ಜ್ಯೋತಿಷ್ಯಶಾಸ್ತ್ರ ಹಾಗೂ ರಾಶಿಫಲ ಪ್ರತಿಯೊಬ್ಬರ ಜೀವನದ ಮೇಲೂ ಮಹತ್ವದ ಪರಿಣಾಮ ಬೀರುತ್ತದೆ. ರಾಶಿ ನೋಡಿಯೇ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಬಹುದು. ಮದುವೆ ಮಾಡುವಾಗ ಕೂಡ ಜಾತಕ ನೋಡಿ ಮದುವೆ ಮಾಡಲಾಗುತ್ತದೆ.
ಜಾತಕದಲ್ಲಿ ಹೊಂದಾಣಿಕೆಯಾದ್ರೆ ಮಾತ್ರ ಮದುವೆಗೆ ಒಪ್ಪಿಗೆ ನೀಡಲಾಗುತ್ತದೆ. ಯಾವ ರಾಶಿಯ ಹುಡುಗಿ ಬೆಸ್ಟ್ ಎಂದು ತಜ್ಞರು ಹೇಳುತ್ತಾರೆ. ಇಂದು ಮೀನ ರಾಶಿಯ ಹುಡುಗಿಯರ ಸ್ವಭಾವದ ಬಗ್ಗೆ ವಿವರ ಇಲ್ಲಿದೆ.
ಮೀನ ರಾಶಿಯ ಹುಡುಗಿಯರು ಆಕರ್ಷಕ ನೋಟ ಹೊಂದಿರುವವರಾಗಿರುತ್ತಾರೆ. ತಮ್ಮದೇ ಆದರ್ಶವನ್ನು ಹುಡುಗಿಯರು ಹೊಂದಿರುತ್ತಾರೆ. ನಿಯಂತ್ರಣದಲ್ಲಿರುವ ಹುಡುಗಿಯರು ಸ್ನೇಹವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಾರೆ.
ಸೌಹಾರ್ದ ಸ್ವಭಾವದ ಹುಡುಗಿಯರು ಮೋಸವನ್ನು ಇಷ್ಟಪಡುವುದಿಲ್ಲ. ಈ ರಾಶಿಯ ಹುಡುಗಿಯರಿಗೆ ಸ್ನೇಹಿತರು ಹೆಚ್ಚಿರುತ್ತಾರೆ. ಪ್ರತಿಯೊಬ್ಬ ಸ್ನೇಹಿತರನ್ನು ಅರ್ಥ ಮಾಡಿಕೊಂಡು ಮುನ್ನಡೆಯುತ್ತಾರೆ ಹುಡುಗಿಯರು.
ಪ್ರದರ್ಶನ ಇಷ್ಟಪಡದ ಹುಡುಗಿಯರು, ಪತಿಗೆ ಪ್ರೀತಿ ನೀಡ್ತಾರೆ. ಎಂದೂ ಸಂಗಾತಿಗೆ ಮೋಸ ಮಾಡುವುದಿಲ್ಲ. ಪರ ಪುರುಷರನ್ನು ನೋಡುವುದಿಲ್ಲ. ರಾಶಿಯ ಹುಡುಗಿಯರು ಸ್ವಾಭಿಮಾನಿಗಳಾಗಿರುತ್ತಾರೆ. ಪತಿಯನ್ನು ಖುಷಿಯಿಂದ ನೋಡಿಕೊಳ್ತಾರೆ.