ಸುದ್ದಿ

ಈ ಒಂದು ಆಪ್ ನಿಂದ ನಿಮ್ಮ ಮೊಬೈಲ್ ನಲ್ಲಿ ಇರುವ ಚೀನಾ ಆ್ಯಪ್‌ಗಳನ್ನು ಪತ್ತೆ ಮಾಡಿ, ಅವುಗಳನ್ನು ಡಿಲೀಟ್ ಮಾಡಬಹುದು.

By admin

June 01, 2020

ಚೀನಾ  ವಿರುದ್ಧದ ಜನಸಾಮಾನ್ಯರ ಆಕ್ರೋಶ ವಿಭಿನ್ನ ರೀತಿಯಲ್ಲಿ ವ್ಯಕ್ತವಾಗುತ್ತಿದ್ದು, ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರಸ್ತುತ ಚೀನಾದ ಆ್ಯಪ್‌ಗಳು, ಚೀನಾ ಮೂಲದ ಕಂಪನಿ ಒಡೆತನ ಹೊಂದಿರುವ ಮತ್ತು ಚೀನಾ ಮೂಲದ ಡೆವಲಪರ್‌ಗಳು ಅಭಿವೃಧಿಪಡಿಸಿರುವ ಆ್ಯಪ್ ವಿರುದ್ಧ ಜನರು ಸಿಡಿದೆದ್ದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲೂ ಚೀನಾ ಆ್ಯಪ್ ಬ್ಯಾನ್ ಮಾಡಿ ಎನ್ನುವ ಸಂದೇಶ ವ್ಯಾಪಕವಾಗಿ ಹರಿದಾಡಿದೆ. ಅದರ ಜತೆಗೆ ರಿಮೋವ್ ಚೀನಾ ಆ್ಯಪ್ಸ್ ಎನ್ನುವ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಟ್ರೆಂಡ್ ಸೃಷ್ಟಿಸಿದೆ. ಈ ಆ್ಯಪ್ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಚೀನಾ ಮೂಲದ ಆ್ಯಪ್‌ಗಳನ್ನು ಪತ್ತೆ ಮಾಡಿ, ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡಬಹುದು ಎಂದು ತಿಳಿಸುತ್ತದೆ. ಅದರಂತೆ ಬಳಕೆದಾರರು ಚೀನಾ ಮೂಲದ ಆ್ಯಪ್‌ಗಳನ್ನು ಫೋನ್‌ನಿಂದ ಅನ್‌ಇನ್‌ಸ್ಟಾಲ್ ಅಥವಾ ಡಿಲೀಟ್ ಮಾಡಬಹುದಾಗಿದೆ.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ರಿಮೂವ್ ಚೀನಾ ಆ್ಯಪ್ 10 ಲಕ್ಷಕ್ಕೂ ಅಧಿಕ ಡೌನ್‌ಲೋಡ್ ಕಂಡಿದ್ದು, 4.8 ರೇಟಿಂಗ್ ಹೊಂದಿದೆ.

ಚೀನಾ ಆ್ಯಪ್ ಬಳಕೆ ಸೂಕ್ತವಲ್ಲ ಮತ್ತು ಸುರಕ್ಷಿತವಲ್ಲ, ಚೀನಾ ಕೋವಿಡ್ 19 ವೈರಸ್ ಹರಡಿದೆ ಮತ್ತು ಚೀನಾ ದೇಶವಿರೋಧಿ ಚಟುವಟಿಕೆಗಳಿಗೆ ಹಣ ಸಂದಾಯ ಮಾಡುತ್ತಿದೆ ಎನ್ನುವ ಸಂದೇಶ ಹರಿದಾಡುತ್ತಿದ್ದು, ಜನರು ಚೀನಾ ಮೂಲದ ಆ್ಯಪ್ ವಿರುದ್ಧ ಅನ್‌ಇನ್‌ಸ್ಟಾಲ್ ಅಭಿಯಾನ ಆರಂಭಿಸಿದ್ದಾರೆ.