ಪ್ರತಿವರ್ಷದ ಹಾಗೆಯೇ ಈ ವರ್ಷವು ಕೂಡ ಗೂಗಲ್ ನಲ್ಲಿ ಸರ್ಚ್ ಆದವರು ಯಾರು ? ಎಂಬ ಪ್ರಶ್ನೆಗೆ ಅಚ್ಚರಿಯ ಉತ್ತರವೊಂದು ಸಿಕ್ಕಿದೆ ಏನಪ್ಪಾ ಅದು ಅಂತೀರಾ ? ಹೌದು ಈ ವರ್ಷದ ಅರ್ಧದಷ್ಟು ಭಾಗ ಈಗಾಗಲೇ ಮುಗಿದಿದೆ . ಇನ್ನೂ ಈ ವರ್ಷದಲ್ಲಿ ಅತೀ ಹೆಚ್ಚು ಗೂಗಲ್ ನಲ್ಲಿ ಸರ್ಚ್ ಆದವರು ಯಾರು ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ . ಆದರೆ ಈ ಭಾರಿ ಅತಿ ಹೆಚ್ಚು ಸರ್ಚ್ ಗೊಳಗಾದವರು ಯಾರು ಎಂಬ ಪ್ರಶ್ನೆಗೆ ನಿಮ್ಮ ಉತ್ತರ ಮೋದಿ ಎಂದಾಗಿದ್ದಲ್ಲಿ ತಪ್ಪು . ಇಷ್ಟಕ್ಕೂ ಈ ಭಾರಿ ಅತಿಹೆಚ್ಚು ಸರ್ಚ್ ಗೊಳಗಾದವರು ಯಾರು ಗೊತ್ತಾ ಮತ್ಯಾರು ಮಾದಕ ಕನ್ಯೆ ಸನ್ನಿ ಲಿಯೋನ್ .
ಯಾರು ಗೂಗಲ್ ನ ಜನಪ್ರಿಯ ವ್ಯಕ್ತಿ ಎಂದರೇ ಸಾಮಾನ್ಯವಾಗಿ ಎಲ್ಲರೂ ಪ್ರಧಾನಿ ನರೇಂದ್ರ ಮೋದಿ ಇರಬಹುದು ಎಂದು ಹೇಳುತ್ತಾರೆ . ಏಕೆಂದರೆ ಈ ವರ್ಷದ ಲೋಕಸಭಾ ಸಭಾಚುನಾವಣೆಯಲ್ಲಿ ಹೆಚ್ಚು ಗಮನ ಸೆಳೆದಿದ್ದರು , ಅಲ್ಲದೆ ಅತೀ ಹೆಚ್ಚು ಮತ ಪಡೆದು ಮತ್ತೊಮ್ಮೆ ಭಾರತದ ಪ್ರಧಾನಿ ಸ್ಥಾನಕ್ಕೇರಿದೆರು . ಅಲ್ಲದೆ ಇಡೀ ಭಾರತದ್ಯಾಂತ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೇಸರಿ ಬಾವುಟ ರಾರಾಜಿಸಿತ್ತು . ಹಾಗಾಗಿ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಭಾರತೀಯ ಸೆಲೆಬ್ರಿಟಿ ಪಟ್ಟಿಯಲ್ಲಿ ಪ್ರಧಾನಿ ಮೋದಿ ಮೊದಲ ಸ್ಥಾನದಲ್ಲಿರಬಹುದು ಎಂದು ಯೋಚಿಸಿರುತ್ತೀರಾ . ಆದರೆ ಹಾಗಾಗಿಲ್ಲ .
ಈ ವರ್ಷದ ಆಗಸ್ಟ್ ತಿಂಗಳವರೆಗೂ ಗೂಗಲ್ ನಲ್ಲಿ ಹೆಚ್ಚು ಸರ್ಚ್ ಆದವರ ಪೈಕಿ ಮೊದಲ ಸ್ಥಾನದಲ್ಲಿರುವುದು ಬಾಲಿವುಡ್ ನ ಹಾಟ್ ಬೆಡಗಿ ಸನ್ನಿ ಲಿಯೋನ್ . ಕಳೆದ ಬಾರಿಯೂ ಗೂಗಲ್ ನಲ್ಲಿ ಸರ್ಚ್ ಆದವರ ಪೈಕಿ ನಂ .1 ಸ್ಥಾನ ಕಾಯ್ದಿರಿಸಿಕೊಂಡಿದ್ದ ಸನ್ನಿ ಲಿಯೋನ್ ಈ ಬಾರಿಯೂ ಸಹ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ .
ಅಲ್ಲದೆ ಅಸ್ಸಾಂ , ಮಣಿಪುರ್ ಭಾಗದವರು ಗೂಗಲ್ ನಲ್ಲಿ ಸನ್ನಿ ಲಿಯೋನ್ ರನ್ನು ಹೆಚ್ಚು ಹುಡುಕಲ್ಪಟ್ಟಿದ್ದಾರೆ ಎನ್ನಲಾಗಿದೆ . ಇನ್ನೂ ಈ ವಿಚಾರ ತಿಳಿದ ಬಳಿಕ ಮಾತನಾಡಿದ ಸನ್ನಿ ” ಈ ವಿಷ್ಯ ನನಗೆ ನನ್ನ ಅಭಿಮಾನಿಗಳಿಂದ ತಿಳಿಯಿತು . ನಿರಂತರವಾಗಿ ನನಗಾಗಿ ಇರುವ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ . ಇದು ಅದ್ಭುತ ಅನುಭವ ” ಎಂದು ಹೇಳುವ ಮೂಲಕ ಸಂತಸವನ್ನು ವ್ಯಕ್ತಪಡಿಸಿದ್ದಾರೆ . ಇನ್ನೂ ಈ ಬಾರಿ ಪ್ರಕೃತಿ ವಿಕೋಪದಿಂದಾಗಿ ಉತ್ತರ ಕರ್ನಾಟಕದ ಹಲವು ಪ್ರದೇಶಗಳು ಮುಳುಗಿ ಹೋಗಿದ್ದು , ಕರ್ನಾಟಕದ ನೆರೆ ಸಂತ್ರಸ್ತರಿಗೆ ಪರಿಹಾರವಾಗಿ ಸನ್ನಿ ಸುಮಾರು 2 ಕೋಟಿ ನೆರವು ನೀಡಿದ್ದಾರೆ ಎನ್ನಲಾಗುತ್ತಿದೆ .