ಸುದ್ದಿ

‘ಸೋಷಿಯಲ್ ಮೀಡಿಯಾ’ ಬಳಸುವ ಮುನ್ನಾ ಬಾರಿ ಎಚ್ಚರದಿಂದಿರಿ..!ಯಾಕೆ ಗೊತ್ತಾ?

By admin

October 23, 2019

ಸೋಷಿಯಲ್‌ ಮೀಡಿಯಾಗಳಿಗೆ ಲಗಾಮು ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಚೋದನೆ, ಸುಳ್ಳು ಸುದ್ದಿ, ಮಾನಹಾನಿ ಮತ್ತು ದೇಶದ್ರೋಹಿಗಳಂಥ ಪೋಸ್ಟ್‌ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಜನವರಿ 15ರಿಂದ ಹೊಸ ನಿಯಮ ಜಾರಿಗೆ ತರುತ್ತಿದೆ ನಮ್ಮ ಭಾರತ.

ಈ ಬಗ್ಗೆ ಸುಪ್ರೀಕೋರ್ಟ್‌ಗೆ ಇಂದು ವರದಿ ಕೂಡ ಸಲ್ಲಿಸಿದೆ. ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳ ಡೀಕ್ರಿಪ್ಟ್ ಮಾಡಿದ ಡೇಟಾ ಹಂಚಿಕೊಳ್ಳುವ ಬೇಡಿಕೆಗೆ ಸಂಬಂಧಿಸಿದಂತೆ ಮದ್ರಾಸ್, ಬಾಂಬೆ ಮತ್ತು ಮಧ್ಯಪ್ರದೇಶದ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್ ವರ್ಗಾಯಿಸಿಕೊಂಡಿದೆ.

ರಾಷ್ಟ್ರೀಯ ಭದ್ರತೆ ಧಕ್ಕೆ ತರುವ ಪೋಸ್ಟ್‌ಗಳ ಪ್ರಕರಣಗಳನ್ನು ಸುಪ್ರೀಕೋರ್ಟ್‌ಗೆ ವರ್ಗಾಯಿಸುವಂತೆ ಫೇಸ್‌ಬುಕ್‌ ಮತ್ತು ವಾಟ್ಸಾಪ್‌ ಸಂಸ್ಥೆಗಳು ಕೋರಿದ್ದವು.

ಡೀಕ್ರಿಫ್ಟ್‌ಗೆ ಸಂಬಂಧಿಸಿದಂತೆ ತನ್ನ ಬಳಿ ಯಾವುದೇ ಕೀ ಇಲ್ಲ ಎಂದಿರುವ ಫೇಸ್‌ಬುಕ್ ಮತ್ತು ವಾಟ್ಸಾಪ್ ಸಂಸ್ಥೆಗಳು, ಈ ವಿಷಯದಲ್ಲಿ ನಾವು ತನಿಖಾಧಿಕಾರಿಗಳಿಗೆ ಮಾತ್ರ ಸಹಕಾರ ನೀಡಬಹುದಾಗಿವೆ ಎಂದು ಕೋರ್ಟ್‌ಗೆ ತಿಳಿಸಿವೆ.