ಕೊರೆಯುವ, ಥರಗುಟ್ಟುವ ಚಳಿಯಲ್ಲಿ ಕೆಲವರು ಪ್ರತಿದಿನ ಸ್ನಾನ ಮಾಡಲು ಇಷ್ಟ ಪಡುವುದಿಲ್ಲ. ಅನೇಕರು ಪ್ರತಿದಿನ ಸ್ನಾನ ಮಾಡ್ತಾರೆ. ಪ್ರತಿದಿನ ಸ್ನಾನ ಮಾಡೋರು ಬೆಸ್ಟ್ ಅಂತಾ ನೀವು ಹೇಳಬಹುದು. ಆದ್ರೆ ಸಂಶೋಧನೆಯೊಂದು ನಿಮಗೆ ಆಶ್ಚರ್ಯವಾಗುವಂತಹ ಸಂಗತಿ ಹೇಳಿದೆ.
ಪ್ರತಿದಿನ ಸ್ನಾನ ಮಾಡೋರು ಗಮನ ಇಟ್ಟು ಓದಿ. ಪ್ರತಿದಿನ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ. ಹಾಗೆ ಮಾಡುವವರು ಹೆಚ್ಚಿನ ಬಾರಿ ಅನಾರೋಗ್ಯಕ್ಕೆ ತುತ್ತಾಗ್ತಾರಂತೆ. ಯಸ್, ಸಂಶೋಧನೆಯೊಂದು ಈ ವಿಷಯವನ್ನು ಹೇಳಿದೆ.
ನಮ್ಮ ದೇಹಕ್ಕೆ ಎಣ್ಣೆಯ ಅವಶ್ಯಕತೆ ಇದೆ. ದೇಹದಲ್ಲಿರುವ ತೈಲದ ಅಂಶ ಪ್ರತಿದಿನ ಸ್ನಾನ ಮಾಡುವುದರಿಂದ ಹೋಗುತ್ತದೆ. ಇದರಿಂದಾಗಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಪಶ್ಚಿಮ ದೇಶಗಳ ಜನರಿಗೆ ಇದು ಒಳ್ಳೆಯದಲ್ಲ. ಯಾಕೆಂದ್ರೆ ಸ್ನಾನಕ್ಕಿಂತ ಮುನ್ನ ಅವರು ದೇಹಕ್ಕೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದಿಲ್ಲ. ಹಾಗಾಗಿ ಅವರು ಪ್ರತಿದಿನ ಸ್ನಾನ ಮಾಡುವುದು ಒಳ್ಳೆಯದಲ್ಲ ಎನ್ನುತ್ತದೆ ಸಂಶೋಧನೆ.
ಆಸ್ಟ್ರೇಲಿಯಾ ಕಾಲೇಜಿನ ಡೆರ್ಮಾಟಲಾಜಿ ಪ್ರೊಫೆಸರ್ ಸ್ಟೀಫನ್ ಅವರ ಪ್ರಕಾರ ನಾವು ಪ್ರತಿದಿನ ಸ್ನಾನ ಮಾಡಬೇಕೆಂಬ ನಿಯಮವಿಲ್ಲ. 50-60 ವರ್ಷಗಳಿಂದ ಮಾತ್ರ ಈ ರೂಢಿ ಜಾರಿಯಲ್ಲಿದೆ. ಪ್ರತಿದಿನ ಸ್ನಾನ ಮಾಡುವುದು ಸಾಮಾಜಿಕ ಒತ್ತಡವಾಗಿಯೂ ಮಾರ್ಪಟ್ಟಿದೆ. ನಿಮಗೆ ಬೇಕೆನಿಸಿದಾಗ ಮಾತ್ರ ಸ್ನಾನ ಮಾಡಿ, ಆರೋಗ್ಯ ಕಾಪಾಡಿಕೊಳ್ಳಿ ಎನ್ನುತ್ತಾರೆ ಸ್ಟೀಫನ್.