ಸುದ್ದಿ

ಒಂದು ದಿನದ ಮಟ್ಟಿಗೆ DCPಯಾಗಿ, ತನ್ನ ತಂದೆಗೆ ಆದೇಶ ನೀಡಿದ ವಿಧ್ಯಾರ್ಥಿನಿ..!ಈಕೆ ಡಿಸಿಪಿ ಆಗಿದ್ದು ಹೇಗೆ ಗೊತ್ತಾ..?

By admin

May 09, 2019

ಐಎಸ್​​ಸಿ ಪರೀಕ್ಷೆಯಲ್ಲಿ ದೇಶಕ್ಕೆ 4ನೇ ಸ್ಥಾನ ಪಡೆದ ವಿದ್ಯಾರ್ಥಿನಿ ಒಬ್ಬಳಿಗೆ ಒಂದು ದಿನದ ಮಟ್ಟಿಗೆ ಕೊಲ್ಕತ್ತಾ ಡಿಸಿಪಿ ಆಗುವ ಯೋಗ ಒದಗಿ ಬಂದಿದೆ.

ಈ ಸಾಧನೆ ಮಾಡಿರುವ ವಿಧ್ಯಾರ್ಥಿನಿಯ ಹೆಸರು ರೀಚಾ ಸಿಂಗ್ ಎಂದು. ಈ ಪ್ರತಿಭಾನ್ವಿತ ವಿಧ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸುವ ಸಲುವಾಗಿ ಒಂದು ದಿನದ ಮಟ್ಟಿಗೆ ಕೊಲ್ಕತ್ತಾ ಉಪ ಪೊಲೀಸ್​ ಕಮಿಷನರ್​​ ಆಗುವ ಅವಕಾಶ ನೀಡಲಾಗಿತ್ತು. 

ಕೊಲ್ಕತ್ತಾದ ಜಿ.ಡಿ. ಬಿರ್ಲಾ ಸೆಂಟರ್​ ಫಾರ್​ ಎಜುಕೇಷನ್​ನಲ್ಲಿ ವಿಧ್ಯಾಭ್ಯಾಸ ಮಾಡಿರೋ ರಿಚಾ, ಪ್ಲಸ್​​ 2 ಪರೀಕ್ಷೆಯಲ್ಲಿ ಶೇ. 99.25 ರಷ್ಟು ಫಲಿತಾಂಶ ಪಡೆದಿದ್ದಾರೆ. ಆದ್ದರಿಂದಲೇ ನಿನ್ನೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ರಿಚಾ ಕೊಲ್ಕತ್ತಾ ಆಗ್ನೇಯ ವಿಭಾಗದ ಡಿಸಿಪಿ ಕುರ್ಚಿಯನ್ನ ಅಲಂಕರಿಸಿದ್ರು. ವಿಶೇಷ ಅಂದ್ರೆ ರೀಚಾ ತಂದೆ ಗರಿಯಾಹತ್​ ಪೊಲೀಸ್​ ಠಾಣೆಯ ಹೆಚ್ಚುವರಿ ಉಸ್ತುವಾರಿ ಅಧಿಕಾರಿಯಾಗಿದ್ದಾರೆ.

ಆಗ್ನೇಯ ವಿಭಾಗದ ಡಿಸಿ ಕಲ್ಯಾಣ್ ಮುಖರ್ಜಿ ಹಾಗೂ ವಿವಿಧ ಪೊಲೀಸ್​ ಠಾಣೆಗಳ ಉಸ್ತುವಾರಿ​​​ ಅಧಿಕಾರಿಗಳ ಜೊತೆಗೆ, ರಿಚಾ ತಂದೆ ರಾಜೇಶ್ ಸಿಂಗ್, ಗರಿಯಾಹತ್​ ಪೊಲೀಸ್​ ಠಾಣೆಯ ಹೆಚ್ಚುವರಿ ಉಸ್ತುವಾರಿ ಅಧಿಕಾರಿ ಹಾಗೂ ತಂದೆಯೂ ಆಗಿರುವ ರಾಜೇಶ್​ ಸಿಂಗ್ ನಿನ್ನೆ​​ ಮಗಳನ್ನ ಸನ್ಮಾನಿಸಿದ್ರು.

ಇನ್ನು ಒಂದು ದಿನದ ಮಟ್ಟಿಗೆ ತನ್ನ ತಂದೆಗೆ ಮೇಲಾಧಿಕಾರಿಯಾಗಿರುವ ವಿಧ್ಯಾರ್ಥಿನಿ ರೀಚಾರನ್ನು, ನಿಮ್ಮ ತಂದೆಗೆ ಏನಾದರೂ ಆದೇಶ ಮಾಡುತ್ತೀರಾ ಎಂದು ಕೇಳಿದಾಗ, ಬೇಗ ಮನೆಗೆ ಬನ್ನಿ ಎಂದು ಆದೆಶಿಸುತ್ತೇನೆ ಎಂದು ರೀಚಾ ಸಿಂಗ್ ಹೇಳಿದ್ದಾರೆ. ಇಡೀ ದೇಶದಲ್ಲಿಯೇ ೪ ನೇ ರ್ಯಾಂಕ್ ತೆಗೆದುಕೊಂಡಿರುವ ರೀಚಾ ಮುಂದೆ ಇತಿಹಾಸ ಹಾಗೂ ಸಮಾಜಶಾಸ್ತ್ರದಲ್ಲಿ ವ್ಯಾಸಂಗ ಮುಂದುವರೆಸಿ, ಯುಪಿಎಸ್​ಸಿ ಪರೀಕ್ಷೆ ತೆಗೆದುಕೊಳ್ಳುವ ಪ್ಲಾನ್ ಹೊಂದಿದ್ದರೆ ಎಂದು ಹೇಳಿದ್ದಾರೆ.

ಇನ್ನು ತನ್ನ ಮಗಳ ಸಾಧನೆ ಬಗ್ಗೆ ಮಾತನಾಡಿದ ರಾಜೇಶ್​ ಸಿಂಗ್, ನನಗೆ ಎಷ್ಟು ಖುಷಿಯಾಗ್ತಿದೆ ಅಂತ ಹೇಳಿಕೊಳ್ಳಲು ಆಗ್ತಿಲ್ಲ. ಒಂದು ದಿನದ ಮಟ್ಟಿಗೆ ನನ್ನ ಮಗಳು ನನಗೇ ಹಿರಿಯ ಅಧಿಕಾರಿಯಾಗಿದ್ದಾಳೆ. ಮನೆಗೆ ಬೇಗ ಬರುವಂತೆ ನನಗೆ ಆದೇಶಿಸಿದ್ದಾಳೆ. ಇವತ್ತು ಅದನ್ನ ಪಾಲಿಸುತ್ತೇನೆ ಅಂತ ಹೇಳಿದ್ರು.