Cinema

ಟ್ರೋಲ್ ಪೇಜ್ ವಿರುದ್ಧ ಗರಂ ; ಹೀಯಾಳಿಸಿದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ ರಶ್ಮಿಕಾ ಮಂದಣ್ಣ..!

By admin

November 07, 2019

 ಕಿರಿಕ್ ಪಾರ್ಟಿ ಸಿನಿಮಾದ ಸಕ್ಸ್​ಸ್​ ಹುಡುಗಿ ರಶ್ಮಿಕಾ ಮಂದಣ್ಣ ಅವರು ತನಗೆ ಸೋಷಿಯಲ್ ಮೀಡಿಯಾದಲ್ಲಿ ಕಿರುಕುಳ ಆಗುತ್ತಿದೆ ಎಂದು ಭಾವನಾತ್ಮಕವಾಗಿ ಇನ್​ ಸ್ಟಾಗ್ರಾಮ್​ನಲ್ಲಿ ಅಳಲು ತೋಡಿಕೊಂಡಿದ್ದಾಳೆ.

ಕೆಲ ಕಿಡಿಗೇಡಿಗಳು ನನ್ನ ವಿರುದ್ಧ ಕೆಟ್ಟ, ಕೆಟ್ಟದಾಗಿ ಪೊಸ್ಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಇದೇ ರೀತಿಯ ಇಂದು ಪೋಸ್ಟ್ ನ್ನು ಮಾಡಿ ಉದಾಹರಿಸಿ ರಶ್ಮಿಕಾ ಅವರು, ಇನ್​ ಸ್ಟಾಗ್ರಾಮ್​ನಲ್ಲಿ ಪೊಸ್ಟ್​ ಮಾಡಿದ್ದಾರೆ.

ಸೇನೋಟು ಸೋಷಿಯಲ್ ಮೀಡಿಯಾ ಅರಾಸ್ಮೆಂಟ್ ಎನ್ನುವ ಹ್ಯಾಷ್ ಟ್ಯಾಗ್​ನಲ್ಲಿ ನಟಿ ಪೋಸ್ಟ್ ಮಾಡಿದ್ದು, ಸೆಲೆಬ್ರಿಟಿಗಳು ಅಂದರೆ ನಿಮ್ಮ ಮನಸ್ಸಿಗೆ ಬಂದಂತೆ ಮಾತನಾಡಬಹುದು ಅಂದು ಕೊಂಡಿದ್ದೀರಾ? ಎಂದು ಟ್ರೋಲ್ ಮಾಡುವರ ವಿರುದ್ಧ ಹರಿಹಾಯ್ದಿದ್ದಾರೆ.

ಅಲ್ಲದೇ ನನ್ನ ಕೆಲಸದ ಬಗ್ಗೆ ಏನಾದರೂ ಮಾತನಾಡಿ, ಆದರೆ, ನಮ್ಮ ಕುಟುಂಬ ಬಗ್ಗೆ ಅಲ್ಲ. ಜನ ಮೊದಲು ಒಬ್ಬರನ್ನೊಬ್ಬರು ಗೌರವಿಸೋದನ್ನು ಕಲಿಬೇಕು ಎಂದು ಟ್ರೋಲ್ ಮಾಡುವರ ವಿರುದ್ಧ ರಶ್ಮಿಕಾ ಮಂದಣ್ಣ ಗರಂ ಆಗಿ ಖಡಕ್ ಉತ್ತರ ನೀಡಿದ್ದಾರೆ.