ಸುದ್ದಿ

ವೋಟ್ ಮಾಡಿ ಎಂದಿದಕ್ಕೆ ಮಂಗಳಾರತಿ ಮಾಡಿಸಿಕೊಂಡ ಮೋಹಕ ತಾರೆ ರಮ್ಯಾ..

By admin

March 14, 2019

ಆಗೊಮ್ಮೆ ಈಗೊಮ್ಮೆ ಸುದ್ದಿಯಾಗುವ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಇದೀಗ ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಅವಕಾಶ ಸಿಕ್ಕಾಗ ತಾವು ಮತದಾನ ಮಾಡದೇ, ಇದೀಗ ಟ್ವಿಟರ್ ನಲ್ಲಿ ಮತದಾನದ ಜಾಗೃತಿ ಮೂಡಿಸಲು ಹೋಗಿ ಟ್ವಿಟ್ಟಿಗರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.

ರಮ್ಯಾ ತಮ್ಮ ಟ್ವಿಟ್ಟರ್ ನಲ್ಲಿ, ‘ಮೊದಲ ಬಾರಿಗೆ ಮತದಾನ ಮಾಡುವ ಯುವ ಮತದಾರರು ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಸೇರಿಸಿಕೊಳ್ಳಿ, ಟೈಂ ಹೋಗ್ತಿದೆ…..ಭವಿಷ್ಯ ನಿಮ್ಮದಾಗಿದೆ’ ಅಂತಾ ಟ್ವೀಟ್ ಮಾಡಿದ್ರು.

ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟ್ಟಿಗರು ರಮ್ಯಾಗೆ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೇರೆಯವರಿಗೆ ವೋಟು ಮಾಡಿ ಅಂತಾ ಹೇಳೋ ಹಕ್ಕು ನಿಮಗಿಲ್ಲ. ಮೊದಲು ನೀವು ಹೋಗಿ ವೋಟ್ ಮಾಡಿ ಅಂತಾ ಕೆಲವರು ಕಮೆಂಟ್ ಮಾಡಿದ್ದಾರೆ.

ಮತ್ತೆ ಕೆಲವರು ಹಿಂದೆ ನಡೆದ ಚುನಾವಣೆಯಲ್ಲಿ ಮತದಾನ ಮಾಡದೆ ತಪ್ಪಿಸಿಕೊಂಡ ರಮ್ಯಾರಿಂದ ಮತದಾನದ ಪಾಠ ಅಂತಾ ವ್ಯಂಗ್ಯವಾಡಿದ್ದಾರೆ. ಮತ್ತೊಂದಿಷ್ಟು ಜನ ದೆಹಲಿ ಬಿಟ್ಟು ಬಂದು ಮೊದಲು ವೋಟ್‍ ಮಾಡ್ರಿ, ಆಮೇಲೆ ಬೇರೆಯವರಿಗೆ ಉಪದೇಶ ಮಾಡಿ ಎಂದು ಟ್ವೀಟ್ ನಲ್ಲಿ ಕಾಲೆಳೆದಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ಮತ್ತು ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ರಮ್ಯಾ ವೋಟ್‍ ಮಾಡಿರಲಿಲ್ಲ. ಹೀಗಾಗಿ ವೋಟ್‍ ಮಾಡಿ ಅಂತಾ ಉಪದೇಶ ಮಾಡಲು ಬಂದ ರಮ್ಯಾ ವಿರುದ್ಧ ಟ್ವಿಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.