ಮುಖದ ಮೇಲೆ ಒಂದು ಕಪ್ಪು ಮಚ್ಚೆಯಿದ್ರೆ ಅದು ಸೌಂದರ್ಯವನ್ನು ವೃದ್ಧಿಸುತ್ತದೆ. ಆದ್ರೆ ಮುಖವೆಲ್ಲ ಕಲೆಯಾದ್ರೆ ಸೌಂದರ್ಯ ಹಾಳಾಗುತ್ತದೆ. ಕಲೆ ಹೋಗಲಾಡಿಸಿ ಸುಂದರ ಮುಖಕ್ಕಾಗಿ ಜನರು ಬ್ಯೂಟಿಪಾರ್ಲರ್ ಮೊರೆ ಹೋಗ್ತಾರೆ. ಅದ್ರ ಬದಲು ದಿನದಲ್ಲಿ 5 ನಿಮಿಷ ಈ ಮನೆ ಔಷಧಿ ಬಳಸಿದ್ರೆ ಮುಖ ಸುಂದರವಾಗಿ, ಆಕರ್ಷಕವಾಗಿ ಕಾಣುತ್ತದೆ.
ಮೂಲಂಗಿ :-
ಮುಖದ ಮೇಲಿರುವ ಕಪ್ಪು ಕಲೆಗಳನ್ನು ಮೂಲಂಗಿ ದೂರ ಮಾಡುತ್ತದೆ. ಪ್ರತಿ ದಿನ ಮೂಲಂಗಿ ರಸವನ್ನು ಮುಖಕ್ಕೆ ಹಚ್ಚಿ. ಕೆಲ ಸಮಯ ಬಿಟ್ಟು ಮುಖ ತೊಳೆಯಿರಿ.
ಮಜ್ಜಿಗೆ :-
ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆಮ್ಲವಿರುತ್ತದೆ. ಇದು ಕಲೆಗಳನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಇದು ಪಿಗ್ಮೆಂಟೇಶನ್ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ.
ನಿಂಬೆ ರಸ: –
ನಿಂಬೆ ರಸದಲ್ಲಿ ಸಿಟ್ರಿಕ್ ಆಮ್ಲವಿರುತ್ತದೆ. ನಿಂಬೆ ರಸವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿದ್ರೆ ಮುಖ ಸ್ವಚ್ಛವಾಗಿ ಕಪ್ಪು ಕಲೆ ಮಾಯವಾಗುತ್ತದೆ.
ಅಲೋವೇರಾ: –
ಮೊದಲು ಅಲೋವೇರಾ ರಸಕ್ಕೆ ನಿಂಬೆ ರಸ, ಮಜ್ಜಿಗೆಯನ್ನು ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 5 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ.
ಸೇಬು : –
ಆಪಲನ್ನು ಮುಖಕ್ಕೆ ಹಚ್ಚಿ 5 ನಿಮಿಷ ಬಿಟ್ಟು ಮುಖವನ್ನು ಸ್ವಚ್ಛಗೊಳಿಸಿ. ವಾರಕ್ಕೆ 2-3 ಬಾರಿ ಹೀಗೆ ಮಾಡಿದ್ರೆ ಮುಖದ ಕಲೆ ಮಾಯವಾಗುತ್ತದೆ.