ಸುದ್ದಿ

ಯುವತಿಯನ್ನುತಾಯಿಯ ಎದುರೆ ರೇಪ್ ಮಾಡಿದ ನಟ…!

By admin

May 16, 2019

ನಟ, ನಿರ್ದೇಶಕನಾಗಿ ಹೆಸರು ಮಾಡಿದ್ದು ಯುವತಿಯೊರ್ವಳನ್ನು ಅತ್ಯಾಚಾರ ಮಾಡುತ್ತಿದ್ದರೂ ಅದನ್ನು ವಿರೋಧಿಸದೇ ಆತನ ವಿಕೃತ ಕಾರ್ಯಕ್ಕೆ ತಾಯಿಯೋರ್ವಳು ಸಹಾಯ ಮಾಡಿರುವ ಹೀನಾಯ ಕೃತ್ಯ ಬೆಂಗಳೂರಿನಲ್ಲಿ ನಡೆದಿದೆ.

ಕಿರುಚಿತ್ರ ನಿರ್ದೇಶಕ, ನಟ ಪಿ ಪ್ರಮೋದ್ ಕುಮಾರ್ ಎಂಬಾತ 21 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಮನೆಗೆ ಕರೆದುಕೊಂಡು ಹೋಗಿ ತಮ್ಮ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಈ ವೇಳೆ ನಟನ ತಾಯಿ ಮನೆಯಲ್ಲಿ ಇದ್ದರೂ ಸಹ ಏನು ಮಾಡದೇ ಸುಮ್ಮನಿದ್ದಾರೆ.

ಈ ಸಂಬಂಧ ಪ್ರಮೋದ್ ಕುಮಾರ್ ಮೊದಲ ಆರೋಪಿಯಾಗಿದ್ದು ಆತನ ತಾಯಿ ಎರಡನೇ ಆರೋಪಿಯಾಗಿದ್ದಾರೆ. ಸದ್ಯ ಪ್ರಮೋದ್ ಕುಮಾರ್ ನನ್ನು ವಿವೇಕ್ ನಗರ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತ ಯುವತಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದು ಆರೋಪಿಯ ಮನೆಯ ಪಕ್ಕದಲ್ಲೇ ಆಕೆ ಸಹ ವಾಸವಾಗಿದ್ದಳು.

ಕಳೆದ ಎರಡು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು ನನ್ನ ಹುಟ್ಟುಹಬ್ಬದ ಪಾರ್ಟಿ ಎಂದು ಪ್ರಮೋದ್ ತನ್ನ ಮನೆಗೆ ಕರೆಸಿಕೊಂಡಿದ್ದು ಈ ವೇಳೆ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.