ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯ ಮೂರನೇ ವಾರ ದುನಿಯಾ ರಶ್ಮಿ ಎಲಿಮಿನೇಟ್ ಆಗಿದ್ದಾರೆ. ಬಿಗ್ ಮನೆಯಿಂದ ಹೊರಬಂದ ಬಳಿಕ ಸಂದರ್ಶನ ಒಂದರಲ್ಲಿ ಭಾಗವಹಿಸಿದ್ದರು. ಬಿಗ್ ಬಾಸ್ ಜರ್ನಿ ಬಗ್ಗೆ ತಮ್ಮ ಅನುಭವಗಳನ್ನ ಹೇಳಿದ ರಶ್ಮಿ, ಒಬ್ಬ ಸೂಪರ್ ಸ್ಟಾರ್ ಜೊತೆ ನಟಿಸಬೇಕು ಎಂಬ ಆಸೆಯನ್ನು ಅಂಚಿಕೊಂಡಿದ್ದಾರೆ.
ರಶ್ಮಿ ಅವರನ್ನು ನಿಮಗೆ ಕನ್ನಡದ ಯಾವ ನಟ ಇಷ್ಟ ಎಂದು ಸಂದರ್ಶನದಲ್ಲಿ ಕೇಳಿದರು. ಇದಕ್ಕೆ ಉತ್ತರವಾಗಿ ಇಬ್ಬರು ನಟರ ಹೆಸರನ್ನು ಹೇಳಿದರು, ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ದುನಿಯಾ ರಶ್ಮಿ ಅವರ ನೆಚ್ಚಿನ ಕನ್ನಡ ನಟ ಯಾರು? ಯಾರ ಜೊತೆ ನಟಿಸಬೇಕು ಎಂಬ ಆಸೆಯನ್ನ ಸಹ ಹೇಳಿದ್ದಾರೆ.
ಧುನಿಯಾ ರಶ್ಮಿ ಆಯ್ಕೆ ಮಾಡಿದ ನಟರು ಕಿಚ್ಚ ಸುದೀಪ್ ಹಾಗು ದರ್ಶನ್ ಅವರನ್ನ ಆಯ್ಕೆ ಮಾಡಿಕೊಂಡರು. ಬಳಿಕ ಒಬ್ಬರನ್ನು ಹೇಳಬೇಕು ಎಂದು ಕೇಳಿದಾಗ ಒಂದು ಹೆಸರು ಆಯ್ಕೆ ಮಾಡಿದರು.ಅವರೇ ನಮ್ಮ ಬಾಕ್ಸ್ ಸುಲ್ತಾನ್ ದರ್ಶನ್ ತೂಗುದೀಪ್.
ಯಾವ ನಟನ ಜೊತೆ ಸ್ಕ್ರೀನ್ ಶೇರ್ ಮಾಡಬೇಕು ಎಂಬ ಆಸೆ ಇದೆ ಎಂದು ಕೇಳಿದ್ದಕ್ಕೆ ದುನಿಯಾ ರಶ್ಮಿ ಹೇಳಿದ್ದು ರಾಕಿಂಗ್ ಸ್ಟಾರ್ ಯಶ್ ಹೆಸರು. ಇನ್ನು ಸ್ಕ್ರಿಪ್ಟ್ ಬಗ್ಗೆ ಹೇಳದೆ ಹೋದರು ಯಾವ ನಟನ ಜೊತೆ ಆಕ್ಟ್ ಮಾಡಲು ಇಷ್ಟಪಡುತ್ತೀರಾ ಎಂದಿದ್ದಕ್ಕೆ ”ದರ್ಶನ್ ಸರ್” ಎಂದು ಮತ್ತೆ ಡಿ ಬಾಸ್ ಗೆ ವೋಟ್ ಹಾಕಿದರು ರಶ್ಮಿ.