ಆರೋಗ್ಯ

ರಾತ್ರಿ ಮಲಗುವ ಸಮಯದಲ್ಲಿ ಈ ತಪ್ಪನ್ನ ಮಾಡಬೇಡಿ. ಮಲಗುವ ಮುನ್ನ ಎಚ್ಚರ.!

By admin

December 21, 2019

ಹಿರಿಯರ ಒಂದೊಂದು ಮಾತುಗಳು ಕಟ್ಟಿಟ್ಟ ಬುತ್ತಿ, ಬೆಳಿಗ್ಗೆಯಿಂದ ಸಂಜೆಯವರೆಗೆ ಮಾಡುವ ಎಲ್ಲಾ ಕೆಲಸದಲ್ಲೂ ಒಂದು ರೀತಿಯ ಅರ್ಥ ಇರುತ್ತದೆ, ಇನ್ನು ಕೆಲವು ಕೆಲಸಗಳನ್ನ ಈ ರೀತಿಯಲ್ಲಿ ಮಾಡಬೇಕು ಎಂದು ರೀತಿ ರಿವಾಜುಗಳು ಇದೆ. ನಾವು ಮಲಗುವಾಗ ಯಾವ ಕಡೆ ತಲೆಯನ್ನ ಹಾಕಿ ಮಲಗಬೇಕು ಎಂದು ಕೆಲವು ನಿಯಮಗಳನ್ನ ಇಡಲಾಗಿದೆ, ಮಲಗುವ ಈ ನಿಯಮದ ಬಗ್ಗೆ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ವಾಸ್ತು ಪ್ರಕಾರವಾಗಿ ಉತ್ತರ ದಿಕ್ಕಿಗೆ ತಲೆಯನ್ನ ಹಾಕಿ ಮಲಗಬಾರದು, ಇನ್ನು ಉತ್ತರ ದಿಕ್ಕಿಗೆ ತಲೆಯನ್ನ ಹಾಕಿ ಮಲಗುವುದರಿಂದ ಜೀವನದಲ್ಲಿ ತೊಂದರೆಯನ್ನ ಎದುರಿಸಬೆಳಗುತ್ತದೆ ಮತ್ತು ನಿಮಗೆ ನಿದ್ರೆ ಸರಿಯಾಗಿ ಬಾರದೆ ಕೆಟ್ಟ ಕನಸುಗಳು ಬೀಳುತ್ತದೆ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿಗೆ ತಲೆಯನ್ನ ಹಾಕಿ ಮಲಗಬಾರದು ಮತ್ತು ಈ ದಿಕ್ಕಿಗೆ ತಲೆಯನ್ನ ಹಾಕಿ ಮಲಗಿದರೆ ನಿಮ್ಮ ದಿನನಿತ್ಯದ ಜೀವನದಲ್ಲಿ ಅನೇಕ ತೊಂದರೆಗಳು ಎದುರಾಗುತ್ತದೆ. ಇನ್ನು ವೈಜ್ಞಾನಿಕವಾಗಿ ಹೇಳಬೇಕು ಅಂದರೆ ಭೂಮಿಗೆ ಆಯಸ್ಕಾಅಂತ ಗುಣವು ದಕ್ಷಿಣ ದಿಕ್ಕಿನಿಂದ ಉತ್ತರಕ್ಕೆ ಚಲಿಸುವುದರಿಂದ ಉತ್ತರ ದಿಕ್ಕಿಗೆ ತಲೆಯನ್ನ ಹಾಕಿದರೆ ಎದ್ದು ನಮ್ಮ ಮೆದುಳಿನ ಮೇಲೆ ಭಾರಿ ಪರಿಣಾಮವನ್ನ ಬೀರುತ್ತದೆ. ಈ ಕಾರಣಕ್ಕೆ ಉತ್ತರ ದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆಯನ್ನ ಹಾಕಿ ಮಲಗಬಾರದು.

ಇನ್ನು ಅನಾರೋಗ್ಯದಿಂದ ಬಳಲುತ್ತಿರುವವರು ಪೂರ್ವ ದಿಕ್ಕಿಗೆ ತಲೆಯನ್ನ ಹಾಕಿ ಮಲಗುವುದು ಬಹಳ ಒಳ್ಳೆಯದು ಮತ್ತು ವಿದ್ಯಾರ್ಥಿಗಳಿಗೂ ಕೂಡ ತುಂಬಾ ಒಳ್ಳೆಯದು. ಇನ್ನು ಪಶ್ಚಿಮ ದಿಕ್ಕಿಗೆ ತಲೆಯನ್ನ ಹಾಕಿ ಮಲಬಾರದು, ಈ ದಿಕ್ಕಿಗೆ ತಲೆಯನ್ನ ಹಾಕಿದರೆ ಅನೇಕ ತೊಂದರೆಗಳನ್ನ ನೀವು ಎದುರಿಸಬೇಕಾಗುತ್ತದೆ ಮತ್ತು ಇದು ಸೂರ್ಯ ಮುಳುಗುವ ದಿಕ್ಕು ಆಗುವುದರಿಂದ ಯಾವುದೇ ಕಾರಣಕ್ಕೂ ಈ ದಿಕ್ಕಿಗೆ ತಲೆಯನ್ನ ಹಾಕಿ ಮಲಗಬಾರದು. ಇನ್ನು ದಿಕ್ಕಿಗೆ ತಲೆಯನ್ನ ಹಾಕಿ ಮಲಗಿದರೆ ನೆಗೆಟಿವ್ ಎನೆರ್ಜಿಗಳು ನಮ್ಮ ಮೇಲೆ ದಾಳಿ ಮಾಡುವ ಸಾಧ್ಯತೆ ಜಾಸ್ತಿ ಇರುತ್ತದೆ. ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ತಪ್ಪದೆ ಎಲ್ಲರಿಗೂ ತಲುಪಿಸಿ.

ಇನ್ನು ರಾತ್ರಿ ಮಲಗುವಾಗ ದಕ್ಷಿಣ ದಿಕ್ಕಿಗೆ ತಲೆಯನ್ನ ಹಾಕಿದರೆ ತುಂಬಾ ಒಳ್ಳೆಯದು ಮತ್ತು ವಾಸ್ತು ಶಾಸ್ತ್ರ ಕೂಡ ಇದನ್ನೇ ಹೇಳುತ್ತದೆ, ಇನ್ನು ದಕ್ಷಿಣ ದಿಕ್ಕಿಗೆ ತಲೆಯನ್ನ ಹಾಕಿ ಮಲಗಿದರೆ ಜೀವನದಲ್ಲಿ ನೀವು ಯಶಸ್ಸನ್ನ ಸಾಧಿಸುತ್ತೀರಿ. ಇನ್ನು ಈ ದಿಕ್ಕಿಗೆ ತಲೆಯನ್ನ ಹಾಕಿ ಮಲಗಿದರೆ ಮನೆಯಲ್ಲಿ ಕೌಟುಂಬಿಕ ಸಮಸ್ಯೆಗಳು ನಿವಾರಣೆ ಆಗಲಿದೆ. ಇನ್ನು ಪೂರ್ವ ದಿಕ್ಕಿಗೆ ತಲೆಯನ್ನ ಹಾಕಿ ಮಲಗುವುದು ತುಂಬಾ ಒಳ್ಳೆಯದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ, ಇನ್ನು ಈ ದಿಕ್ಕಿಗೆ ತಲೆಯನ್ನ ಹಾಕಿ ಮಲಗಿದರೆ ಜೀವನದಲ್ಲಿ ಇರುವ ಕಷ್ಟಗಳು ನಿವಾರಣೆ ಆಗುತ್ತದೆ ಮತ್ತು ಒಳ್ಳೆಯ ಚೈತನ್ಯ ಮೂಡುತ್ತದೆ.