ಕನಸುಗಾರ ರವಿಚಂದ್ರನ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಇವರು ಮಾಡಿದ ಕೆಲಸ ಗುರುತಿಸಿ ಈಗ ವಿಶ್ವವಿದ್ಯಾಲಯವೊಂದು ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಗಿದೆ. ನಟ ವಿ.ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಬೆಂಗಳೂರಿನ ಸಿಎಂಆರ್ ಕಾಲೇಜು ಆವರಣದಲ್ಲಿ ಸಂಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರಿಗೆ ಡಾಕ್ಟರೇಟ್ ಗೌರವ ನೀಡಲಾಗಿದೆ.
ಅಕ್ಟೋಬರ್ 18 ರವಿಚಂದ್ರನ್ ಮಗಳು ಗೀತಾಂಜಲಿ ಹುಟ್ಟಿದ ದಿನ. ಆ ದಿನವೇ ಅವರಿಗೆ ಗೌರವ ಡಾಕ್ಟರೇಟ್ ನೀಡಲಿದ್ದೇವೆ ಎಂದು ಯುನಿವರ್ಸಿಟಿಯಿಂದ ಕಾಲ್ಬಂದಿತ್ತಂತೆ. ಅಷ್ಟೇ ಅಲ್ಲದೆ ಅವರ 35ವರ್ಷಗಳ ಕನಸು ನಾನ್ ಸ್ಟಾಪ್ಮ್ಯೂಸಿಕಲ್ ಆಲ್ಬಮ್ ಮಾಡುವ ಕೆಲಸಕ್ಕೆ ಚಾಲನೇ ಅಂದೇ ಸಿಕ್ಕಿತಂತೆ. ಡಾಕ್ಟರೇಟ್ ಗೌರವ ಪ್ರದಾನ ಕಾರ್ಯಕ್ರಮದಲ್ಲಿ ರವಿಚಂದ್ರನ್ಸು ಪತ್ನಿ ಶ್ರೀಮತಿ, ಮಕ್ಕಳಾದ ವಿಕ್ರಮ್,ಮನೋರಂಜನ್, ಗೀತಾಂಜಲಿ, ಅಳಿಯ ಅಜಯ್ ಭಾಗಿಯಾಗಿದ್ದರು.
ಈ ವೇಳೆ ಡಾಕ್ಟರೇಟ್ ಗೌರವ ಪಡೆದು ಮಾತನಾಡಿದ ರವಿಚಂದ್ರನ್, ಇನ್ನೂ ಮುಂದೆ ತಪ್ಪಿರುವದಾರಿಯನ್ನು ಸರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತೇನೆ. ಡಾಕ್ಟರೇಟ್ ಗೌರವ ಸ್ವೀಕರಿಸಿ, ಇನ್ಮುಂದೆ ಹೊಸ ದಾರಿಯನ್ನು ಹಿಡಿಯುತ್ತೇನೆ. ನನ್ನನ್ನು ಗುರುತಿಸಿ ಸಿಎಂಆರ್ ಯುನಿವರ್ಸಿಟಿಯವರು ಡಾಕ್ಟರೇಟ್ ನೀಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಈ ಹಿಂದೆಯೇ ಮೂರು ದಶಕಗಳಿಂದ ಚಿತ್ರರಂಗದಲ್ಲಿ ರವಿಚಂದ್ರನ್ ಅವರು ಮಾಡಿದ ಸೇವೆಗೆ ಗೌರವ ಡಾಕ್ಟರೇಟ್ ನೀಡಬೇಕು ಎಂದು ಅಭಿಮಾನಿಗಳು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು. ಅವರ ಬಹುದಿನದ ಆಸೆ ಈಡೇರಿರುವುದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ರವಿಚಂದ್ರನ್ ಅವರು ನಟ, ನಿರ್ದೇಶಕ, ನಿರ್ಮಾಪಕ, ಗೀತ ರಚನೆ, ಸಂಗೀತ, ಸಂಭಾಷಣೆ ಸೇರಿದಂತೆ ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ 85ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ.