ಸುದ್ದಿ

ಕೇವಲ 12 ವರ್ಷಗಳಲ್ಲಿ 9 ಸಿನಿಮಾ ; ಶಂಕ್ರಣ್ಣ ನಿರ್ದೇಶಿಸಿದ ಸಿನಿಮಾಗಳಿಗೆ ಸಿಕ್ಕಿದ ಬಿರುದುಗಳೆಷ್ಟು ಗೊತ್ತಾ?

By admin

November 09, 2019

ಶಂಕರ್ ನಾಗ್ ನಟಿಸಿದ್ದ ಬಹುತೇಕ ಸಿನಿಮಾಗಳು ಕಮರ್ಷಿಯಲ್‌ ಮಾದರಿಯಲ್ಲೇ ಇದ್ದವು. ಆದರೆ, ಅವರು ನಿರ್ದೇಶನಕ್ಕೆ ಆಯ್ದುಕೊಳ್ಳುತ್ತಿದ್ದ ಕಥಾ ವಸ್ತುಗಳು ಮಾತ್ರ ಭಿನ್ನವಾಗಿರುತ್ತಿದ್ದವು. ಜತೆಗೆ ಆ ಸಿನಿಮಾಗಳಿಗೆ ಅನೇಕ ಪ್ರಶಸ್ತಿಗಳು ಸಿಕ್ಕಿದ್ದವು. ಶಂಕರ್ ನಾಗ್  ಬದುಕಿದ್ದರೆ, ಇಂದು ಅವರಿಗೆ 65 ವರ್ಷ ತುಂಬುತ್ತಿತ್ತು. 1954ರ ನವೆಂಬರ್ 9 ರಂದು ಹೊನ್ನಾವರದಲ್ಲಿ ಜನಿಸಿದ ಶಂಕರ್‌, ತಮ್ಮ 36ನೇ ವಯಸ್ಸಿನಲ್ಲೇ ಅಪಘಾತದಲ್ಲಿ ಮರಣ ಹೊಂದಿದರು.

ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ ಎರಡೇ ವರ್ಷಗಳಲ್ಲಿ ‘ಮಿಂಚಿನ ಓಟ’ ಸಿನಿಮಾ ಮೂಲಕ ನಿರ್ದೇಶಕರಾದರು. ಮೊದಲ ಸಿನಿಮಾಕ್ಕೆ ಸಾಕಷ್ಟು ಪ್ರಶಸ್ತಿಗಳು ಅವರಿಗೆ ಬಂದವು . ಅದೇ ರೀತಿ ಅವರ ನಿರ್ದೇಶನದ ಸಿನಿಮಾಗಳಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಿಕ್ಕಿವೆ. ಹೋದರ ಅನಂತ್ ನಾಗ್ ಹಾಗು ಲೋಕನಾಥ್‌ ಮುಖ್ಯ ಭೂಮಿಕೆಯಲ್ಲಿ ಶಂಕರ್, ‘ಮಿಂಚಿನ ಓಟ’ ಸಿನಿಮಾ ಮಾಡಿದ್ದರು. ಅದರಲ್ಲಿ ಅವರೂ ಕೂಡ ನಟಿಸಿದ್ದರು. ಆ ಸಿನಿಮಾ ನಿರ್ದೇಶಿಸಿದಾಗ ಶಂಕರ್‌ಗೆ ಇನ್ನೂ 26 ವರ್ಷ.

ಚೊಚ್ಚಲ ಚಿತ್ರಕ್ಕೆ ರಾಜ್ಯ ಸರ್ಕಾರದಿಂದ ‘ಅತ್ಯುತ್ತಮದ್ವಿತಿಯ ಚಿತ್ರ’, ‘ಅತ್ಯುತ್ತಮ ನಟ’, ‘ಅತ್ಯುತ್ತಮ ಪೋಷಕನಟ’, ‘ಅತ್ಯುತ್ತಮ ಚಿತ್ರಕಥೆ’, ‘ಅತ್ಯುತ್ತಮ ಛಾಯಾಗ್ರಹಣ’, ‘ಅತ್ಯುತ್ತಮ ಸಂಕಲನ’, ‘ಅತ್ಯುತ್ತಮ ಧ್ವನಿಗ್ರಹಣ’ ಪ್ರಶಸ್ತಿಗಳು ಸಿಕ್ಕಿದ್ದವು. ಜತೆಗೆ ಶಂಕರ್‌ ನಾಗ್ಅವರಿಗೆ ‘ಅತ್ಯುತ್ತಮ ನಿರ್ದೇಶಕ’ ಫಿಲಂ ಫೇರ್‌ ಪ್ರಶಸ್ತಿ ಒಲಿದಿತ್ತು.

ಶಂಕರ್ ನಿರ್ದೇಶನದಲ್ಲಿ ಮೂಡಿ ಬಂದ ಮತ್ತೊಂದು ಫ್ಯಾಮಿಲಿ ಡ್ರಾಮಾ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’. ಈ ಚಿತ್ರಕ್ಕೆ ‘ಅತ್ಯುತ್ತಮ ತೃತೀಯ ಚಿತ್ರ’ ರಾಜ್ಯ ಪ್ರಶಸ್ತಿಸಿಕ್ಕಿತ್ತು. ಕೇವಲ 7 ವರ್ಷಗಳಲ್ಲಿ 9 ಚಿತ್ರಗಳಿಗೆ ಶಂಕರ್ ನಿರ್ದೇಶನ ಮಾಡಿದ್ದರು. ಅದರಲ್ಲಿ ಒಂದು ಹಿಂದಿ ಮತ್ತು ಇಂಗ್ಲಿಷ್‌ ಸಿನಿಮಾವೂ ಸೇರಿದೆ. ಅವರು ನಿರ್ದೇಶಿಸಿದ ಎಲ್ಲ ಸಿನಿಮಾಗಳು ಗಮನಸೆಳೆದವು. ‘ಗೀತಾ’ ಚಿತ್ರದ ಹಾಡುಗಳು ಇಂದಿಗೂ ಜನಮನದಲ್ಲಿ ಅಚ್ಚಳಿಯದೇ ಉಳಿದಿವೆ.