವಿಸ ಬೇಕಾಗುತ್ತದೆ
ಸೌದಿ ಹೆಣ್ಣು ಮಕ್ಕಳು ತಮ್ಮ ಸೌಂದರ್ಯ ಪ್ರದರ್ಶಿಸುವ ಹಾಗೆ ಇಲ್ಲ.ಹೌದು ಇಲ್ಲಿ ಮಹಿಳೆಯರಿಗೆ ಕೆಲವು ಡ್ರೆಸ್ ಕೋಡ್ ಗಳನ್ನ ವಿಧಿಸಲಾಗಿದೆ ಅದನ್ನು ಮೀರಿ ಅವರು ತಮಗೆ ಇಷ್ಟ ಬಂದಂತೆ ಬಟ್ಟೆಗಳನ್ನು ಧರಿಸುವ ಹಾಗೆ ಇಲ್ಲ. ಈ ಮಹಿಳೆಯರು ಕಪ್ಪು ಬಣ್ಣದ ಬುರ್ಕಾ ಅಥವಾ ನಿಲುವಂಗಿಯನ್ನು ತೊಡುತ್ತಾರೆ ಇವುಗಳನ್ನು ಅಭಯ ಎಂದು ಕರೆಯುತ್ತಾರೆ. ಇದರ ಜೊತೆಗೆ ತಲೆ ಮೇಲೆ ಸ್ಕಾರ್ಫ್ ಧರಿಸಲಾಗುತ್ತದೆ ಅಲ್ಲದೆ ಮಹಿಳೆಯರು ಅತಿಯಾಗಿ ಮೇಕಪ್ ಮಾಡಿಕೊಳ್ಳುವಂತೆ ಇಲ್ಲ ಮಹಿಳೆಯರು ತಮ್ಮ ಸೌಂದರ್ಯವನ್ನು ಪ್ರದರ್ಶಿಸಿದರೆ ಶೋಷಣೆಗೆ ಒಳಗಾಗುತ್ತಾರೆ ಎಂಬ ನಂಬಿಕೆ ಪುರುಷರದ್ದು.
ಸೌದಿ ಹೆಣ್ಣು ಮಕ್ಕಳು ಅನ್ಯ ಪುರುಷರ ಜೊತೆ ಮಾತನಾಡುವ ಹಾಗೆ ಇಲ್ಲ. ಹೌದು ಮಹಿಳೆಯರು ಅಪ್ಪಿ ತಪ್ಪಿಯೂ ಅನ್ಯ ಪುರುಷರ ಜೊತೆ ಮಾತನಾಡುವ ಹಾಗೆ ಇಲ್ಲ ಹೀಗಾಗಿ ಬಹುತೇಕ ಸರ್ಕಾರಿ ಕಚೇರಿಗಳು ಬ್ಯಾಂಕ್ ಯೂನಿವರ್ಸಿಟಿ ಮುಂತಾದ ಕಡೆಗಳಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಗಮನ ಮತ್ತು ನಿರ್ಗಮನದ ವ್ಯವಸ್ಥೆ ಮಾಡಲಾಗಿದೆ.ಅಷ್ಟೆ ಯಾಕೆ ಸಾರ್ವಜನಿಕ ಸಾರಿಗೆ ಪಾರ್ಕ್ ಬೀಚ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯು ಅನ್ಯ ಪುರುಷರೊಂದಿಗೆ ಓಡಾಡುವುದು ಅಥವಾ ಮಾತನಾಡುವುದನ್ನು ನಿರ್ಭಂದ ಮಾಡಲಾಗಿದೆ.
ಹೆಣ್ಣು ಕ್ರೀಡೆಯಲ್ಲಿ ಸ್ವತಂತ್ರವಾಗಿ ಪಾಲ್ಗೊಳ್ಳುವಂತೆ ಇಲ್ಲ. ಹೌದು ಸ್ನೇಹಿತರೆ ಕ್ರೀಡೆಯಲ್ಲಿ ಸ್ವತಂತ್ರವಾಗಿ ಪಾಲ್ಗೊಳ್ಳಲು ಮಹಿಳೆಯರಿಗೆ ಅಧಿಕಾರವೇ ಇಲ್ಲ.ಎಷ್ಟರ ಮಟ್ಟಿಗೆ ಅಂದರೆ 2012 ರಲ್ಲಿ ಮೊದಲ ಬಾರಿಗೆ ಸೌದಿ ಅರೇಬಿಯಾ ತನ್ನ ಮಹಿಳಾ ಅಥ್ಲೆಟ್ ಗಳನ್ನು ಒಲಂಪಿಕ್ಸ್ ಗೆ ಕಳಿಸಿತ್ತು ಇದನ್ನು ವಿರೋಧಿಸಿದ ಒಂದು ವರ್ಗ ಮಹಿಳಾ ಅಥ್ಲೆಟ್ ಗಳನ್ನು ವೇಶ್ಯೆಯರು ಎಂದು ಟೀಕೆ ಮಾಡಿತ್ತು ಅದಾದ ಬಳಿಕ 2015 ರಲ್ಲಿ ಮಹಿಳೆಯರನ್ನು ಹೊರತುಪಡಿಸಿ ಒಲಂಪಿಕ್ಸ್ ಆಯೋಜಿಸಲು ಸೌದಿ ಅರೇಬಿಯಾ ಮುಂದೆ ಬಂದಿತ್ತು ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ ಇದೆಲ್ಲದರ ನಡುವೆ ಸೌದಿ ಅರೇಬಿಯಾ ರಾಷ್ಟ್ರೀಯ ಸ್ಟೇಡಿಯಂ ಪ್ರವೇಶಿಸಲು 2017 ರಲ್ಲಿ ಮಹಿಳೆಯರಿಗೆ ಮೊದಲ ಬಾರಿಗೆ ಅವಕಾಶ ನೀಡಲಾಯಿತು.