ಸುದ್ದಿ

ಈ ದ್ವೀಪದ ಪ್ರತಿ ಹೆಜ್ಜೆಯಲ್ಲೂ ಸಾವೇ ಹಿಂಬಾಲಿಸುತ್ತದೆ! ಚರ್ಮ ಮತ್ತು ಮಾಂಸವನ್ನು ಕರಗಿಸಿಬಿಡುವಷ್ಟು ಶಕ್ತಿ ಈ ದ್ವೀಪದಲ್ಲಿದೆ…ಏನೆಂದು ತಿಳಿಯಿರಿ?

By admin

July 17, 2019

ಬಹುಶಃ ಮಾನವನಿಗೆ ಕಾಲಿಡೋಕೆ ಸಾಧ್ಯವಾಗದೇ ಇರುವ ಕೆಲವು ವಿಸ್ಮಯ ಪ್ರದೇಶಗಳು ನಮ್ಮ ಪ್ರಪಂಚದಲ್ಲಿದ್ದು, ನಾನಾ ನಿಗೂಢತೆಗಳನ್ನು ತನ್ನ ಮಡಿಲಿನಲ್ಲಿ ಬಚ್ಚಿಟ್ಟುಕೊಂಡಿದೆ!! ಹೀಗಿರಬೇಕಾದರೆ ಮುಖ್ಯ ಭೂಭಾಗದೊಂದಿಗೆ ಸಂಪರ್ಕವನ್ನು ಕಡಿದುಕೊಂಡು, ಪ್ರತ್ಯೇಕ ದ್ವೀಪವಾಗಿದ್ದರೂ ಕೂಡ ಅದು ಮಾನವನಿಂದ ಇನ್ನೂ ಮುಟ್ಟಲು ಅಸಾದ್ಯ!! ದ್ವೀಪದೊಳಗೆ ಒಂದು ಬಾರಿ ಕಾಲಿಟ್ಟರೆ ಹಿಂತಿರುಗುವ ಯಾವ ಗ್ಯಾರೆಂಟಿಯೂ ಇಲ್ಲ. ಯಾಕೆಂದರೆ ಪ್ರತಿ ಹೆಜ್ಜೆಯಲ್ಲೂ ಕೂಡ ಸಾವೇ ಹಿಂಬಾಲಿಸುತ್ತದೆ!!

ಜಗತ್ತಿನಲ್ಲಿ ತಿಳಿಯದಿರದ ಅದೆಷ್ಟೋ ವಿಷಯಗಳು ಇರುತ್ತವೆ. ಅದರಲ್ಲೂ ವಿಚಿತ್ರವೆನಿಸುವ ಸಂಗತಿಗಳು ಸಾಕಷ್ಟಿದ್ದು, ಕುತೂಹಲಕ್ಕೂ ಕಾರಣವಾಗುತ್ತಲೇ ಇದೆ!! ಈ ರೀತಿಯ ಕೌತುಕ ಮೂಡಿಸುವ ದ್ವೀಪವೇ ಸರ್ಪ ದ್ವೀಪ!! ಬ್ರೆಜಿಲ್‍ನ ಸಾವೋ ಪೌಲೋದಿಂದ ಕೇವಲ 21 ಕಿಲೋಮೀಟರ್ ದೂರದಲ್ಲಿರುವ ಈ ಸರ್ಪ ದ್ವೀಪದ ಹೆಸರೇ ಇಲ್ಹಾ ಡ ಕ್ವಿಮಾಡ ಗ್ರಾಂಡೇ!! ಜನಸಂಪರ್ಕದಿಂದ ದೂರ ಉಳಿದಿರುವ ಈ ದ್ವೀಪ ಬರೀ ವಿಷಪೂರಿತ ಹಾವುಗಳಿಂದ ತುಂಬಿ ತುಳುಕಾಡುತ್ತಿದೆ.

ಈ ದ್ವೀಪದಲ್ಲಿ ಅತ್ಯಂತ ಭಯಂಕರ ಮತ್ತು ವಿಷಕಾರಕ ಸರ್ಪಗಳು ಇರುವುದರಿಂದ ಈ ದ್ವೀಪಕ್ಕೆ ಮನುಷ್ಯರ ಪ್ರವೇಶವನ್ನೇ ನಿರ್ಬಂಧಿಸಲಾಗಿದೆ!! ಹೌದು… ಈ ದ್ವೀಪದಲ್ಲಿರುವ ಹಾವುಗಳು ಕಚ್ಚಿದ ತಕ್ಷಣ ಸಾವು ನಿಶ್ಚಿತ. ಅದಕ್ಕಾಗಿಯೇ ಈ ದ್ವೀಪಕ್ಕೆ ಭೇಟಿ ಕೊಟ್ಟವರು ಮರಳಿ ಬರುತ್ತಾರೆಂಬ ನಂಬಿಕೆ ಇಲ್ಲ. ಹಾಗಾಗಿ ಬ್ರೆಜಿಲ್ ಸರಕಾರವು ಈ ದ್ವೀಪಕ್ಕೆ ಭೇಟಿ ನೀಡುವುದನ್ನು ನಿರ್ಬಂಧಿಸಿದೆ. ಆದರೆ ಇಲ್ಹಾ ಡ ಕ್ವಿಮಾಡ ಗ್ರಾಂಡೇ ದ್ವೀಪವು ಮೊದಲು ಮುಖ್ಯ ಭೂಭಾಗದೊಂದಿಗೆ ಸಂಪರ್ಕ ಹೊಂದಿತ್ತು. ನಂತರ ಸಮುದ್ರ ಮಟ್ಟ ಏರುಮುಖವಾದ ಹಿನ್ನೆಲೆಯಲ್ಲಿ ಮುಖ್ಯ ಭೂಭಾಗದೊಂದಿಗೆ ಸಂಪರ್ಕ ಕಡಿದುಕೊಂಡು, ಪ್ರತ್ಯೇಕ ದ್ವೀಪವಾದ ಮೇಲೆ ಹೊಸಹೊಸ ಜಾತಿಯ ಸರ್ಪಗಳ ವಿಕಸನಕ್ಕೆ ಈ ದ್ವೀಪ ನಾಂದಿಯಾಯಿತು ಎನ್ನಲಾಗುತ್ತದೆ.

ಈ ದ್ವೀಪದಲ್ಲಿರುವ ಹಾವುಗಳಲ್ಲಿ ಹೆಚ್ಚಿನವು ವಿಷಪೂರಿತ. ಇಲ್ಲಿಯವರೆಗೆ 2000- 4000 ಜಾತಿಯ ಹಾವುಗಳನ್ನು ಈ ದ್ವೀಪದಲ್ಲಿ ಗುರುತಿಸಲಾಗಿದೆ. 110 ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ ಈ ದ್ವೀಪದಲ್ಲಿ ಸುಮಾರು 4,30,000ಕ್ಕೂ ಹೆಚ್ಚು ವಿಷಪೂರಿತ ಹಾವುಗಳು ಇವೆಯೆಂದು ಗುರುತಿಸಲಾಗಿದೆ. ಈ ದ್ವೀಪದ ಗಾತ್ರಕ್ಕೆ ಹೋಲಿಸಿದರೆ ಹಾವುಗಳ ಸಂಖ್ಯೆಯೇ ಅಧಿಕ. ಪ್ರತಿ ಚದರ ಮೀಟರ್‍ಗೆ ಕನಿಷ್ಠ ಒಂದರಂತೆ ಹಾವುಗಳನ್ನು ಇಲ್ಲಿ ಕಾಣಬಹುದು. ಹಾಗಾಗಿ ಈ ದ್ವೀಪ ಹೊಕ್ಕವರು ಹಿಂದಿರುಗುವುದು ಕನಸಿನ ಮಾತೇ ಸರಿ. ಆದರೆ ಇಲ್ಲಿರುವ “ಗೋಲ್ಡನ್ ಲ್ಯಾನ್ಸ್ ಹೆಡ್” ಎಂದು ಸಾಮಾನ್ಯವಾಗಿ ಗುರುತಿಸಲ್ಪಡುವ “ಬತ್ರೋಸ್ಸ್ ಇಸ್ನಸುಲಾರಿಸ್” ಎಂಬ ಜಾತಿಯ ಹಾವಿನ ವಿಷ ಅತಿ ಘೋರ. ಈ ಹಾವಿನ ವಿಷವು ಮಾರಣಾಂತಿಕವಾಗಿದ್ದು, ದೇಹವನ್ನು ಹೊಕ್ಕಿಬಿಟ್ಟರೆ ಚರ್ಮ ಮತ್ತು ಮಾಂಸವನ್ನು ಕರಗಿಸಿಬಿಡುವಷ್ಟು ಶಕ್ತಿ ಹೊಂದಿದೆ. ಗರಿಷ್ಠ ನಾಲ್ಕು ಅಡಿ ಉದ್ದ ಇರುವ ಈ ಜಾತಿಯ ಹಾವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಇವನ್ನು ವಿನಾಶದ ಅಂಚಿನಲ್ಲಿರುವ ಹಾವಿನ ಜಾತಿಯೆಂದು ಪರಿಗಣಿಸಿ ಕಾಪಾಡಲಾಗುತ್ತಿದೆ. ಈ ದ್ವೀಪಕ್ಕೆ ಸಾಮಾನ್ಯರ ಪ್ರವೇಶವನ್ನು ನಿಷೇಧಿಸಲಾಗಿದ್ದರೂ, ಈ ದ್ವೀಪದಲ್ಲಿರುವ ಸ್ವಯಂಚಾಲಿತ ಲೈಟ್ ಹೌಸ್ ಅನ್ನು ನೌಕಾಪಡೆಯು ನೋಡಿಕೊಳ್ಳುತ್ತದೆ. ಹಾಗಾಗಿ ನಿರ್ವಹಣಾ ಸಿಬ್ಬಂದಿಗೆ ಹಾಗೂ ಪರಿಸರದ ಅಧ್ಯಯನ ಮಾಡುವ ಸಂಶೋಧಕರಿಗೆ ಸರಕಾರ ವಿಶೇಷ ಪರವಾನಗಿ ನೀಡಿದ್ದು, ಅವರಿಗೆ ಮಾತ್ರ ಈ ದ್ವೀಪದೊಳಗೆ ಹೋಗಲು ಅನುಮತಿ ಇದೆ. ಮನುಷ್ಯರನ್ನೇ ಬೆಚ್ಚಿಬೀಳಿಸಿರುವ ವಿಶ್ವದ ಏಕೈಕ ದ್ವೀಪದಲ್ಲಿ ಪ್ರತಿವರ್ಷ ವಿಜ್ಞಾನಿಗಳಿಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಇದೇ ದ್ವೀಪದಲ್ಲಿ ಒಂದು ಲೈಟ್ ಹೌಸ್ ನಿರ್ಮಿಸಲಾಗಿದ್ದು ಇದರ ಉಸ್ತುವರಿಗಾಗಿ ಅಧಿಕಾರಿಯನ್ನು ಬ್ರೆಜಿಲ್ ಸರಕಾರ ನಿಯೋಜಿಸಿತ್ತು!! ಆದರೆ ಒಂದು ದಿನ ಆಕಸ್ಮಿಕವಾಗಿ ಅಧಿಕಾರಿ ವಾಸವಿದ್ದ ಮನೆಯ ಕಿಟಕಿ ಒಡೆದು ಸಾವಿರಾರು ಹಾವುಗಳು ಮನೆಗೆ ನುಗ್ಗಿ ಇಡೀ ಕುಟುಂಬವನ್ನೇ ನಿರ್ನಾಮ ಮಾಡಿತ್ತು!! ಈ ಭೀಕರ ಘಟನೆಯಿಂದಾಗಿ ಲೈಟ್ ಹೌಸ್ ಅನ್ನು ಶಾಶ್ವತವಾಗಿ ಮುಚ್ಚಲಾಯಿತು. ಅಂದಿನಿಂದ ಈ ಪ್ರದೇಶಗಳಲ್ಲಿ ಹಾವುಗಳದ್ದೇ ರಾಜ್ಯ ಭಾರ ಶುರುವಾಯಿತು ಎನ್ನಲಾಗಿದೆ!! ಒಟ್ಟಿನಲ್ಲಿ 110 ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ ಈ ದ್ವೀಪದಲ್ಲಿ 4,30,000 ಕ್ಕೂ ಹೆಚ್ಚಿನ ವಿಷಪೂರಿತ ಹಾವುಗಳ ಮನೆಯಾಗಿ ಹೋಗಿದೆ. ಯಾರಾದರೂ ಈ ದ್ವೀಪದ ಒಳ ಹೊಕ್ಕರೇ ಸಾಕು…. ಅವರ ಪ್ರತಿ ಹೆಜ್ಜೆಯೂ ಸಾವಿಗೆ ಸಮೀಪವಾಗಿರುವುದಂತೂ ಅಕ್ಷರಶಃ ನಿಜ!!