ಉತ್ತರ ಪ್ರದೇಶದ ಅಜಂಘಡ ಜಿಲ್ಲೆಯ ಶಾಲೆಯ ನೆಲವನ್ನು ಒರೆಸುತ್ತಿದ್ದ ಮಕ್ಕಳ ಚಿತ್ರವನ್ನು ಸೆರೆ ಹಿಡಿದ ಪತ್ರಕರ್ತನ ಬಂಧನವಾಗಿ ವಾರ ಕಳೆದ ಬಳಿಕ, ಸ್ಥಳೀಯ ಆಡಳಿತವು ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದೆ.
ಜಿಲ್ಲೆಯ ಊದ್ಪುರ ಸರಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ನೆಲವನ್ನು ಒರೆಸುತ್ತಿದ್ದ ಮಕ್ಕಳ ಚಿತ್ರಗಳನ್ನು ಸೆರೆಹಿಡಿದ ಸ್ಥಳೀಯ ಪತ್ರಕರ್ತ ಸಂತೋಷ್ ಜೈಸ್ವಾಲ್‌ನನ್ನು ಪೊಲೀಸರು ಬಂಧಿಸಿ, ಆತನ ವಿರುದ್ಧ ಸುಲಿಗೆ ಹಾಗೂ ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಯಾದ ಆಪಾದನೆ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
ಶಾಲಾ ಪ್ರಾಂಶುಪಾಲರು, ಪತ್ರಕರ್ತನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದು, ಶಾಲೆಗೆ ಆಗಮಿಸಿದ್ದ ಸಂತೋಷ್, ಶಿಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿದ್ದ.
ಅಲ್ಲದೇ ಕೆಲ ಮಕ್ಕಳಿಗೆ ನೆಲ ಒರೆಸುವಂತೆ ಸೂಚಿಸಿ ಅದರ ಫೋಟೋ ತೆಗೆದು ಶಾಲೆಗೆ ಕೆಟ್ಟ ಹೆಸರು ತರಲು ಮುಂದಾಗಿದ್ದ ಎಂದು ಆರೋಪಿಸಿದ್ದರು.