ನೀವು ಪ್ರವಾಸಕ್ಕಾಗಲಿ, ಬ್ಯುಸಿನೆಸ್ ಕಾರಣಕ್ಕಾಗಲಿ ಬೇರೆ ಊರಿಗೆ ಅಥವಾ ವಿದೇಶಕ್ಕೆ ಹೋದಾಗ, ಅಲ್ಲಿ ಉಳಿದುಕೊಳ್ಳಲು ಸಾಕಷ್ಟು ಖರ್ಚು ಮಾಡ್ಬೇಕಾಗುತ್ತೆ. ಯಾವುದೇ ಹೋಟೆಲ್ಗಳಲ್ಲಿ ಉಳಿದುಕೊಂಡ್ರು, ಬಿಲ್ ಸಾವಿರಗಟ್ಟಲೆ ಆಗುತ್ತೆ. ಜಪಾನ್ನ ಫುಕುಯೋಕಾದಲ್ಲಿರುವ ಅಸಾಹಿ ರ್ಯೋಕನ್ ಎಂಬ ಹೊಟೆಲ್ನಲ್ಲಿ ಒಂದು ದಿನಕ್ಕೆ ಕೇವಲ 100 ಎನ್ಗೆ ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ ಜಸ್ಟ್ 66 ರೂಪಾಯಿಗೆ ರೂಂ ನೀಡಲಾಗುತ್ತೆ.
ಆದ್ರೆ ಎಲ್ಲಾ ರೂಂಗಳಿಗೂ ಇದೇ ರೇಟ್ ಅಲ್ಲ. ಹೊಟೆಲ್ನ 8ನೇ ನಂಬರಿನ ರೂಂಗೆ ಮಾತ್ರ ಈ 100 ಎನ್ ಫಿಕ್ಸ್ ಮಾಡಲಾಗಿದೆ. ಒಂದು ರೂಂಗೆ ಮಾತ್ರ ಕಡಿಮೆ ಬಾಡಿಗೆ ಅಂದ್ರೆ ಅಲ್ಲೇನೋ ಸಮಸ್ಯೆ ಇದೆ ಅಂತ ಯೋಚ್ನೆ ಮಾಡ್ಬೇಡಿ. ಬೇರೆ ರೂಂನಂತೆಯೇ ಈ ರೂಂ ಕೂಡ ಚೆನ್ನಾಗಿಯೇ ಇದೆ. ಆದ್ರೆ ಒಂದು ಕಂಡೀಷನ್ ಮಾತ್ರ ಅಪ್ಲೈ ಆಗುತ್ತೆ.
ಕಂಡೀಷನ್ ಏನಪ್ಪಾ ಅಂದ್ರೆ, ನೀವು ಆ ರೂಂನಲ್ಲಿರೋ ಇಡೀ ದಿನವನ್ನು ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತೆ. ಅಂದ್ರೆ ನೀವು ಆ ರೂಂ ಒಳಗೆ ಹೋದ ನಂತರ ಏನು ಮಾಡ್ತೀರಿ ಅನ್ನೋ ಪ್ರತಿಯೊಂದು ವಿಷಯವೂ ಕೂಡ ಯೂಟ್ಯೂಬ್ನಲ್ಲಿ ಲೈವ್ ಆಗಿ ಪ್ರಸಾರ ಆಗುತ್ತೆ. ಅಯ್ಯೋ ನಮ್ಮ ಪ್ರೈವೇಟ್ ಮಾತುಕತೆಗಳು ಬಹಿರಂಗವಾಗುತ್ತೆ ಅನ್ನೋ ಭಯ ಬೇಕಿಲ್ಲ. ಯಾಕಂದ್ರೆ ವಿಡಿಯೋ ಮಾತ್ರ ಪ್ಲೇ ಆಗುತ್ತೆ ಹೊರತು, ಆಡಿಯೋ ಪ್ಲೇ ಆಗೋದಿಲ್ಲ.
ಇದೊಂದು ಜಪಾನೀಸ್ ಸ್ಟೈಲ್ನಲ್ಲಿರುವ ರೂಂ ಆಗಿದ್ದು, ಮಲಗೋದಕ್ಕೆ ಒಂದು ಮ್ಯಾಟ್ನ ವ್ಯವಸ್ಥೆ ಇದೆ. ನೋಡೋದಕ್ಕೆ ಟಿವಿ ಕೂಡ ಇರುತ್ತೆ. ಅಲ್ಲದೇ ಚಿಕ್ಕದೊಂದು ಕಾಫಿ ಟೇಬಲ್ ವ್ಯವಸ್ಥೆ ಕೂಡ ಇರುತ್ತೆ. ಯಾವುದೇ ಬ್ಲೈಂಡ್ ಸ್ಪಾಟ್ ಇಲ್ಲದಂತೆ ರೂಂನ ಮಧ್ಯ ಭಾಗದಲ್ಲಿ ಕ್ಯಾಮೆರಾ ಫಿಕ್ಸ್ ಮಾಡಲಾಗಿದೆ. ಆದ್ರೆ ಬಾತ್ರೂಂಗೆ ಮಾತ್ರ ಕ್ಯಾಮೆರಾ ವ್ಯವಸ್ಥೆ ಇಲ್ಲ.ಈ ರೂಮ್ನಲ್ಲಿ ಯಾರೇ ಉಳಿದುಕೊಂಡ್ರೂ ಅದರ ವಿಡಿಯೋ ‘ಒನ್ ಡಾಲರ್ ಹೊಟೆಲ್’ ಅನ್ನೋ ಯೂಟ್ಯೂಬ್ ಚಾನೆಲ್ನಲ್ಲಿ ಲೈವ್ ಸ್ಟ್ರೀಮಿಂಗ್ ಆಗುತ್ತೆ. ಈಗಾಗಲೇ ಸಾಕಷ್ಟು ಮಂದಿ ಈ ಅನುಭವವನ್ನು ಪಡೆದುಕೊಂಡಿದ್ದಾರೆ.