ಕ್ರೀಡೆ

RCB ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ..!

By admin

March 08, 2019

ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದು ಆದರೆ ಮೊದಲ ಪಂದ್ಯದಲ್ಲಿ ಚೆನ್ನೈ ತಂಡವನ್ನು ಎದುರಿಸುತ್ತಿರುವ ಆರ್‍ಸಿಬಿಗೆ ಶಾಕಿಂಗ್ ಸುದ್ದಿ ಲಭಿಸಿದೆ.

360 ಡಿಗ್ರಿ ಶಾಟ್ ಖ್ಯಾತಿಯ ಎಬಿ ಡಿವಿಲಿಯರ್ಸ್ ಪಾಕಿಸ್ತಾನದ ಸೂಪರ್ ಲೀಗ್‍ನಲ್ಲಿ ಕಳೆದ 2 ದಿನಗಳ ಹಿಂದೆ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದು, ಸದ್ಯ ಟೂರ್ನಿಯಿಂದ ಹೊರ ನಡೆದಿದ್ದಾರೆ. ಇದರ ಬೆನ್ನಲ್ಲೇ ಎಬಿಡಿ ಐಪಿಎಲ್ ವೇಳೆಗೆ ಫಿಟ್ ಆಗುತ್ತಾರ ಎಂಬ ಅನುಮಾನಗಳು ಅಭಿಮಾನಿಗಳನ್ನು ಕಾಡುತ್ತಿದೆ.

ಐಪಿಎಲ್ ಆರಂಭಕ್ಕೆ ಇನ್ನು 3 ವಾರಗಳಷ್ಟೇ ಬಾಕಿ ಇದ್ದು, ಐಪಿಎಲ್‍ನಿಂದ ದೂರ ಉಳಿಯುತ್ತಾರೆ ಎನ್ನಲಾಗುತ್ತಿದೆ. ಆದರೆ ಮತ್ತೊಂದು ಮಾಹಿತಿಯ ಪ್ರಕಾರ ಐಪಿಎಲ್ ವೇಳೆ ಚೇತರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಪಾಕಿಸ್ತಾನ್ ಸೂಪರ್ ಲೀಗ್‍ಗೂ ಮುನ್ನ ಬಾಂಗ್ಲಾ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಎಬಿಡಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಸದ್ಯ ವೈದ್ಯರು ಕನಿಷ್ಠ 2 ವಾರಗಳ ವಿಶ್ರಾಂತಿ ಸೂಚಿಸಿದ್ದು, ಆ ಬಳಿಕಷ್ಟೇ ತರಬೇತಿಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ.

ಐಪಿಎಲ್ ನಲ್ಲಿ 4 ಸಾವಿರ ರನ್ ಪೂರ್ಣಗೊಳಿಸಲು ಎಬಿಡಿಗೆ ಇನ್ನು ಕೇವಲ 47 ರನ್ ಗಳ ಅಗತ್ಯವಿದ್ದು, 2008 ರ ಆರಂಭದಿಂದಲೂ ಎಬಿಡಿ ಐಪಿಎಲ್ ಟೂರ್ನಿಯ ಭಾಗವಾಗಿದ್ದಾರೆ. ಇವರೆಗೂ 141 ಪಂದ್ಯಗಳನ್ನು ಆಡಿರುವ ಅವರು 3,953 ರನ್ ಗಳಿಸಿದ್ದಾರೆ. ಕಳೆದ ವರ್ಷದ ಟೂರ್ನಿಯಲ್ಲಿ 12 ಪಂದ್ಯಗಳಿಂದ 480 ರನ್ ಸಿಡಿಸಿದ್ದರು.