ಇದು ಸೆಲ್ಫಿ ಯುಗ. ಒಂದು ಸ್ಮಾರ್ಟ್ ಫೋನ್ ಕೈ ನಲ್ಲಿದ್ದರೆ ಸಾಕು ಎಲ್ಲೆಂದ ರಲ್ಲೇ ಸೆಲ್ಫಿ ತೆಗೆದುಕೊಳ್ಳುವವರೇ ಜಾಸ್ತಿ. ಒಂದು ರೀತಿ ಸೆಲ್ಫಿ ಹುಚ್ಚರ ಸಂತೆಯಾಗಿಬಿಟ್ಟಿದೆ ಈ ದುನಿಯಾ.
ಸಿಕ್ಕಿದ ಕಡೆಯೆಲ್ಲಾ ಸೆಲ್ಫಿ ಫೋಟೋ ತೆಗೆದುಕೊಳ್ಳುವುದು ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಾ ತಾ ಮುಂದು ಫೋಟೋಗಳನ್ನು ಪೋಸ್ಟ್ ಮಾಡುವ ಗೀಳು ಯುವಕ ಯುವತಿಯರು ಸೇರಿದಂತೆ ವಯಸ್ಸಿನ ಅಂತರವಿಲ್ಲದಂತೆ ಎಲ್ಲಾರಲ್ಲೂ ಈ ಗೀಳು ಹೆಚ್ಚಾಗಿಬಿಟ್ಟಿದೆ.
ಆದರೆ ಸೆಲ್ಫಿ ಗೀಳು ಅಂಟಿಸಿಕೊಂದವರಿಗೆ ಇಲ್ಲೊಂದು ಕಹಿ ಸುದ್ದಿ ಇದೆ…
ಹೌದು, ಸೆಲ್ಫಿ ಪ್ರಿಯರು ಅದರಲ್ಲೂ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುವ ಹೆಣ್ಣು ಮಕ್ಕಳಿಗೆ ಆಘಾತಕಾರಿ ಸುಧ್ಧಿಯೊಂದನ್ನು ಲಂಡನ್ ತಜ್ಞರು ನೀಡಿದ್ದಾರೆ.
ಅತಿ ಹೆಚ್ಚು ಸೆಲ್ಫಿ ತೆಗೆದುಕೊಳ್ಳುವವರ ಚರ್ಮ, ಮೊಬೈಲ್ ಫೋನ್ ನಿಂದ ಹೊರಸೂಸುವ ಎಲೆಕ್ಟ್ರೋಮ್ಯಾಗ್ನೆಟಿಕ್ ವಿಕಿರಣಗಳು ಡಿ.ಎನ್.ಎ. ಗಳನ್ನು ಹಾನಿಗೊಳಿಸಿ, ಚರ್ಮ ಬೇಗ ಸುಕ್ಕು ಗಟ್ಟುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಇದರಿಂದ ಬೇಗ ವಯಸ್ಸಾದಂತೆ ಕಾಣುತ್ತದೆ ಎಂದು ಚರ್ಮ ರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪದೇ ಪದೇ ಸೆಲ್ಫಿ ತೆಗೆದುಕೊಳ್ಳುವುದರಿಂದ ಚರ್ಮ ಬಹಳ ಬೇಗನೆ ನೆರಿಗೆಗಟ್ಟಿ ಮುಖದ ಅಂದಗೆಡುತ್ತದೆ ಎಂದು ಎಚ್ಚರಿಸಿದ್ದಾರೆ.