ಆರೋಗ್ಯ

ಸಿಗರೇಟ್ ಚಟದಿಂದ ಹೊರಗೆ ಬರಲು ಈ ಜ್ಯೂಸ್ ಕುಡಿಯಿರಿ ಸಾಕು.

By admin

March 09, 2020

ನಮ್ಮ ದೇಶದಲ್ಲಿ ಸಿಗರೇಟ್ ಸೇವನೆ ಮಾಡುವವರು ಬಹಳಷ್ಟು ಜನರು ಇದ್ದಾರೆ ಬರಿ ಗಂಡಸರು ಅಷ್ಟೇ ಅಲ್ದೆ ಮಹಿಳೆಯರು ಕೂಡ ಈ ಧೂಮಪಾನ ಸೇವನೆ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಆರೋಗ್ಯಕ್ಕೆ ಮಾರಕವಾಗಿ ಕಾಡುವಂತ ಈ ಧೂಮಪಾವನ್ನು ನಿಯಂತ್ರಿಸಲು ಹಲವು ವಿಧಾನಗಳಿವೆ ಆದ್ರೆ ಈ ಚಟದಿಂದ ಬೇಗನೆ ಮುಕ್ತಿ ಪಡೆಯಲು ಆಗೋದಿಲ್ಲ, ಅಂತವರಿಗೆ ಈ ನಿಂಬೆ ಜ್ಯುಸ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಅನ್ನೋದನ್ನ ಧೈಲ್ಯಾಂಡ್ ನ ಸಂಶೋಧನೆ ಸಾಬೀತು ಪಡಿಸಿದೆ.

ಧೂಮಪಾನದಿಂದ ಕಾನ್ಸರ್ ಮುಂತಾದ ಮಾರಕ ಕಾಯಿಲೆಗಳು ಬರುತ್ತವೆ ಅಂತಹ ಕಾಯಿಲೆಗಳಿಂದ ದೂರ ಉಳಿಯಲು ಹಾಗು ಧೂಮಪಾನದ ಚಟವನ್ನು ನಿಯಂತ್ರಿಸಲು ಈ ನಿಂಬೆ ಸಹಕಾರಿ ಅನ್ನೋದನ್ನ ತಿಳಿಯಲಾಗಿದೆ ಹೌದು ಥಾಯ್ಲೆಂಡ್​ನ Srinakharinwirot University ಮೆಡಿಸಿನ್ ವಿಭಾಗದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಸಿಗರೇಟ್​ ಸೇವನೆಯಿಂದ ಮುಕ್ತಿ ಪಡೆಯಲು ನಿಂಬೆ ಜ್ಯೂಸ್ ಪರಿಣಾಮಕಾರಿ ಎಂಬುದು ತಿಳಿದುಬಂದಿದೆ. ಈ ಅಧ್ಯಯನಕ್ಕಾಗಿ ಎರಡು ಗುಂಪುಗಳನ್ನು ರಚನೆ ಮಾಡಲಾಯಿತು ಹಾಗೂ ಎರಡು ಗುಂಪುಗಳಲ್ಲಿ ಒಂದು ಗುಂಪಿಗೆ ನಿಂಬೆ ರಸವನ್ನು ಕೊಡಲಾಯಿತು ಇನ್ನೊಂದು ಗುಂಪಿಗೆ ಚ್ಯುಯಿಂಗಮ್ ಕೊಡಲಾಗಿತ್ತು. ಇದರಲ್ಲಿ ಕಂಡು ಬಂದ ಫಲಿತಾಂಶ ಚ್ಯುಯಿಂಗಮ್ ಜಗಿದವರಿಕ್ಕಿಂತ ನಿಂಬೆ ಜ್ಯೂಸ್ ಕುಡಿದವರಲ್ಲಿ ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿರುವುದು ಕಂಡು ಬಂದಿದೆ. ಅಲ್ಲದೆ ನಿಂಬೆ ರಸವನ್ನು ಸೇವಿಸಿದವರಲ್ಲಿ ಧಮ್ ಹೊಡೆಯುವ ಬಯಕೆಯು ಕಡಿಮೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಹಾಗದರೆ ಈ ನಿಂಬೆ ಜ್ಯುಸ್ ತಯಾರಿಸೋದು ಹೇಗೆ ಅನ್ನೋದನ್ನ ಹೇಳುವುದಾದರೆ ಮೊದಲು ಒಂದು ಹಳದಿ ಬಣ್ಣದ ನಿಂಬೆಹಣ್ಣು ಅದರ ಜೊತೆಗೆ ಇನ್ನೊಂದು ಹಸಿರು ಬಣ್ಣದ ನಿಂಬೆ, ಒಂದು ಚಮಚ ಸಕ್ಕರೆ ಒಂದು ಕಪ್ ನೀರು ಹಾಗೂ ಸ್ವಲ್ಪ ಐಸ್. ಇಷ್ಟು ಬೇಕಾಗುತ್ತದೆ ಇದನ್ನು ತಯಾರಿಸೋದು ನಿಂಬೆಯನ್ನು ಕಟ್ ಮಾಡಿ ಅದರ ರಸವನ್ನು ತಗೆದು ಸಕ್ಕರೆ ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ಸೇವನೆ ಮಾಡಿದರೆ ಸಿಗರೇಟ್ ಸೇದಬೇಕು ಅನ್ನೋ ಬಯಕೆ ಬರೋದಿಲ್ಲ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಈ ನಿಂಬೆ ಜ್ಯುಸ್ ತಯಾರಿಸಿ ಸೇವನೆ ಮಾಡುವುದು ಉತ್ತಮ.