ರಾಜಕೀಯ ಮುಖಂಡರು ತಾವು ಏನು ಹೇಳುತ್ತಿದ್ದೇವೆ ಎಂಬ ಪರಿವೆ ಇಲ್ಲದೇ ಇಲ್ಲ ಸಲ್ಲದ ವಿವಾಧತ್ಮಕ ಹೇಳಿಕೆಗಳನ್ನು ಕೊಡುವುದರಲ್ಲಿ ಮೊದಲಿಗರಾಗಿರುತ್ತಾರೆ. ಈಗ ಹಿಂದೂಗಳು ಹಿಂಸಾಚಾರ ಮಾಡುತ್ತಾರೆ ಎಂಬುದನ್ನ ಈ ಹಿಂದೂ ಧರ್ಮದ ಈ ಮಹಾಕಾವ್ಯಗಳಿಗೆ ಹೋಲಿಕೆ ಮಾಡುವುದರ ಮುಖಾಂತರ ವಿವಾದ ಸೃಷ್ಟಿಸಿದ್ದಾರೆ.
ಹಿಂದೂಗಳು ಹಿಂಸಾಚಾರ ಮಾಡ್ತಾರೆ ಎಂಬುದಕ್ಕೆ ರಾಮಾಯಣ-ಮಹಾಭಾರತವೇ ಸಾಕ್ಷಿ ಎಂದು ಹೇಳುವ ಮೂಲಕ ಸಿಪಿಐ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಯಚೂರಿ ವಿವಾದ ಸೃಷ್ಟಿಸಿದ್ದಾರೆ.
ಹಿಂದೂಗಳು ಶಾಂತಿ ಪ್ರಿಯರು ಆದ್ರೆ ಕೆಲ ಧರ್ಮದವರು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಕೆಲ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಯಚೂರಿ ‘ರಾಮಾಯಣ, ಮಹಾಭಾರತದಲ್ಲಿ ಸಾಕಷ್ಟು ಹಿಂಸಾಚಾರ ಹಾಗೂ ಯುದ್ಧಗಳಿವೆ. ಆದ್ರೆ ಆರ್.ಎಸ್.ಎಸ್. ಇದನ್ನು ಮಹಾಕಾವ್ಯ ಎಂದು ಬಣ್ಣಿಸುತ್ತಿದೆ. ಹೀಗಿದ್ರೂ ಹಿಂದೂಗಳು ಹಿಂಸಾಚಾರ ಮಾಡಲ್ಲ ಅಂತಾ ಹೇಳ್ತೀರಾ ಅಂತಾ ಪ್ರಶ್ನಿಸಿದ್ದಾರೆ.
ಇನ್ನು ಇದೇ ವೇಳೆ ಆರ್.ಎಸ್.ಎಸ್. ವಿರುದ್ಧ ಹರಿಹಾಯ್ದಿರುವ ಯೆಚೂರಿ ‘ಹಸುವನ್ನು ಕೊಲ್ಲುವವರ ವಿರುದ್ಧ ಹೋರಾಡಲು ಆರ್.ಎಸ್.ಎಸ್. ಖಾಸಗಿ ಸೇನೆಯೊಂದನ್ನು ರಚನೆ ಮಾಡಿಕೊಳ್ತಿದೆʼ ಎಂದಿದ್ದಾರೆ.