ಇನ್ಮುಂದೆ ವಾಹನಗಳ ಮೇಲೆ ಜಾತಿ ಸೂಚಕ ನಮ್ಮದೇ ಶ್ರೇಷ್ಠ ಜಾತಿ ಎಂದು ಬಿಂಬಿಸುವ ಘೋಷ ವಾಕ್ಯಗಳಿದ್ದ 250 ವಾಹನಗಳ ಮಾಲೀಕರಿಗೆ ಪೊಲೀಸರು ದಂಡ ವಿಧಿಸಿದ್ದಾರೆ ಸುಲಲಿತ ಸಂಚಾರ ಮತ್ತು ಆಂದೋಲನದ ಭಾಗವಾಗಿ ಶುಕ್ರವಾರ ‘ಆಪರೇಷನ್ ಕ್ಲೀನ್ ‘ ಕಾರ್ಯಾಚರಣೆ ನಡೆಸಿರುವ ಪೊಲೀಸರು ಜನರಲ್ಲಿ ಭೀತಿ ಹುಟ್ಟಿಸುವಂತ ಘೋಷ ವಾಕ್ಯಗಳಿರುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದರು.
ವಾಹನಗಳಮೇಲೆ ‘ಗೌಡ್ರ ಗೂಳಿ’, ‘ಕುಂತರೆ ಕುರುಬ, ನಿಂತರೆ ಕಿರುಬ’, ‘ತಿಗಳರ ಹುಡ್ಗ’ ಇನ್ನೂ ಹಲವು ರೀತಿಯಜಾತಿ ಸೂಚಕ ಸ್ಟಿಟಕರ್‌ಗಳನ್ನು ಅಂಟಿಸಿಕೊಂಡಿರುವುದು ಸಾಮಾನ್ಯವಾಗಿ ಕಾಣುತ್ತದೆ ಆದರೆ ಇನ್ನುಮುಂದೆ ಹೀಗೆ ಜಾತಿ ಸೂಚಕ ಸ್ಟಿಕರ್‌ಗಳನ್ನು ಅಂಟಿಸಿಕೊಳ್ಳುವುದಕ್ಕೆ ಬ್ರೇಕ್ ಬೀಳಲಿದೆ. ಹೌದು,ಇನ್ನು ಮುಂದೆ ಕಾರು, ಬೈಕ್ ಗಳು ಸೇರಿದಂತೆ ಎಲ್ಲ ವಾಹನಗಳ ಮೇಲೆ ಜಾತಿ, ಧರ್ಮ ಸೂಚಕ ಸ್ಟಿಕರ್‌ಗಳನ್ನುಹಾಕಿಕೊಳ್ಳುವುದನ್ನು ನಿಷೇಧಿಸುವ ಸಾಧ್ಯತೆ ಇದೆ. ಈಗಾಗಲೇ ರಾಜಸ್ಥಾನ ರಾಜ್ಯದಲ್ಲಿ ಇದು ಜಾರಿಗೆಬಂದಿದೆ.
ದೀಪಾವಳಿ ಹಿನ್ನೆಲೆಯಲ್ಲಿ ಆಭರಣ ಮಳಿಗೆಗಳು, ಪೆಟ್ರೋಲ್ ಬಂಕ್ ಮತ್ತು ಮಾರುಕಟ್ಟೆಯ ಹಲವು ಮಳಿಗೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದರು.ವಾಹನಗಳ ಮೇಲೆ ಜಾತಿಸೂಚಕ ಅಥವಾ ಆಕ್ಷೇಪಾರ್ಹ ಬರಹಗಳಿಗೆ ಕಡಿವಾಣ ಹಾಕಬೇಕಿದೆ. ಇಂತ ಬರಹಗಳು ಜನರಲ್ಲಿ ಭೀತಿ, ಇರಿಮುರಿಸು ಉಂಟು ಮಾಡುತ್ತದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅಂಥ ವಾಹನಗಳ ವಿರುದ್ಧ ಕ್ರಮ ಜರುಗಿಸಲಾಯಿತು ಎಂದು ಪೊಲೀಸ್ ಅಧಿಕಾರಿ ವೈಭವ್ ಕೃಷ್ಣ ಪ್ರತಿಕ್ರಿಯಿಸಿದರು .
ರಾಜಸ್ಥಾನದಲ್ಲಿ, ಜಾತಿ, ಧರ್ಮಸೂಚಕ ಸ್ಟಿಕರ್‌ಗಳು ಮಾತ್ರವಲ್ಲದೆ, ವೃತ್ತಿ ಸೂಚಕ, ರಾಜಕೀಯ ಪಕ್ಷದ ಜೊತೆ ಸಂಬಂಧ ಗುರುತಿಸುವಂತಹಾಸ್ಟಿಕ್ಕರ್‌ಗಳನ್ನು ಸಹ ಹಾಕಿಕೊಳ್ಳುವಂತಿಲ್ಲ. ಸ್ಟಿಕ್ಕರ್‌ಗಳು ಹಾಕಿಕೊಂಡರೆ ದಂಡ ಕಟ್ಟುವ ಜೊತೆಗೆಸ್ಟಿಕ್ಕರ್ ಗಳನ್ನು ಕಿತ್ತು ಹಾಕಲಾಗುತ್ತದೆ. ಹಾಗೆಯೇ ಇಲ್ಲಿಯೂ ಸಹ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ .