ಸುದ್ದಿ

50 ವರ್ಷದ ಹಿಂದೆ ಸತ್ತು ಸಮಾಧಿಯಾದವನು ದೀಪಾವಳಿ ಹಬ್ಬಕ್ಕೆ ಏಕಾಏಕಿ ಪ್ರತ್ಯಕ್ಷನಾಗಿದ್ದಾನೆ.ಹೇಗೆ ಗೊತ್ತಾ,.??

By admin

October 30, 2019

ಐವತ್ತು ವರ್ಷಗಳ  ಹಿಂದೆ ಮೃತಪಟ್ಟಿದ್ದ ಎನ್ನಲಾಗಿದ್ದ ವ್ಯಕ್ತಿಯೊಬ್ಬ ಈಗ ಜೀವಂತವಾಗಿ ದೀಪಾವಳಿ ಹಬ್ಬಕ್ಕೆ ಏಕಾಏಕಿ ಪ್ರತ್ಯಕ್ಷನಾಗಿದ್ದಾನೆ. ಆದರೆ ಸತ್ತಿದ್ದು, ಸಮಾಧಿ ಮಾಡಿದ್ದು, ಅಲ್ಲಿಂದ ಎದ್ದು ಹೋದದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಇನ್ನು ಖಚಿತ ಉತ್ತರ ಸಿಗಲಿಲ್ಲ ಎನ್ನಲಾಗಿದೆ.

ಚಳ್ಳಕೆರೆ ತಾಲೂಕಿನ ಚಿತ್ರನಾಯಕನಹಳ್ಳಿಯ ಕಾಡುಗೊಲ್ಲ ಸಮುದಾಯದ 76 ವರ್ಷದ ಈರಜ್ಜ ಮರಳಿ ಬಂದಿರುವ ವ್ಯಕ್ತಿ. ಈದುವರೆಗೆ ಆಂಧ್ರದಲ್ಲಿದ್ದ ಈತ ಮಂಗಳವಾರ  ದೀಪಾವಳಿಗೆ ಮರಳಿ ಹುಟ್ಟೂರಿಗೆ ಬಂದಿದ್ದಾನೆ. ಈರಜ್ಜನ ಸಾವಿನ ಘಟನೆ ಕುರಿತು ಈತನ ಸಹೋದರ ಬೇವಿನಪ್ಪ ವಿಕ ಜತೆ ಹೇಳಿಕೊಂಡದ್ದು ಹೀಗೆ. ‘‘ಈರಣ್ಣಗೆ 22ನೇ ವರ್ಷಕ್ಕೆ ಮದುವೆಯಾಗಿತ್ತು. ಆಂಧ್ರ ಗಡಿ ಗ್ರಾಮ ದಾಸರಹಳ್ಳಿಯ ಈರಮ್ಮನನ್ನು ಮದುವೆಯಾಗಿ ಊರಿನ ತೋಟದಲ್ಲಿ ಕೂಲಿ ಮಾಡಿಕೊಂಡಿದ್ದ.

ಇಬ್ಬರು ಗಂಡು ಮಕ್ಕಳಿದ್ದರು. ಆದರೆ, ಈರಣ್ಣನಿಗೆ ಯಾರೋ ಮಾಟ ಮಂತ್ರ ಮಾಡಿಸಿದ್ದರಂತೆ. ಅದರಿಂದ ಸತ್ತು ಹೋದ. ತಿಥಿ ಕೂಡ ಮಾಡಿದ್ದರು. ನಂತರ ಮಕ್ಕಳ ಸಲುವಾಗಿ ಪತ್ನಿಗೆ ಮರು ಮದುವೆ ಮಾಡಿದರು. ಅವರಿಗೂ ಮಕ್ಕಳಾಗಿದ್ದಾರೆ,’’ಎಂದು ಹೇಳಿದ್ದಾರೆ.

‘‘ಪತಿ ಈರಣ್ಣ ಸತ್ತು 53 ವರ್ಷ ಕಳೆದಿವೆ. ಈಗ ಬದುಕಿ ಬಂದಿರುವುದು ಆಶ್ಚರ್ಯ. ಎಲ್ಲ ಘಟನೆಗಳನ್ನು ಇಂದಿಗೂ ಅಜ್ಜ ಕಣ್ಣಿಗೆ ಕಟ್ಟಿದಂತೆ ಹೇಳುತ್ತಿದ್ದಾರೆ. ಹಾಗಾಗಿ ನಾನು  ಪತಿಯೆಂದು ಒಪ್ಪಿಕೊಂಡಿದ್ದೇನೆ,’’ ಎಂದು ಪತ್ನಿ ಈರಜ್ಜಿ ತಿಳಿಸಿದ್ದಾರೆ .