ಪ್ರೇಮ

ಸಂಸದ ಮುನಿಸ್ವಾಮಿಗೆ ಕಿಸ್ ಕೊಟ್ಟ ಮಾಜಿ ಸಚಿವ ವರ್ತೂರ್ ಪ್ರಕಾಶ್

By KOLAR NEWS CHANDRU

January 02, 2023

ಕೋಲಾರ: ಸಂಸದ ಮುನಿಸ್ವಾಮಿಗೆ #s.Muniswamy ಮಾಜಿ ಸಚಿವ ವರ್ತೂರ್ ಪ್ರಕಾಶ್ #r.varthur prakash ಕೋಲಾರಮ್ಮ ದೇವಾಲಯದ ಬಳಿ ಕಿಸ್ ಕೊಟ್ಟಿದ್ದಾರೆ. ಬಿಜೆಪಿ ಪಕ್ಷ ಹಾಗೂ ಸಂಸದ ಮುನಿಸ್ವಾಮಿ ನಡುವೆ ಗೊಂದಲವಿದೆಯಾ ಎನ್ನುವ ಪ್ರಶ್ನೆ ಕೇಳುತ್ತಿದ್ದಂತೆಯೇ ಪಕ್ಕದಲ್ಲೇ ಇದ್ದ ಮುನಿಸ್ವಾಮಿಗೆ ವರ್ತೂರ್ ಪ್ರಕಾಶ್ ಕಿಸ್ ಮಾಡಿ ಗೊಂದಲವಿಲ್ಲ ಎಂದಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಕೋಲಾರದ ಶಕ್ತಿದೇವತೆ ಕೋಲಾರಮ್ಮಗೆ ಪೂಜೆ ಸಲ್ಲಿಸಿದ್ದು, ನಾವೆಲ್ಲಾ ಒಟ್ಟಾಗಿ ಇರ್ತೀವಿ ಎಂದು ಕೋಲಾರಮ್ಮನ ಎದುರು ಪ್ರಮಾಣ ಮಾಡಿದ್ದೇವೆ. ನಮ್ಮ ನಾಯಕರು ಸಂಸದ ಮುನಿಸ್ವಾಮಿ ಎಂದು ಹೇಳಿ ವರ್ತೂರ್ ಪ್ರಕಾಶ್ ಕಿಸ್ ಕೊಟ್ಟಿದ್ದಾರೆ.

ಬಿಜೆಪಿಯಲ್ಲಿ ಗೊಂದಲದ ವಿಷಯ ಪ್ರಸ್ತಾಪವಾದಾಗ ವರ್ತೂರು ಪ್ರಕಾಶ್ ಎಂಪಿ ಮುನಿಸ್ವಾಮಿ ಅವರಿಗೆ ಮುತ್ತಿಟ್ಟು ನಾವೆಲ್ಲಾ ಒಂದೇ ಎಂದು ಘೋಷಿಸಿದರು.

ಹೊಸ ವರ್ಷದಲ್ಲಿ ಜಿಲ್ಲೆಯಲ್ಲಿ ಎಲ್ಲರೂ ಜೊತೆಗೂಡಿ ಪಕ್ಷ ಕಟ್ಟಲು ಕೋಲಾರಮ್ಮನ ಮುಂದೆ ಪ್ರಮಾಣ ಮಾಡಿದ್ದೇವೆ. ನಮ್ಮ ನಾಯಕ ಮುನಿಸ್ವಾಮಿ ಜೊತೆಗೂಡಿ ಚುನಾವಣೆ ನಡೆಸುತ್ತೇವೆ. ಉಸ್ತುವಾರಿ ಸಚಿವ ಮುನಿರತ್ನ ನಮ್ಮೊಂದಿಗೆ ಇರುತ್ತಾರೆ’ ಎಂದರು.