ಸುದ್ದಿ

ಧೋನಿ ದಾಖಲೆಯನ್ನು ಮುರಿಯಲಿದ್ದಾರೆ ‘ಹಿಟ್ ಮ್ಯಾನ್’ ರೋಹಿತ್ ಶರ್ಮ…!

By admin

June 27, 2019

ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಅವರು ಮಾಜಿ ನಾಯಕ ಎಂಎಸ್ ಧೋನಿಯ ದಾಖಲೆಯೊಂದನ್ನು ಮುರಿಯುವುದರಲ್ಲಿದ್ದಾರೆ. ಶರ್ಮಾ ಇನ್ನೆರಡೇ ಸಿಕ್ಸ್ ಬಾರಿಸಿದರೂ ಏಕದಿನದಲ್ಲಿ ಭಾರತ ಪರ ಧೋನಿ ಮಾಡಿರುವ ಅತ್ಯಧಿಕ ಸಿಕ್ಸ್ ದಾಖಲೆ ಬದಿಗೆ ಸರಿಯಲಿದೆ.ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ರೋಹಿತ್ ಗೆ ಧೋನಿ ದಾಖಲೆ ಮುರಿಯಲು ಅವಕಾಶವಿತ್ತು. ಆದರೆ ಶರ್ಮಾ ಕೇವಲ 1 ರನ್ನಿಗೆ ಮುಜೀಬ್ ಉರ್ ರಹ್ಮಾನ್‌ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸುವ ಮೂಲಕ ಅವಕಾಶ ಕಳೆದುಕೊಂಡಿದ್ದರು.

ಗುರುವಾರ (ಜೂನ್ 27) ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ರೋಹಿತ್ ದಾಖಲೆ ನಿರ್ಮಿಸುವ ನಿರೀಕ್ಷೆಯಿದೆ.ಧೋನಿ ಸಿಕ್ಸ್ ದಾಖಲೆ ಮುರಿಯುವ ಅವಕಾಶದ ಜೊತೆ ಶರ್ಮಾ ಬ್ಯಾಟಿಂಗ್ ಸ್ಪೆಶಾಲಿಟಿಗೆ ಸಂಬಂಧಿಸಿ ಇಲ್ಲಿ ಒಂದಿಷ್ಟು ಮಾಹಿತಿಯಿದೆ.ಧೋನಿ 225 ಸಿಕ್ಸ್ ದಾಖಲೆ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಏಕದಿನದಲ್ಲಿ ಒಟ್ಟು 225 ಸಿಕ್ಸ್‌ಗಳನ್ನು ಬಾರಿಸಿದ್ದಾರೆ. ರೋಹಿತ್ ಶರ್ಮಾ 210 ಏಕದಿನ ಪಂದ್ಯಗಳಲ್ಲಿ 224 ಸಿಕ್ಸ್‌ಗಳನ್ನು ಬಾರಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮೆರೆದರೆ ಅತ್ಯಧಿಕ ಸಿಕ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿಯಲಿದ್ದಾರೆ.

ಟಾಪ್ 5ರಲ್ಲಿ ರೋಹಿತ್ ಒಟ್ಟು 210 ಏಕದಿನ ಪಂದ್ಯಗಳನ್ನಾಡಿರುವ ರೋಹಿತ್, 250ಕ್ಕೂ ಕಡಿಮೆ ಏಕದಿನ ಪಂದ್ಯಗಳನ್ನಾಡಿ ಒಟ್ಟಾರೆ ಹೆಚ್ಚು ಸಿಕ್ಸ್ ಬಾರಿಸಿದ ವಿಶ್ವದ ಟಾಪ್ ಐದು ಆಟಗಾರರಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ರೀತಿಯಲ್ಲಿ ನೋಡಿದರೆ ಧೋನಿ ದಾಖಲೆಯನ್ನು ಶರ್ಮಾ ಈಗಾಗಲೇ ಮುರಿದಾಗಿದೆ. ಅಂತಾರಾಷ್ಟ್ರೀಯ ಏಕದಿನ, ಅಂತಾರಾಷ್ಟ್ರೀಯ ಟಿ20 ಮತ್ತು ಟೆಸ್ಟ್ ಸಿಕ್ಸ್‌ಗಳನ್ನು ಪರಿಗಣಿಸಿದರೆ ರೋಹಿತ್ 358 ಸಿಕ್ಸ್ ದಾಖಲೆ ಹೊಂದಿದ್ದಾರೆ. ಈ ಯಾದಿಯಲ್ಲಿ ಧೋನಿ ಹೆಸರಲ್ಲಿ 355 ಸಿಕ್ಸ್ ದಾಖಲೆಯಿದೆ.

ಮುಂಚೂಣಿಯಲ್ಲಿ ಅಫ್ರಿದಿ ಏಕದಿನದಲ್ಲಿ ಅತ್ಯಧಿಕ ಸಿಕ್ಸ್ ವಿಶ್ವದಾಖಲೆ ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್ಮನ್ ಶಾಹಿದ್ ಅಫ್ರಿದಿ ಹೆಸರಿಯಲ್ಲಿದೆ. ಒಟ್ಟು 351 ಸಿಕ್ಸರ್ ಬಾರಿಸಿರುವ ಅಫ್ರಿದಿ ಮೊದಲ ಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್‌ಗೇಲ್ 324 ಸಿಕ್ಸ್, ಶ್ರೀಲಂಕಾದ ಸನತ್ ಜಯಸೂರ್ಯ 270 ಸಿಕ್ಸ್, ಎಂಎಸ್ ಧೋನಿ 225 ಸಿಕ್ಸ್, ರೋಹಿತ್ ಶರ್ಮಾ 224 ಸಿಕ್ಸ್ ಬಾರಿಸಿದ್ದಾರೆ.

ಅತ್ಯಧಿಕ ರನ್‌ ಸಾಲಿನಲ್ಲಿ 8ನೇ ಸ್ಥಾನ ಐಸಿಸಿ ವಿಶ್ವಕಪ್ 2019ರಲ್ಲಿ ಉತ್ತಮ ಪ್ರದರ್ಶನವನ್ನೇ ನೀಡುತ್ತಿರುವ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ವಿರುದ್ಧ ಶತಕ ಬಾರಿಸಿದ್ದರು. ಟೂರ್ನಿಯಲ್ಲಿ ಅತ್ಯಧಿಕ ರನ್ ಸಾಧಕರಲ್ಲಿ ಸದ್ಯ ರೋಹಿತ್ 320 ರನ್‌ನೊಂದಿಗೆ 8ನೇ ಸ್ಥಾನದಲ್ಲಿದ್ದಾರೆ. ಇದು ಕೇವಲ 4 ಇನ್ನಿಂಗ್ಸ್‌ಗಳಲ್ಲಿ ಅನ್ನೋದು ವಿಶೇಷ. ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿರುವ ರೋಹಿತ್, ಆಂಗ್ಲರ ವಿರುದ್ಧ ಈಗಾಗಲೇ 1000+ ರನ್ ಬಾರಿಸಿದ್ದಾರೆ.